ನೋಟ್ ನಿಷೇಧದ ನಂತರ 21 ಸಾವಿರ ಜನರಿಂದ 4,900 ಕೋಟಿ ಕಪ್ಪು ಘೋಷಣೆ

ಕೇಂದ್ರ ಸರ್ಕಾರ 500 ಹಾಗೂ 1,000 ರುಪಾಯಿ ನೋಟ್ ನಿಷೇಧಿಸಿದ ನಂತರ ಪ್ರಧಾನಮಂತ್ರಿ ಗರಿಬ್ ಕಲ್ಯಾಣ ಯೋಜನೆ(ಪಿಎಂಜಿಕೆವೈ)....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಕೇಂದ್ರ ಸರ್ಕಾರ 500 ಹಾಗೂ 1,000 ರುಪಾಯಿ ನೋಟ್ ನಿಷೇಧಿಸಿದ ನಂತರ ಪ್ರಧಾನಮಂತ್ರಿ ಗರಿಬ್ ಕಲ್ಯಾಣ ಯೋಜನೆ(ಪಿಎಂಜಿಕೆವೈ) ಅಡಿ ಒಟ್ಟು 21 ಸಾವಿರ ಜನ 4,900 ಕೋಟಿ ರುಪಾಯಿ ಕಪ್ಪು ಹಣವನ್ನು ಘೋಷಿಸಿಕೊಂಡಿದ್ದಾರೆ ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ.
4,900 ಕೋಟಿ ಕಪ್ಪು ಹಣದಿಂದ ಸರ್ಕಾರ 2,451 ಕೋಟಿ ರುಪಾಯಿ ತೆರಿಗೆ ಸಂಗ್ರಹಿಸಿದೆ ಎಂದು ಆದಾಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಕಳೆದ ಮಾರ್ಚ್ 31ಕ್ಕೆ ಅಂತ್ಯಗೊಂಡ ಪಿಎಂಜಿಕೆವೈ ಯೋಜನೆಯಡಿ ಒಟ್ಟು 21 ಸಾವಿರ ಜನ 4,900 ಕೋಟಿ ರುಪಾಯಿ ಕಪ್ಪು ಹಣ ಘೋಷಿಸಿಕೊಂಡಿದ್ದು, ಇದೇ ಅಂತಿಮ ಅಂಕಿ ಅಂಶ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಕಪ್ಪು ಹಣ ಘೋಷಿಸಿಕೊಂಡ ಕೆಲವು ವ್ಯಕ್ತಿಗಳ ವಿರುದ್ಧ ಕಾನೂನು ಪ್ರಕ್ರಿಯೆ ಆರಂಭಿಸುವುದಾಗಿ ಹೇಳಿದ್ದಾರೆ.
ಗರಿಷ್ಠ ಮೌಲ್ಯದ ನೋಟ್ ನಿಷೇಧದ ನಂತರ ಕೇಂದ್ರ ಸರ್ಕಾರ ಕಳೆದ ಡಿಸೆಂಬರ್ ನಿಂದ ಮಾರ್ಚ್ 31ರವರೆಗೆ ಶೇ.50ರಷ್ಟು ತೆರಿಗೆ ಕಟ್ಟುವ ಮೂಲಕ ಜನ ತಮ್ಮ ಕಪ್ಪು ಹಣವನ್ನು ಘೋಷಿಸಿಕೊಳ್ಳಲು ಅವಕಾಶ ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com