ದಿನಕ್ಕೆ 1 ರೂ. ದರದಲ್ಲಿ ಕಾರ್ಪೊರೇಟ್ ಇ-ಮೇಲ್ ಸೇವೆ ಪ್ರಾರಂಭಿಸಿದ ಬಿಎಸ್ಎನ್ಎಲ್

ಜೈಪುರ ಮೂಲದ ಡಾಟಾ ಇನ್ಫೋಸಿಸ್ ಸಹಭಾಗಿತ್ವದಲ್ಲಿ ಬಿಎಸ್ಎನ್ಎಲ್ ಇಂದಿನಿಂದ ದಿನಕ್ಕೆ 1 ಋಊ. ನಂತೆ ಕಾರ್ಪೊರೇಟ್ ಇ-ಮೇಲ್ ಸೇವೆಯನ್ನು ಪ್ರಾರಂಭಿಸಿದೆ.
ದಿನಕ್ಕೆ 1 ರೂ. ದರದಲ್ಲಿ ಕಾರ್ಪೊರೇಟ್ ಇ-ಮೇಲ್ ಸೇವೆ ಪ್ರಾರಂಭಿಸಿದ ಬಿಎಸ್ಎನ್ಎಲ್
ದಿನಕ್ಕೆ 1 ರೂ. ದರದಲ್ಲಿ ಕಾರ್ಪೊರೇಟ್ ಇ-ಮೇಲ್ ಸೇವೆ ಪ್ರಾರಂಭಿಸಿದ ಬಿಎಸ್ಎನ್ಎಲ್
ನವದೆಹಲಿ: ಜೈಪುರ ಮೂಲದ ಡಾಟಾ ಇನ್ಫೋಸಿಸ್ ಸಹಭಾಗಿತ್ವದಲ್ಲಿ ಬಿಎಸ್ಎನ್ಎಲ್ ಇಂದಿನಿಂದ ದಿನಕ್ಕೆ 1 ಋಊ. ನಂತೆ ಕಾರ್ಪೊರೇಟ್ ಇ-ಮೇಲ್ ಸೇವೆಯನ್ನು ಪ್ರಾರಂಭಿಸಿದೆ. ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ತನ್ನ ಗ್ರಾಹಕರಿಗೆ "ತಮ್ಮ ಡೇಟಾವನ್ನು ಗೌಪ್ಯತೆ ಮತ್ತು ಭದ್ರತೆಗಾಗಿ ಖಾತ್ರಿಪಡಿಸಲು ಇ-ಮೇಲ್ ಸೇವೆಗಳನ್ನು" ಪ್ರಾರಂಭಿಸಿದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಬಿಎಸ್ಎನ್ಎಲ್ ಗ್ರಾಹಕರು ತಮ್ಮ ವೆಬ್ ಸೈಟ್ ಗಳಿಗೆ ವಾರ್ಷಿಕ ಶುಲ್ಕ 365 ರೂ. ನೀಡಿದಲ್ಲಿ ಪ್ರತಿ ಇ-ಮೇಲ್ ಐಡಿಗೆ 1 ಜಿಬಿ ಸ್ಟೋರೇಜ್ ಮತ್ತು  999 ರೂ ಗೆ  ಪ್ರತಿ ಇ-ಮೇಲ್ ಐಡಿಗೆ 10 ಜಿಬಿ ಸ್ಟೋರೇಜ್ ದೊರೆಯಲಿದೆ. "ಒಂದು ವರ್ಷದಲ್ಲಿ ಒಮ್ಮೆ ಪಾವತಿ ಮಾಡಬೇಕಾಗುತ್ತದೆ, ಇ-ಮೇಲೆ ಸೇವೆ ಬೆಲೆ ದಿನಕ್ಕೆ 1 ರೂ. ಇದ್ದು 1 ಜಿಬಿ ಸ್ಟೋರೇಜ್ ದೊರೆಯಲಿದೆ. 10 ಜಿಬಿಗಿಂತ ಹೆಚ್ಚಿನ ಸ್ಟೋರೇಜ್ ಬೇಕಾದವರು ಹೆಚ್ಚುವರಿ 5 ಜಿಬಿ ಸ್ಟೋರೇಜ್ ನ್ನು ವಾರ್ಷಿಕ 500 ರೂ. ನೀಡಿ ಪಡೆದುಕೊಳ್ಳಬಹುದು ಎಂದು ಡಾಟಾ ಇನ್ಫೋಸಿಸ್ ಸಿಇಒ ಅಜಯ್ ಡಾಟಾ ಹೇಳಿದ್ದಾರೆ. ಎಲ್ಲ ಎಂಟರ್ ಪ್ರೈಸ್ ಇ-ಮೇಲ್ ಖಾತೆಗಳು ಸಹ ಭದ್ರತೆ ಪರಿಕರಗಳು ಮತ್ತು ಡ್ಯುಯೆಲ್ ಅಥೆಂಟಿಕೇಟ್ಸ್ ಒಡನೆ ಬರುತ್ತವೆ. ಅದು ಹ್ಯಾಕ್ ಮಾದಲಾಗದ ರೀತಿ ನಿರ್ಬಂದಿತವಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com