ಐಷಾರಾಮಿ ವಾಹನ ಗಳಿಗೆ ಜಿಎಸ್ ಟಿ ತೆರಿಗೆ ಹೊರೆ

ಮಧ್ಯಮ ಗಾತ್ರದ ಕಾರುಗಳು, ಎಸ್ ಯುವಿ ಗಳು ಮತ್ತು ಐಷಾರಾಮಿ ಕಾರುಗಳ ಮೇಲೆ ತೆರಿಗೆ ಹೆಚ್ಚಳವಾಗಿದೆ.
ಐಷಾರಾಮಿ ಕಾರ್
ಐಷಾರಾಮಿ ಕಾರ್
ಚೆನ್ನೈ: ಮಧ್ಯಮ ಗಾತ್ರದ ಕಾರುಗಳು, ಎಸ್ ಯುವಿ ಗಳು ಮತ್ತು ಐಷಾರಾಮಿ ಕಾರುಗಳ ಮೇಲೆ ತೆರಿಗೆ ಹೆಚ್ಚಳವಾಗಿದೆ. ಜಿಎಸ್ ಟಿ ಕೌನ್ಸಿಲ್ ದೊಡ್ಡ ಐಷಾರಾಮಿ ಕಾರುಗಳಿಗೆ ಶೇ.20, ಎಸ್ ಯುವಿ ಗಳಿಗೆ ಶೇ. 22 ಮತ್ತು ಮಧ್ಯಮ ಗಾತ್ರದ ಸೆಡಾನ್ ಗಳಿಗೆ ಶೇ. 15 ದಿಂದ್ ಶೇ.17 ರಷ್ಟು ತೆರಿಗೆ ಹೆಚ್ಚಿಸಿದೆ. 
ಈ ಪ್ರತಿಯೊಂದು ವಿಭಾಗಕ್ಕೂ, ಕೆಲವು ರೀತಿಯ ಪ್ರೀಮಿಯಂ ವಾಹನಗಳ ತೆರಿಗೆಯನ್ನು ಪೇಸ್ಟೀವ್ ಸೀಜನ್  ಮುಂಚೆಯೇ ಹೆಚ್ಚಾಗಲಿದೆ. ಶನಿವಾರ ಹೈದರಾಬಾದ್ ನಲ್ಲಿ ನಡೆದ ಕೌನ್ಸಿಲ್ ಸಭೆಯಲ್ಲಿ ಸಣ್ಣ ಕಾರುಗಳು, 13-ಸೀಟರ್, ಮತ್ತು ಹೈಬ್ರಿಡ್ ವಾಹನಗಳಂತಹ ಕಾರುಗಳಿಗೆ ಈಗಿರುವ ತೆರಿಗೆ ದರಗಳೇ ಮುಂದುವರಿಯಲಿದೆ.
ತೆರಿಗೆ ಹೆಚ್ಚಳಕ್ಕೆ ಪ್ರತಿಕ್ರಿಯಿಸಿದ ಐಷಾರಾಮಿ ವಾಹನ ತಯಾರಕರು ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ, ಉದ್ಯಮ ಮತ್ತು ಆರ್ಥಿಕತೆಗೆ ಕೌನ್ಸಿಲ್ ತಮ್ಮ ಕೊಡುಗೆಗಳನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಅವರು ಅಭಿಪ್ರಾಯಪಟ್ಟರು. 
"ಶೇ.10ರ ತೆರಿಗೆ ಹೆಚ್ಚಳ ದಿಂದಲೂ, ಬೆಲೆಗಳು ಏರಿಕೆಯಾಗುತ್ತವೆ, ಇದು ನಿರಾಶಾದಾಯಕವಾಗಿದೆ. ಖರೀದಿದಾರರ ಭಾವನೆಯ ಮೇಲೆ ಈ ಹೆಚ್ಚಳದ ಪರಿನಾಮವನ್ನು ನಾವು ನೋದಬೇಕಿದೆ ಎಂದು ಆಡಿ ಇಂಡಿಯಾ ಮುಖ್ಯಸ್ಥ ರಹೀಲ್ ಅನ್ಸಾರಿ ಹೇಳಿದ್ದಾರೆ.
ಇದೇ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮರ್ಸಿಡಿಸ್-ಬೆನ್ಝ್ / ಬೆನ್ಜ್ ಇಂಡಿಯಾದ ಎಂ.ಡಿ. ಮತ್ತು ಸಿಇಒ ರೋಲ್ಯಾಂಡ್ ಫೋಲ್ಗರ್, "ಉದ್ಯಮಕ್ಕೆ ಮತ್ತು ಆರ್ಥಿಕತೆಗೆ ನಾವು ನೀಡುತ್ತಿರುವ ಕೊಡುಗೆಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ತೆರಿಗೆ ಹೆಚ್ಚಿಸುವ ನಿರ್ಧಾರ ಇದನ್ನೇ ತೋರಿಸುತ್ತಿದೆ" ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com