ಕಪ್ಪುಹಣ ತಡೆಗೆ ಕ್ರಮ: ಹೆಸರಿಗಷ್ಟೇ ಇರುವ ಸಂಸ್ಥೆಗಳ 1 ಲಕ್ಷ ನಿರ್ದೇಶಕರ ಅನರ್ಹ!

ಕಪ್ಪುಹಣದ ತಡೆಗೆ ಮುಂದಾಗಿರುವ ಕೇಂದ್ರ ಸರ್ಕಾರ ಆ ನಿಟ್ಟಿನಲ್ಲಿ ಹೆಸರಿಗಷ್ಟೇ ಇರುವ ಸಂಸ್ಥೆಗಳ 1.06 ಲಕ್ಷ ನಿರ್ದೇಶಕರನ್ನು ಅನರ್ಹಗೊಳಿಸಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಕಪ್ಪುಹಣದ ತಡೆಗೆ ಮುಂದಾಗಿರುವ ಕೇಂದ್ರ ಸರ್ಕಾರ ಆ ನಿಟ್ಟಿನಲ್ಲಿ ಹೆಸರಿಗಷ್ಟೇ ಇರುವ ಸಂಸ್ಥೆಗಳ 1.06 ಲಕ್ಷ ನಿರ್ದೇಶಕರನ್ನು ಅನರ್ಹಗೊಳಿಸಿದೆ. 
ಇದೇ ವೇಳೆ ದೀರ್ಘಾಕಾಲಾವಧಿಯಿಂದ ಯಾವುದೇ ವ್ಯವಹಾರಗಳನ್ನು ನಡೆಸದಿರುವ 2.09 ಲಕ್ಷ ಸಂಸ್ಥೆಗಳ ನೊಂದಣಿಯನ್ನು ಸಾಂಸ್ಥಿಕ ವ್ಯವಹಾರಗಳ ಸಚಿವಾಲಯ ರದ್ದು ಮಾಡಿದೆ. 
2013ರ ಕಂಪನಿ ಆಕ್ಟ್ ನ 164(2)(ಎ)ರ ಅಡಿಯಲ್ಲಿ ಕಾರ್ಯ ನಿರ್ವಹಿಸದ 1,06,578 ಸಂಸ್ಥೆಗಳ ನಿರ್ದೇಶಕರನ್ನು ಅನರ್ಹಗೊಳಿಸಲಾಗಿದೆ ಎಂಬ ಮಾಹಿತಿಯನ್ನು ಸಚಿವಾಲಯ ಬಿಡುಗಡೆ ಮಾಡಿದೆ. 
ಸೆಕ್ಷನ್ 164ರ ಪ್ರಕಾರ, ಮೂರು ಹಣಕಾಸಿನ ವರ್ಷಗಳಿಂದ ಸಂಸ್ಥೆಯ ಹಣಕಾಸಿನ ಹೇಳಿಕೆಗಳನ್ನು ಅಥವಾ ವಾರ್ಷಿಕ ಆದಾಯ ವರದಿಯನ್ನು ಸಲ್ಲಿಸಲು ವಿಫಲರಾದರೇ ಅಂತಹ ನಿರ್ದೇಶಕ ನಿರಂತರವಾಗಿ  ಅಥವಾ ಐದು ವರ್ಷಗಳಲ್ಲಿ ಯಾವುದೇ ಸಂಸ್ಥೆಯಲ್ಲಿ ಮರು ನೇಮಕಾತಿಗೆ ಅರ್ಹರಾಗುವುದಿಲ್ಲ ಎಂದಿದೆ. ಅದರ ಪ್ರಕಾರ ಸಾಂಸ್ಥಿಕ ವ್ಯವಹಾರಗಳ ಸಚಿವಾಲಯ ಈ ಕ್ರಮಕ್ಕೆ ಮುಂದಾಗಿದೆ. 
ಅದೇ ರೀತಿ ಸಾಂಸ್ಥಿಕ ವ್ಯವಹಾರಗಳ ಸಚಿವಾಲಯ ಸಂಸ್ಥೆಯ ನೊಂದಣಿ(ಆರ್ಒಸಿಎಸ್) ಅಡಿಯಲ್ಲಿ 2.09 ಸಂಸ್ಥೆಗಳ ಡಾಟಾವನ್ನು ಪರಿಶೀಲನೆ ನಡೆಸಿ ಆ ಸಂಸ್ಥೆಗಳ ನೊಂದಣಿಯನ್ನು ರದ್ದು ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com