ಉದ್ಯೋಗಿಗಳಿಗೆ ಸಿಹಿ ಸುದ್ದಿ: ತೆರಿಗೆ ರಹಿತ ಗ್ರ್ಯಾಚುಟಿ ಮಿತಿ 20 ಲಕ್ಷಕ್ಕೆ ಏರಿಕೆ

ಉದ್ಯೋಗಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ತೆರಿಗೆ ರಹಿತ ಗ್ರ್ಯಾಚುಟಿ ಮೊತ್ತವನ್ನು 20 ಲಕ್ಷಕ್ಕೆ ಏರಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಆ ಮೂಲಕ ಉದ್ಯೋಗಿಗಳಿಗೆ ಬಂಪರ್ ಕೊಡುಗೆ ನೀಡಿದೆ.
ತೆರಿಗೆ ರಹಿತ ಗ್ರ್ಯಾಚುಟಿ ಮಿತಿ 20 ಲಕ್ಷಕ್ಕೆ ಏರಿಕೆ
ತೆರಿಗೆ ರಹಿತ ಗ್ರ್ಯಾಚುಟಿ ಮಿತಿ 20 ಲಕ್ಷಕ್ಕೆ ಏರಿಕೆ
ನವದೆಹಲಿ: ಉದ್ಯೋಗಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ತೆರಿಗೆ ರಹಿತ ಗ್ರ್ಯಾಚುಟಿ ಮೊತ್ತವನ್ನು 20  ಲಕ್ಷಕ್ಕೆ ಏರಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಆ ಮೂಲಕ ಉದ್ಯೋಗಿಗಳಿಗೆ ಬಂಪರ್ ಕೊಡುಗೆ ನೀಡಿದೆ.
"ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಂಪುಟ ಪೇಮಂಟ್ ಆಫ್ ಗ್ರ್ಯಾಚುಟಿ (ತಿದ್ದುಪಡಿ) ಮಸೂದೆ, 2017 ಅನ್ನು ಸಂಸತ್ ನಲ್ಲಿ ಮಂಡಿಸಲು ಒಪ್ಪಿಗೆ ನೀಡಿದೆ" ಎಂದು ಮೂಲಗಳು ತಿಳಿಸಿದೆ.
ಈ ತಿದ್ದುಪಡಿ ಮೂಲಕ ಖಾಸಗಿ, ಸಾರ್ವಜನಿಕ ಸ್ವಾಮ್ಯದ ಮತ್ತು ಸ್ವಾಯತ್ತ ಸಂಸ್ಥೆಗಳ ನೌಕರರಿಗೆ ಅನ್ವಯಿಸಲಿದೆ, ಗ್ರ್ಯಾಚುಟಿ ಗರಿಷ್ಠ ಮಿತಿ 20 ಲಕ್ಷಕ್ಕೆ ಏರಿಕೆಯಾಗಲಿದೆ. ಸದ್ಯಕ್ಕೆ ಈ ಮಿತಿ 10 ಲಕ್ಷ ರೂ. ಇದೆ. ಜನವರಿ 1, 2016ರಿಂದ ಈ ನಿಯಮ ಜಾರಿ ಆಗಲಿದೆ.
ಪೇಮಂಟ್ ಆಫ್ ಗ್ರ್ಯಾಚುಟಿ ಕಾಯ್ದೆ 1972ರ ಅಡಿ ಬರುವ ಎಲ್ಲ ಉದ್ಯೋಗಿಗಳಿಗೂ ಇದು ಅನ್ವಯ ಆಗಲಿದೆ. ಹತ್ತು ಮತ್ತು ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳಿರುವ ಸಂಸ್ಥೆಗಳಿಗೆ ಈ ನಿಯಮ ಅನ್ವಯವಾಗಲಿದೆ.
ನಿವೃತ್ತಿ ನಂತರ ಉದ್ಯೋಗಿಗಳಿಗೆ ಸಾಮಾಜಿಕ ಭದ್ರತೆ ದೊರೆಯಬೇಕು ಎಂಬ ಕಾರಣಕ್ಕೆ ಕಾಯ್ದೆ ಜಾರಿಯಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com