ಬಿಟ್ ಕಾಯಿನ್ ಬದಲು ಕ್ರಿಪ್ಟೋಕರೆನ್ಸಿ ಯತ್ತ ಆರ್ ಬಿಐ ಒಲವು

ಕ್ರಿಪ್ಟೋಕರೆನ್ಸಿಯನ್ನು ಕಾನೂನು ಮಾನ್ಯ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ ನ ತಂಡವೊಂದು ಚಿಂತನೆ ನಡೆಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
ಮುಂಬೈ: ಕ್ರಿಪ್ಟೋಕರೆನ್ಸಿಯನ್ನು ಕಾನೂನು ಮಾನ್ಯ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ ನ ತಂಡವೊಂದು ಚಿಂತನೆ ನಡೆಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 
ಜಾಗತಿಕ ಮಟ್ಟದ ನಿಯಂತ್ರಣ ಸಂಸ್ಥೆಗಳು ಬಿಟ್ ಕಾಯಿನ್ ಬಗ್ಗೆ ಮತ್ತಷ್ಟು ಪರಿಶೀಲನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಬಿಟ್ ಕಾಯಿನ್ ನ ಬದಲು ಕ್ರಿಪ್ಟೋಕರೆನ್ಸಿಯತ್ತ ಆರ್ ಬಿಐ ಹೆಚ್ಚಿನ ಒಲವು ಹೊಂದಿದೆ ಎಂದು ತಿಳಿದುಬಂದಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಡಿಜಿಟಲ್ ಕರೆನ್ಸಿಯನ್ನು ಚಲಾವಣೆಗೆ ತಂದ ನಂತರ ಸೈಬರ್ ಸ್ಪೇಸ್ ನಲ್ಲಿ ಹಣವನ್ನು ಕೊಂಡೊಯ್ಯಬಹುದು, ನಗದನ್ನು ಕಿಸೆಯಲ್ಲಿಟ್ಟುಕೊಂಡು ತಿರುಗುವ ಅಗತ್ಯವಿರುವುದಿಲ್ಲ ಎಂದು ಆರ್ ಬಿಐನ ಕಾರ್ಯನಿರ್ವಾಹಕ ನಿರ್ದೇಶಕ ಸುದರ್ಶನ್ ಸೇನ್ ಮುಂಬೈ ನಲ್ಲಿ ನಡೆದ ಫಿನ್ ಟೆಕ್ ಕಾನ್ಫರೆನ್ಸ್ ನಲ್ಲಿ ಹೇಳಿದ್ದಾರೆ. 
ಆರ್ ಬಿಐ ಕ್ರಿಪ್ಟೋಕರೆನ್ಸಿಯ ಬಗ್ಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಿದೆಯೋ ಅಥವಾ ಈ ಪ್ರಸ್ತಾವನೆ ಈಗಾಗಲೇ ಮುಂದುವರಿದ ಹಂತದಲ್ಲಿದೆಯೋ ಎಂಬ ಬಗ್ಗೆ ಈ ವರೆಗೂ ಅನುಮಾನಗಳಿತ್ತು. ಆದರೆ ಈಗ ಕ್ರಿಪ್ಟೋಕರೆನ್ಸಿಯನ್ನು ಕಾನೂನು ಮಾನ್ಯ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ ಉತ್ಸುಕವಾಗಿದೆ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com