ಖಾಸಗಿ ಸಂಸ್ಥೆಯಾಗಲು ಹೊರಟ ಟಾಟಾ ಸನ್ಸ್

ಟಾಟಾ ಸಮೂಹದ ಪ್ರಮುಖ ಉದ್ದಿಮೆ, ಟಾಟಾ ಸನ್ಸ್ ಪಬ್ಲಿಕ್‌ ಲಿಮಿಟಿಡ್‌, ಸಾರ್ವಜನಿಕ ಸಂಸ್ಥೆಯಾಗಿದ್ದು ಈಗ ಮತ್ತೆ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯಾಗಿ ಬದಲಾಗಲು ಹೊರಟಿದೆ
ಖಾಸಗಿ ಸಂಸ್ಥೆಯಾಗಲು ಹೊರಟ ಟಾಟಾ ಸನ್ಸ್
ಖಾಸಗಿ ಸಂಸ್ಥೆಯಾಗಲು ಹೊರಟ ಟಾಟಾ ಸನ್ಸ್
ಮುಂಬೈ: ಟಾಟಾ ಸಮೂಹದ ಪ್ರಮುಖ ಉದ್ದಿಮೆ,  ಟಾಟಾ ಸನ್ಸ್ ಪಬ್ಲಿಕ್‌ ಲಿಮಿಟಿಡ್‌, ಸಾರ್ವಜನಿಕ ಸಂಸ್ಥೆಯಾಗಿದ್ದು ಈಗ  ಮತ್ತೆ  ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯಾಗಿ ಬದಲಾಗಲು ಹೊರಟಿದೆ. ಟಾಟಾ ಸನ್ಸ್ ಲಿಮಿಟೆಡ್ ತನ್ನ ಹೆಸರನ್ನು ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್ ಎಂದು ಬದಲಿಸಲು ಉದ್ದೇಶಿಸಿದೆ.
ಸೆ.21ರಂದು ನಡೆಯಲಿರುವ ಸಂಸ್ಥೆಯ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ (ಎಜಿಎಂ) ಷೇರುದಾರರು ವಿಶೇಷ ಗೊತ್ತುವಳಿ ಅಂಗೀಕರಿಸಿ ಇದಕ್ಕೆ ಅಂಗೀಕಾರ ನೀಡಬೇಕು ಎಂದು ಮನವಿಯಲ್ಲಿ ಕೇಳಲಾಗಿದೆ.
ಸಂಸ್ಥೆಯ ಸ್ಥಾನ ಮಾನ, ಸ್ವರೂಪ  ಬದಲಿಸಲು ‘ಎಜಿಎಂ’ನಲ್ಲಿ ವಿಶೇಷ ಗೊತ್ತುವಳಿ ಅಂಗೀಕಾರ ಆಗಬೇಕಾಗಿದೆ. ಶೇ 75ರಷ್ಟು ಷೇರುದಾರರು ಇದಕ್ಕೆ ಸಮ್ಮತಿಯನ್ನೂ ನೀಡಬೇಕಾಗಿದೆ. ಜತೆಗೆ, ರಾಷ್ಟ್ರೀಯ ಕಂಪೆನಿ ಕಾಯ್ದೆ ನ್ಯಾಯಮಂಡಳಿಯು (ಎನ್‌ಸಿಎಲ್‌ಟಿ) ಈ ಪ್ರಸ್ತಾವವನ್ನು ಅನುಮೋದಿಸಬೇಕಾಗಿದೆ.
ಸಂಸ್ಥೆಯ ಈ ಪ್ರಸ್ತಾವಕ್ಕೆ ಸೈರಸ್‌ ಮಿಸ್ತ್ರಿ ಕುಟುಂಬದ ಆಕ್ಷೇಪಣೆ ಮಾಡಿದೆ. ಸಂಸ್ಥೆಯಲ್ಲಿ ಇರುವ ಕಡಿಮೆ ಪ್ರಮಾಣದ ಷೇರುದಾರರನ್ನು ಬಹುಸಂಖ್ಯಾತ ಷೇರುದಾರರು ತುಳಿಯುವ ಪ್ರಯತ್ನ ಇದು. ಇದರಿಂದ ಸಂಸ್ಥೆಯ ಷೇರುಗಳನ್ನು ಮುಕ್ತವಾಗಿ ಬದಲಾಯಿಸುವುದರ ಮೇಲೆ ನಿರ್ಬಂಧ ವಿಧಿಸಲು ಅವಕಾಶವಾಗಲಿದೆ ಎಂದು ಸೈರಸ್‌ ಮಿಸ್ತ್ರಿ ಕುಟುಂಬ , ಟಾಟಾ ಸನ್ಸ್‌ನ ನಿರ್ದೇಶಕ ಮಂಡಳಿಗೆ ಪತ್ರ ಬರೆದು ತನ್ನ ಆಕ್ಷೇಪ ದಾಖಲಿಸಿದೆ.
ಉದ್ದೇಶಿತ ಎಜಿಎಂ ದುರುದ್ದೇಶದಿಂದ ಕೂಡಿದ್ದು ಅಲ್ಲಿ ಅಂಗೀಕರಿಸಲ್ಪಡುವ ಗೊತ್ತುವಳಿ ಸನ್ಸ್‌ನ ಹಿತಾಸಕ್ತಿ ರಕ್ಷಣೆಗೆ ಪೂರಕವಾಗಿಲ್ಲ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.
ಟಾಟಾ ಸನ್ಸ್‌ನಲ್ಲಿ ಪಾಲು ಬಂಡವಾಳ ವಿವರ ಹೀಗಿದೆ -  ಟಾಟಾ ಟ್ರಸ್ಟ್‌  ಶೇ.66, ಶಪೂರ್ಜಿ ಪಲ್ಲೊಂಜಿ ಕುಟುಂಬ  ಶೇ.18.4, ಮತ್ತು ಟಾಟಾ ಕುಟುಂಬ, ಕೆಲ ಸಮೂಹ ಸಂಸ್ಥೆಗಳು ಮತ್ತು ವ್ಯಕ್ತಿಗಳು ಶೇ.15.6.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com