ಎಸ್ ಬಿಐಯ ಆರು ಅಂಗಸಂಸ್ಥೆ ಬ್ಯಾಂಕುಗಳ ಚೆಕ್ ಬುಕ್ ಸೆ.30ರಿಂದ ಅಮಾನ್ಯ

ತನ್ನ ಆರು ಅಂಗಸಂಸ್ಥೆ ಬ್ಯಾಂಕುಗಳಲ್ಲಿ ಖಾತೆಗಳನ್ನು ಹೊಂದಿರುವ ಗ್ರಾಹಕರಿಗೆ ಐಎಫ್ಎಸ್ ಕೋಡ್ (ಇಂಡಿಯನ್ ಫೈನಾನ್ಷಿಯಲ್ ಸಿಸ್ಟಮ್ ) ಜೊತೆಗೆ ...
ಸ್ಟೇಟ್ ಬ್ಯಾಂಕ್
ಸ್ಟೇಟ್ ಬ್ಯಾಂಕ್
ನವದೆಹಲಿ:ತನ್ನ ಆರು ಅಂಗಸಂಸ್ಥೆ ಬ್ಯಾಂಕುಗಳಲ್ಲಿ ಖಾತೆಗಳನ್ನು ಹೊಂದಿರುವ ಗ್ರಾಹಕರಿಗೆ ಐಎಫ್ಎಸ್ ಕೋಡ್ (ಇಂಡಿಯನ್ ಫೈನಾನ್ಷಿಯಲ್ ಸಿಸ್ಟಮ್ ) ಜೊತೆಗೆ ಹೊಸ ಚೆಕ್ ಪುಸ್ತಕಗಳನ್ನು ನೀಡಲಾಗುವುದು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ.
ಈ ಕುರಿತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಟ್ವಿಟ್ಟರ್ ಪುಟದಲ್ಲಿ ಟ್ವೀಟ್ ಮಾಡಲಾಗಿದ್ದು, ಶೀಘ್ರವೇ ಗ್ರಾಹಕರು ಹೊಸ ಚೆಕ್ ಬುಕ್ ಗೆ ಅರ್ಜಿ ಸಲ್ಲಿಸುವಂತೆ ತಿಳಿಸಿದೆ.
ಈ ನಿಯಮ ಭಾರತೀಯ ಮಹಿಳಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲ, ಸ್ಟೇಟ್ ಬ್ಯಾಂಕ್ ಆಫ್ ಬಿಕನೇರ್ ಮತ್ತು ಜೈಪುರ್, ಸ್ಟೇಟ್ ಬ್ಯಾಂಕ್ ಆಫ್ ರಾಯ್ ಪುರ್, ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೂರು ಮತ್ತು ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಗೆ ಅನ್ವಯವಾಗಲಿದೆ. 
ಈ ಆರು ಬ್ಯಾಂಕುಗಳ ಚೆಕ್ ಬುಕ್ ಗಳು ಮತ್ತು ಐಎಫ್ಎಸ್ ಕೋಡ್ ಗಳು ಈ ತಿಂಗಳ 30ರಿಂದ ಅಮೌಲ್ಯವಾಗುತ್ತದೆ ಎಂದು ದೇಶದ ಅತಿ ದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com