ಕನಿಷ್ಠ ಠೇವಣಿ ಕಡಿತಗೊಳಿಸಿದ ಎಸ್ ಬಿಐ, ಪಿಂಚಣಿದಾರರಿಗೆ, ಅಪ್ರಾಪ್ತರಿಗೆ ವಿನಾಯ್ತಿ

ಸಾರ್ವಜನಿಕ ವಲಯದ ದೇಶದ ಅತಿ ದೊಡ್ಡ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್ ಗ್ರಾಹಕರಿಗೊಂದು ಸಿಹಿ ಸುದ್ದಿ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮುಂಬೈ: ಸಾರ್ವಜನಿಕ ವಲಯದ ದೇಶದ ಅತಿ ದೊಡ್ಡ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್ ಗ್ರಾಹಕರಿಗೊಂದು ಸಿಹಿ ಸುದ್ದಿ. ಉಳಿತಾಯ ಖಾತೆಯ ತಿಂಗಳ ಕನಿಷ್ಠ ಠೇವಣಿ ಮೊತ್ತವನ್ನು 5 ಸಾವಿರದಿಂದ 3 ಸಾವಿರ ರುಪಾಯಿಗೆ ಕಡಿತಗೊಳಿಸಿದೆ. ಅಲ್ಲದೆ ಕನಿಷ್ಠ ಠೇವಣಿ ಉಳಿಸಿಕೊಳ್ಳದ ಖಾತೆದಾರರಿಗೆ ವಿಧಿಸುವ ದಂಡವನ್ನು ಕಡಿತಗೊಳಿಸಿದೆ.
ಪರಿಷ್ಕೃತ ತಿಂಗಳ ಕನಿಷ್ಠ ಠೇವಣಿ ಮೊತ್ತ ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ ಎಂದು ಎಸ್ ಬಿಐ ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಪಿಂಚಣಿದಾರರ ಮತ್ತು ಅಪ್ರಾಪ್ತರ ಉಳಿತಾಯ ಖಾತೆಗೆ ವಿನಾಯ್ತಿ ನೀಡಲು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ನಿರ್ಧರಿಸಿದ್ದು, ಇವರು ಶೂನ್ಯ ಠೇವಣಿ ಕಾಯ್ದುಕೊಂಡರೂ ಯಾವುದೇ ದಂಡ ಇಲ್ಲ.
ಕಳೆದ ಏಪ್ರಿಲ್ ನಿಂದ ಭಾರತೀಯ ಸ್ಟೇಟ್ ಬ್ಯಾಂಕ್ ಉಳಿತಾಯ ಖಾತೆಗೆ ಕನಿಷ್ಠ ಠೇವಣಿ ನಿಗದಿ ಮಾಡಿ, ಅದನ್ನು ಪಾಲಿಸದ ಗ್ರಾಹಕರಿಗೆ ದಂಡ ವಿಧಿಸುತ್ತಿದೆ. ಈ ಮುಂಚೆ ಮೆಟ್ರೊಪೊಲಿಟನ್ ನಗರಗಳಲ್ಲಿ 5 ಸಾವಿರ, ನಗರ ಪ್ರದೇಶಗಳಲ್ಲಿ 3 ಸಾವಿರ, ಇತರೆ ಉಪ ನಗರ ಪ್ರದೇಶಗಳಲ್ಲಿ 2 ಸಾವಿರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 1 ಸಾವಿರ ರುಪಾಯಿ ಕನಿಷ್ಠ ಠೇವಣಿ ನಿಗದಿ ಮಾಡಿತ್ತು. ಈಗ ಮೆಟ್ರೊಪೊಲಿಟನ್ ಮತ್ತು ನಗರ ಪ್ರದೇಶ ಎರಡಕ್ಕೂ 3 ಸಾವಿರ ರುಪಾಯಿ ಕನಿಷ್ಠ ಠೇವಣಿ ನಿಗದಿ ಮಾಡಲಾಗಿದ್ದು, ಉಳಿದಂತೆ ಉಪನಗರದಲ್ಲಿ 2 ಸಾವಿರ ಹಾಗೂ ಗ್ರಾಮೀಣ ಪ್ರದೇಶದಲ್ಲಿ  1 ಸಾವಿರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com