ದೇಶದ ಇ-ವಾಹನ ತಯಾರಿಕಾ ಕ್ಷೇತ್ರಕ್ಕೆ ಟಾಟಾ ಮೋಟಾರ್ಸ್ ಸಾರಥ್ಯ

ಟಾಟಾ ಮೋಟಾರ್ಸ್ ಭಾರತದಲ್ಲಿ ವಿದ್ಯುತ್ ಚಾಲಿತ ವಾಹನ ತಯಾರಿಕೆಗೆ ದೇಶದಲ್ಲೇ ಅತಿದೊಡ್ದ ಆರ್ಡರ್ ನ್ನು ಪಡೆದಿದೆ.
ಟಾಟಾ ಮೋಟರ್ಸ್
ಟಾಟಾ ಮೋಟರ್ಸ್
ಚೆನ್ನೈ: ಟಾಟಾ ಮೋಟಾರ್ಸ್ ಭಾರತದಲ್ಲಿ ವಿದ್ಯುತ್ ಚಾಲಿತ ವಾಹನ ತಯಾರಿಕೆಗೆ  ದೇಶದಲ್ಲೇ ಅತಿದೊಡ್ದ  ಆರ್ಡರ್ ನ್ನು ಪಡೆದಿದೆ. ಟಾಟಾ,  ಸ್ಟೇಟರ್ನ್ ಇಇಎಸ್ಎಲ್ ಸಂಸ್ಥೆ ಗೆ 10,000  ಎಲೆಕ್ಟ್ರಿಕಲ್ ವಾಹನಗಳನ್ನು ಸರಬರಾಜು ಮಾದಲಿದೆ ಎಂದು ಮೂಲಗಳು ತಿಳಿಸಿವೆ. 
ಪೈಪೋಟಿಯಿಂದ ಕೂಡಿದ್ದ ಬಿಡ್ಡಿಂಗ್ ಪ್ರಕ್ರಿಯೆಯ ನಂತರ ಎದುರಾಳಿಗಳಾದ ಮಹೀಂದ್ರಾ ಅಂಡ್ ಮಹೀಂದ್ರಾ ಮತ್ತು ನಿಸಾನ್ ಸೇರಿದಂತೆ ಹಲವು ಸಂಸ್ಥೆಗಳನ್ನು ಹಿಂದಿಕ್ಕಿ ಟಾಟಾ ವಾಹನ ತಯಾರಿಕೆಗೆ ಟೆಂಡರ್ ನ್ನು ಪಡೆದುಕೊಂಡಿದೆ.
ಟಾಟಾ ಮೋಟರ್ಸ್ ವಿದ್ಯುತ್ ಚಾಲಿತ ವಾಹನಗಳನ್ನು (ಇವಿಗಳು) ಎರಡು ಹಂತಗಳಲ್ಲಿ ಪೂರೈಸಲಿದೆ ಎಂದು ಹೇಳಲಾಗಿದ್ದು ಮೊದಲ ಹಂತದಲ್ಲಿ 500 ಇ-ಕಾರುಗಳನ್ನು ನವೆಂಬರ್ 2017 ರಲ್ಲಿ ವಿತರಿಸಲಾಗುವುದು. ಉಳಿದವು ಎರಡನೇ ಹಂತದ ಭಾಗವಾಗಲಿದೆ. 
ಇಇಎಸ್ಎಎಲ್ ನಿಂದ ಬಿಡುಗಡೆಯಾದ ಟೆಂಡರ್ ವಿಶ್ವದ ಅತಿದೊಡ್ಡ ವಿದ್ಯುತ್ ವಾಹನ ಸಂಗ್ರಹದ ಟೆಂಡರ್ ಆಗಿದೆ. ಟಾಟಾ ಮೋಟಾರ್ಸ್ ಲಿಮಿಟೆಡ್, ಮಹೀಂದ್ರಾ ಅಂಡ್ ಮಹೀಂದ್ರಾ, ನಿಸಾನ್ ಗಳು ಬಿಡ್ಡಿಂಗ್ ನಲ್ಲಿ ಭಾಗವಹಿಸಿದ್ದವು.
ಪೈಪೋಟಿಯಿಂದ ಕೂಡಿದ್ದ ಹರಾಜಿನಲ್ಲಿ 10,16 ಲಕ್ಷ ರೂ.ಗಳ ಕಡಿಮೆ ಮೊತ್ತವನ್ನು ಟಾಟಾ ಮೋಟಾರ್ಸ್ ಕೋಟ್ ಮಾಡಿತ್ತು. ಟಾಟಾ ಸಂಸ್ಥೆ ಇಇಎಸ್ ಎಲ್ ಗೆ ರೂ. 11.2 ಲಕ್ಷಕ್ಕೆ ಇ-ವಾಹನವನ್ನು  ನೀಡಲಾಗುವುದು. ಇದು ಜಿಎಸ್ಟಿ ಮತ್ತು ಐದು ವರ್ಷ ಖಾತರಿ ವಾರಂಟಿಯನ್ನು ಒಳಗೊಂಡಿರುತ್ತದೆ. ಇದೇ ಬಗೆಯ ಇ-ವಾಹನಗಳು, ಮೂರು ವರ್ಷದ ವಾರಂಟಿ ಇರುವ ಕಾರ್ ಗೆ ಹೋಲಿಸಿದರೆ ತಾತಾ ವಾಹನ ಪ್ರಸ್ತುತ ರಿಟೇಲ್ ದರಕ್ಕಿಂತಲೂ ಶೇ. 25 ರಷ್ಟು ಕಡಿಮೆ ಇರಲಿದೆ.
ಮುಂದಿನ ದಶಕದಲ್ಲಿ ಭಾರತದ ಎಲೆಕ್ಟ್ರಿಸಸ್ ವಾಹನ ಮಾರುಕಟ್ಟೆ ಅದ್ಭುತ ಬೆಳವಣಿಗೆಯನ್ನು ಹೊಂದಲಿದೆ. ಇದರಿಂದ ದೇಶದಲ್ಲಿ ಗಣನೀಯ ಪ್ರಮಾಣದ ಇಂಧನ ಉಳಿತಾಯವಾಗುತ್ತದೆ.ಇತ್ತೀಚಿನ ನೀತಿ ಆಯೋಗದ ವರದಿ ಭಾರತದ ಪ್ರಯಾಣಿಕರ ಚಲನಶೀಲತೆಯನ್ನು ಸಾಬೀತುಪಡಿಸಿದೆ.
ವಿದ್ಯುತ್,ಚಾಲಿತ ಸಂಪರ್ಕ ವ್ಯವಸ್ಥೆಯು 2030ರ ವೇಳೆಗೆ ಭಾರತದಲ್ಲಿ ಇಂಧನ ಬೇಡಿಕೆಯನ್ನು ಶೇ.64 ಮತ್ತು ಇಂಗಾಲ ಹೊರಸೂಸುವಿಕೆಯನ್ನು ಶೇ.37 ರಷ್ಟು ಕಡಿಮೆ ಮಾದಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com