ಎಲ್ ಪಿ ಜಿ ಸಿಲಿಂಡರ್ ದರ 1.50 ರೂ ಏರಿಕೆ, ಜೆಟ್ ಇಂಧನ ಶೇ.6 ರಷ್ಟು ಏರಿಕೆ

ಅಡುಗೆ ಅನಿಲ ಸಿಲಿಂಡರ್(ಎಲ್ ಪಿಜಿ) ದರ 1.50 ರೂಪಾಯಿ ಏರಿಕೆಯಾಗಿದ್ದು, ಒಂದು ತಿಂಗಳ ಅಂತರದಲ್ಲಿ ಒಟ್ಟು 8 ರೂಪಾಯಿ ಏರಿಕೆಯಾಗಿದೆ.
ಅಡುಗೆ ಅನಿಲ
ಅಡುಗೆ ಅನಿಲ
ನವದೆಹಲಿ: ಅಡುಗೆ ಅನಿಲ ಸಿಲಿಂಡರ್(ಎಲ್ ಪಿಜಿ) ದರ 1.50 ರೂಪಾಯಿ ಏರಿಕೆಯಾಗಿದ್ದು, ಒಂದು ತಿಂಗಳ ಅಂತರದಲ್ಲಿ ಒಟ್ಟು 8 ರೂಪಾಯಿ ಏರಿಕೆಯಾಗಿದೆ. 
ಈ ಹಿಂದೆ ಸೆಪ್ಟೆಂಬರ್ 1 ರಂದು ಎಲ್ ಪಿಜಿ ದರ 7 ರೂಪಾಯಿ ಏರಿಕೆಯಾಗಿತ್ತು. ಪ್ರತಿ ತಿಂಗಳು ಅಡುಗೆ ಅನಿಲ ದರವನ್ನು 4 ರೂಪಾಯಿ ಏರಿಕೆ ಮಾಡಲು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಪ್ರತಿ ತಿಂಗಳು ಸಿಲಿಂಡರ್ ದರ ಏರಿಕೆಯಾಗುತ್ತಿದೆ. 
ಪರಿಷ್ಕೃತ ದರದ ಪ್ರಕಾರ ದೆಹಲಿಯಲ್ಲಿ ಸಬ್ಸಿಡಿ ಸಿಲಿಂಡರ್ ದರ ಪ್ರತಿ  14.2 ಕೆಜಿಗೆ 488.68 ರೂಪಾಯಿಯಾಗಲಿದೆ ಎಂದು ಐಒಸಿ ಹೇಳಿದೆ. 
ಇದೇ ವೇಳೆ ಜೆಟ್ ಇಂಧನ ದರದಲ್ಲಿಯೂ ಶೇ.6 ರಷ್ಟು ಏರಿಕೆಯಾಗಿದ್ದು ಏವಿಯೇಷನ್ ಟರ್ಬೈನ್ ಇಂಧನಕ್ಕೆ ಪ್ರತಿ ಲೀಟರ್ ಗೆ 53,045 ರೂಪಾಯಿ ವೆಚ್ಚವಾಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com