ಜಾಹಿರಾತುಗಳಲ್ಲಿ ಪಗ್ಸ್ ನಾಯಿಗಳನ್ನು ಬಳಸುವುದನ್ನು ನಿಲ್ಲಿಸಿ: ವೊಡಫೋನ್ ಕಂಪೆನಿಗೆ ಪೇಟಾ ಒತ್ತಾಯ

ಜಾಹಿರಾತುಗಳಲ್ಲಿ ಡ್ವಾರ್ಫ್ ತಳಿಯ ಪಗ್ಲ್ ನಾಯಿಗಳನ್ನು ಬಳಸುವುದನ್ನು ನಿಲ್ಲಿಸಬೇಕು ಎಂದು ಟೆಲಿಕಾಂ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಜಾಹಿರಾತುಗಳಲ್ಲಿ ಡ್ವಾರ್ಫ್ ತಳಿಯ ಪಗ್ಲ್ ನಾಯಿಗಳನ್ನು ಬಳಸುವುದನ್ನು ನಿಲ್ಲಿಸಬೇಕು ಎಂದು ಟೆಲಿಕಾಂ ಕಂಪೆನಿ ವೊಡಫೋನ್ ಪ್ರಾಣಿ ಅಭಿವೃದ್ಧಿ ಸಂಘಟನೆ ಪೇಟಾ ಮನವಿ ಮಾಡಿದೆ. ಈ ನಾಯಿಗಳು ಸಾಮಾನ್ಯ ತಳಿಯ ನಾಯಿಗಳಂತಿರುವುದಿಲ್ಲ ಎಂದು ಪೇಟಾದ ಅಭಿಪ್ರಾಯವಾಗಿದೆ.

ವೊಡಫೋನ್ ಇಂಡಿಯಾ ಕಂಪೆನಿಗೆ ಪತ್ರ ಬರೆದಿರುವ ಪೇಟಾ, ಪಗ್ಸ್ ಗಳು ತಳೀಯವಾಗಿ ಅತ್ಯಂತ ಸೂಕ್ಷ್ಮ ಜಾತಿಯ ನಾಯಿಗಳಾಗಿದ್ದು, ವಿಶಿಷ್ಟವಾಗಿ ನೋಡಲು ಸುಂದರವಾಗಿರುತ್ತದೆ. ಆದರೆ ಜಾಹಿರಾತುಗಳಲ್ಲಿ ಅವುಗಳನ್ನು ಬಳಸಿಕೊಳ್ಳುವುದರಿಂದ ಈ ಜಾತಿಯ ನಾಯಿಗಳಿಗೆ ನೋವುಂಟಾಗುವುದಲ್ಲದೆ ಅವುಗಳ ಉಸಿರಾಟಕ್ಕೆ ಕೂಡ ತೊಂದರೆಯಾಗುತ್ತದೆ ಎಂದು ವಿವರಿಸಿದೆ.

ಇತ್ತೀಚಿನ ವೊಡಫೋನ್ ಜಾಹಿರಾತಿನಲ್ಲಿ 30 ಪಗ್ಸ್ ಗಳನ್ನು ಬಳಸಲಾಗಿತ್ತು.
ಈ ನಾಯಿಗಳು ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿವೆ. ವಾಣಿಜ್ಯ ಬಳಕೆಗೆ ಬಳಸುವವರ ಸಂಖ್ಯೆ ಅಧಿಕವಾಗುತ್ತಿದೆ. ಸೂಕ್ಷ್ಮ ತಳಿಯ ಈ ನಾಯಿಗಳನ್ನು ಶೂಟಿಂಗ್ ಗೆ ಬಳಸಿಕೊಂಡರೆ ಅಲ್ಲಿನ ಗದ್ದಲ, ಭಾರೀ ಸದ್ದು, ಕ್ಯಾಮರಾ ಮತ್ತು ಹಲವು ಬಾರಿ ರಿಟೇಕ್ ತೆಗೆದುಕೊಳ್ಳುವುದು ಅವುಗಳಿಗೆ ಕಿರಿಕಿರಿಯನ್ನುಂಟುಮಾಡುತ್ತವೆ ಎಂದು ಪೇಟಾ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com