ಐಸಿಐಸಿಐ ಬ್ಯಾಂಕಿನಲ್ಲಿ 3,250 ಕೋಟಿ ಸಾಲ ರುಪಾಯಿ ಪಡೆದಿದ್ದ ವಿಡಿಯೋಕಾನ್ ಸಂಸ್ಥೆ ಮುಖ್ಯಸ್ಥ ವೇಣುಗೋಪಾಲ್ ದೂತ್ ಮತ್ತು ಚಂದಾ ಕೊಚ್ಚಾರ್ ಪತಿ ದೀಪಕ್ ಕೊಚ್ಚಾರ್ ನಡುವೆ ಪಾಲುದಾರಿಕೆ ವಹಿವಾಟು ನಡೆದಿದೆ. ಈ ವಹಿವಾಟು ಅನುಮಾನಸ್ಪದವಾಗಿದೆ ಎಂದು 'ಇಂಡಿಯನ್ ಎಕ್ಸ್‌ಪ್ರೆಸ್' ತನಿಖಾ ವರದಿ ಪ್ರಕಟಿಸಿತ್ತು. ಈ ಸಂಬಂಧ ಆದಾಯ ತೆರಿಗೆ ಇಲಾಖೆ ಸಹ ದೀಪಕ್ ಕೊಚ್ಚಾರ್ ನೋಟಿಸ್ ನೀಡಿದೆ.