1,063 ಕೋಟಿ ರೂ. ಮೊತ್ತದ 15 ಅನುತ್ಪಾದಕ ಆಸ್ತಿಗಳ ಹರಾಜಿಗೆ ಎಸ್ ಬಿಐ, ಪಿಎನ್ ಬಿ ಮುಂದು

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಒಟ್ಟು ಮೌಲ್ಯ 1,063 ಕೋಟಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಒಟ್ಟು ಮೌಲ್ಯ 1,063 ಕೋಟಿ ರೂಪಾಯಿಗಳ 15 ಅನುತ್ಪಾದಕ ಆಸ್ತಿಗಳನ್ನು ಹರಾಜಿಗಿಟ್ಟಿವೆ.

ಈ ತಿಂಗಳ 20ರಂದು ಇ-ಹರಾಜು ಮೂಲಕ ಆಸ್ತಿಗಳನ್ನು ಮಾರಾಟ ಮಾಡಲು ಎರಡೂ ಬ್ಯಾಂಕುಗಳು ನಿರ್ಧರಿಸಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಟ್ಟು 12 ಖಾತೆಗಳಲ್ಲಿ 848.54 ಕೋಟಿ ರೂಪಾಯಿಗಳ ಆಸ್ತಿಗಳನ್ನು ಮಾರಾಟಕ್ಕಿಟ್ಟಿದೆ.

ಆಸ್ತಿ ಮರುನಿರ್ಮಾಣ ಕಂಪೆನಿಗಳು/ಬ್ಯಾಂಕುಗಳು/ಹಣಕಾಸು ಸಂಸ್ಥೆಗಳಲ್ಲಿನ ಖಾತೆಗಳನ್ನು ಇ-ಹರಾಜು ಮೂಲಕ ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಎಸ್ ಬಿಐ ಹೇಳಿದೆ. ಈ ಖಾತೆಗಳಲ್ಲಿ ಸೂರತ್ ಮೂಲದ ಗಾರ್ಡನ್ ಸಿಲ್ಕ್ ಮಿಲ್ಸ್ ನಿಂದ ಅತಿ ಹೆಚ್ಚು 225.06 ಕೋಟಿ ರೂಪಾಯಿಗಳು ಬರಬೇಕಾಗಿದೆ. ನಂತರ ಕೊರ್ಬ ವೆಸ್ಟ್ ಪವರ್ ಕಂಪೆನಿಯಿಂದ 124.78 ಕೋಟಿ ರೂ. ಮಾಡರ್ನ್ ಸ್ಟೀಲ್ಸ್ ನಿಂದ 122.61 ಕೋಟಿ ರೂ ಮತ್ತು ಎಸ್ಎನ್ಎಸ್ ಸ್ಟಾರ್ಚ್ ನಿಂದ 66.78 ಕೋಟಿ ರೂಪಾಯಿ ಬರಬೇಕಾಗಿದೆ.

ಉಳಿದಂತೆ ಲೀಟ್ ವಿಂಡ್ ಶ್ರೀರಾಮ್ ಮ್ಯಾನ್ಯುಫ್ಯಾಕ್ಚುರಿಂಗ್ ಪ್ರೈವೆಟ್ ಲಿಮಿಟೆಡ್ ನಿಂದ 64.95 ಕೋಟಿ ರೂ., ಉನಿಜುಲ್ಸ್ ಲೈಫ್ ಸೈನ್ಸ್ ನಿಂದ 59.25 ಕೋಟಿ ರೂ, ಸ್ಕಾನಿಯಾ ಸ್ಟೀಲ್ಸ್ ಅಂಡ್ ಪವರ್ ನಿಂದ 42.42 ಕೋಟಿ ರೂ, ಕೆಎಸ್ಎಮ್  ಸ್ಪಿನ್ನಿಂಗ್ ಮಿಲ್ಸ್ ನಿಂದ 40.42 ಕೋಟಿ ರೂ, ಮಾಡರ್ನ ಡೈರಿಯಿಂದ 39.93 ಕೋಟಿ ರೂ, ಅಸ್ಮಿತಾ ಪೇಪರ್ಸ್ ನಿಂದ 37.23 ಕೋಟಿ ರೂ, ಫೋರೆಲ್ ಲ್ಯಾಬ್ಸ್ ನಿಂದ 22.86 ಕೋಟಿ ರೂ ಮತ್ತು ಜೈಪುರ್ ಮೆಟಲ್ ಅಂಡ್ ಎಲೆಕ್ಟ್ರಿಕಲ್ಸ್ ನಿಂದ 2.16 ಕೋಟಿ ರೂಪಾಯಿ ಬರಬೇಕಾಗಿದೆ.

ದೇಶದ ಎರಡನೇ ಅತಿದೊಡ್ಡ ಸಾರ್ವಜನಿಕ ವಲಯ ಬ್ಯಾಂಕಾದ ಪಂಜಾಬ್ ನ್ಯಾಷನಲ್ ಬ್ಯಾಂಕ್, 214.45 ಕೋಟಿ ರೂಪಾಯಿ ಅನುತ್ಪಾದಕ ಆಸ್ತಿ ಬರಬೇಕಾಗಿದೆ.

ಭಾರತದ ಎಲ್ಲಾ 21 ಸಾರ್ವಜನಿಕ ವಲಯ ಬ್ಯಾಂಕುಗಳಲ್ಲಿ ಕಳೆದ ವರ್ಷ ಡಿಸೆಂಬರ್ 31ರ ವೇಳೆಗೆ ಒಟ್ಟು 7.33 ಲಕ್ಷ ಕೋಟಿ ರೂಪಾಯಿ ಮರುಪಾವತಿಯಾಗದ ಸಾಲಗಳಿವೆ. ಅವುಗಳ ಪೈಕಿ ಎಸ್ ಬಿಐಯಲ್ಲಿ ಅತಿ ಹೆಚ್ಚು 2.01 ಲಕ್ಷ ಕೋಟಿ ರೂ, ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ 55,200 ಕೋಟಿ ರೂ, ಐಡಿಬಿಐ ಬ್ಯಾಂಕಿನಲ್ಲಿ 44,542 ಕೋಟಿ ರೂ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 38,047 ಕೋಟಿ ರೂಪಾಯಿ ಮರು ಪಾವತಿಯಾಗದ ಸಾಲಗಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com