ನೋಟುನಿಷೇಧ ಒಳ್ಳೆಯ ಯೋಜನೆಯಲ್ಲ, ಯೋಜನೆಯನ್ನು ಸರಿಯಾಗಿ ಜಾರಿಗೊಳಿಸಲೂ ಇಲ್ಲ: ರಘುರಾಮ್ ರಾಜನ್

’ನೋಟು ನಿಷೇಧ ಮಾಡುವುದು ಒಳ್ಳೆಯ ಆಯ್ಕೆಯಲ್ಲ ಎಂದು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದೆ’ ಎಂದು ಆರ್ ಬಿಐ ನ ಮಾಜಿ ಗೌರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.
ರಘುರಾಮ್ ರಾಜನ್
ರಘುರಾಮ್ ರಾಜನ್
’ನೋಟು ನಿಷೇಧ ಮಾಡುವುದು ಒಳ್ಳೆಯ ಆಯ್ಕೆಯಲ್ಲ ಎಂದು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದೆ’ ಎಂದು ಆರ್ ಬಿಐ ನ ಮಾಜಿ ಗೌರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ. 
ಕೇಂದ್ರ ಸರ್ಕಾರ ನೋಟು ನಿಷೇಧವನ್ನು ಹೇಗೆ ಕಾರ್ಯಗತಗೊಳಿಸಬೇಕೆಂಬುದನ್ನು ಸರಿಯಾಗಿ ಯೋಜಿಸಲಿಲ್ಲ ಎಂದೂ ರಘುರಾಮ್ ರಾಜನ್ ಅಭಿಪ್ರಾಯಪಟ್ಟಿದ್ದಾರೆ.  ಕೇಂಬ್ರಿಡ್ಜ್ ನಲ್ಲಿರುವ ಹಾರ್ವರ್ಡ್ ಕೆನೆಡಿ ಸ್ಕೂಲ್ ನಲ್ಲಿ ಮಾತನಾಡಿರುವ ರಘುರಾಮ್ ರಾಜನ್, ನೋಟು ನಿಷೇಧದ ಪ್ರಸ್ತಾವನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಆರ್ ಬಿಐ ನೊಂದಿಗೆ ಸಮಾಲೋಚನೆ ನಡೆಸಿರಲ್ಲ ಎಂದಿದ್ದು, ಶೇ.87.5 ರಷ್ಟು ಚಲಾವಣೆಯಲ್ಲಿದ್ದ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸುವುದು ಸೂಕ್ತ ಆಯ್ಕೆಯಾಗಿರಲಿಲ್ಲ ಎಂಬುದನ್ನು ರಘುರಾಮ್ ರಾಜನ್ ಮತ್ತೊಮ್ಮೆ ಹೇಳಿದ್ದಾರೆ. 
ನೋಟು ನಿಷೇಧದ ಯೋಜನೆಗೆ ಸಂಬಂಧಿಸಿದಂತೆ ತಾವು ಸರ್ಕಾರಕ್ಕೂ ಇದೇ ಅಭಿಪ್ರಾಯ ನೀಡಿದ್ದಾಗಿ ರಘುರಾಮ್ ರಾಜನ್ ತಿಳಿಸಿದ್ದಾರೆ.  ಶೇ.87.5 ರಷ್ಟು ಚಲಾವಣೆಯಲ್ಲಿದ್ದ ನೋಟುಗಳನ್ನು ನಿಷೇಧ ಮಾಡುವುದಾದರೆ ಅಷ್ಟೇ ಪ್ರಮಾಣಾದ ನೋಟುಗಳನ್ನು ಮುಂಚೆಯೇ ಮುದ್ರಣಗೊಳಿಸಿ ಚಲಾವಣೆಗೆ ಸಿದ್ಧಗೊಳಿಸಬೇಕಿತ್ತು, ಆದರೆ ಈ ಕೆಲಸ ಆಗಲಿಲ್ಲ. ಹೊಸ ನೋಟುಗಳನ್ನು ಸಿದ್ಧಗೊಳಿಸದೇ ರಾತ್ರೋರಾತ್ರಿ ಹಳೆ ನೋಟುಗಳನ್ನು ರದ್ದುಗೊಳಿಸಿದರೆ ತೆರಿಗೆ ಪಾವತಿ ಮಾಡದೇ ಹಣವನ್ನು ಇಟ್ಟುಕೊಂಡಿದ್ದವರು, ಸರ್ಕಾರದ ಬಳಿ ಕ್ಷಮೆ ಕೇಳಿ ತಾವು ಮುಚ್ಚಿಟ್ಟಿದ್ದ ಹಣವನ್ನು ಬಹಿರಂಗಗೊಳಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಬಾಲಿಶ ಅಭಿಪ್ರಾಯ ಎಂದು ರಘುರಾಮ್ ರಾಜನ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com