ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೊಸ ಮನೆ ಕೊಳ್ಳಲು ಮುಂದಾಗಿದ್ದೀರಾ? ಮೊದಲು, ಬಿಲ್ಡರ್ ಗಳು ಹಾಕುವ ಜಿಎಸ್‏ಟಿಯನ್ನು ಪರೀಕ್ಷಿಸಿ

ಹೊಸದಾಗಿ ಮನೆ ಖರೀದಿಸುವವರಿಗೆ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ...

ಹೈದರಾಬಾದ್: ಹೊಸದಾಗಿ ಮನೆ ಖರೀದಿಸುವವರಿಗೆ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಗೊಂದಲ ಹುಟ್ಟಿಸಿದೆ. ಏಕೆಂದರೆ ನಿರ್ಮಾಣ ಹಂತದಲ್ಲಿರುವ ಮನೆಗಳಿಗೆ ಬಿಲ್ಡರ್ ಗಳು ಜಿಎಸ್ ಟಿಯಡಿ ಬೇರೆ ಬೇರೆ ತೆರಿಗೆಗಳನ್ನು ವಿಧಿಸುತ್ತಿದ್ದಾರೆ. ಇನ್ನು ಕೆಲವು ಮನೆಗಳಿಗೆ ಅನ್ವಯವಾಗದಿದ್ದರೂ ಕೂಡ ಬಿಲ್ಡರ್ ಗಳು ಒಸಿ(ಆಕ್ಯುಪೆನ್ಸಿ ಸರ್ಟಿಫಿಕೇಟ್)ಗಳಿರುವ ನಿರ್ಮಾಣಕಾರ್ಯ ಪೂರ್ತಿಯಾಗಿರುವ ಮನೆಗಳಿಗೆ ಸಹ ಜಿಎಸ್ ಟಿಯನ್ನು ವಿಧಿಸಲಾಗುತ್ತಿದೆ.

ನಿರ್ಮಾಣ ಹಂತದಲ್ಲಿರುವ ವಸ್ತುಗಳು ಮತ್ತು ಸೇವೆಗಳಿಗೆ ವಿವಿಧ ತೆರಿಗೆ ದರಗಳು ಅನ್ವಯವಾಗುತ್ತದೆ ಎಂದು ಸರಕು ಮತ್ತು ಸೇವಾ ತೆರಿಗೆ ಮಂಡಳಿ ಹೇಳುತ್ತದೆ. ಇದರಿಂದಾಗಿ ಬಿಲ್ಡರ್ ಗಳು ಯೋಜನೆಗಳಿಂದ ಯೋಜನೆಗಳಿಗೆ ವಿವಿಧ ಜಿಎಸ್ ಟಿ ದರಗಳನ್ನು ವಿಧಿಸುತ್ತಾರೆ. ಸರಕು ಮತ್ತು ಸೇವಾ ತೆರಿಗೆಯನ್ನು ಮನೆಯನ್ನು ಖರೀದಿಸುವವರಿಗೆ ಬಿಲ್ಡರ್ ಗಳು ವರ್ಗಾಯಿಸುವುದರಿಂದ ಮನೆ ಖರೀದಿಸುವಾಗ ಈ ಅಂಶಗಳನ್ನು ನೆನಪಿನಲ್ಲಿಟ್ಟುಕೊಂಡರೆ ಒಳ್ಳೆಯದು.

ನಿರ್ಮಾಣಕ್ಕೆ ಬೇಕಾಗುವ ವಿವಿಧ ಸಾಮಗ್ರಿಗಳಿಗೆ ವಿವಿಧ ಜಿಎಸ್ ಟಿ ದರಗಳು ಅನ್ವಯವಾಗುತ್ತದೆ. ಸಿಮೆಂಟ್ ಗಳಿಗೆ ಶೇಕಡಾ 28ರಷ್ಟು, ಕೆಲಸದ ಗುತ್ತಿಗೆಗಳಿಗೆ ಶೇಕಡಾ 18ರಷ್ಟು ಮತ್ತು ಕಲ್ಲಿನ ಇಟ್ಟಿಗೆಗೆ ಶೇಕಡಾ 5ರಷ್ಟು ಅನ್ವಯವಾಗುತ್ತದೆ. ವಸ್ತುಗಳಿಂದ ವಸ್ತುಗಳಿಗೆ ಸ್ಥಳಗಳಿಂದ ಸ್ಥಳಗಳಿಗೆ  ಜಿಎಸ್ ಟಿ ಬದಲಾಗುವುದರಿಂದ ಬಿಲ್ಡರ್ ಗಳು ಇಡೀ ಮೊತ್ತವನ್ನು ಲೆಕ್ಕಾಚಾರ ಹಾಕಿ ವೆಚ್ಚವನ್ನು ಖರೀದಿದಾರರ ಮೇಲೆ ವಿಧಿಸುತ್ತಾರೆ. ಈ ವ್ಯತ್ಯಾಸಗಳು ಖರೀದಿದಾರರಲ್ಲಿ ಗೊಂದಲ ಸೃಷ್ಟಿಸುತ್ತದೆ ಎಂದು ಕ್ರೆಡೈಯ ತೆಲಂಗಾಣ ಘಟಕದ ಗುಮ್ಮಿ ರಾಮ್ ರೆಡ್ಡಿ ಹೇಳುತ್ತಾರೆ.

ಸಮಾನ ದರಗಳನ್ನು ವಿಧಿಸುವುದು ಕಷ್ಟ. ಹೀಗಾಗಿ ಮನೆ ಖರೀದಿಸುವಾಗ ಪ್ರತಿ ಬಿಲ್ಡರ್ ಗಳ ಪ್ರತಿ ಪ್ರಾಜೆಕ್ಟ್ ಗಳನ್ನು ಪ್ರತ್ಯೇಕವಾಗಿ ವಿಚಾರಿಸಿಕೊಳ್ಳಿ ಮತ್ತು ಎಷ್ಟು ಜಿಎಸ್ ಟಿ ದರವನ್ನು ವಿಧಿಸುತ್ತಾರೆ ಎಂದು ನೋಡಿಕೊಂಡು ಹೆಜ್ಜೆ ಮುಂದಿಡಿ.

ಜಿಎಸ್ ಟಿ ಮಂಡಳಿ ಪ್ರಕಾರ, ನಿರ್ಮಾಣ ಹಂತದಲ್ಲಿರುವ ಮನೆಗಳನ್ನು ಕಾಂಪ್ಲೆಕ್ಸ್ ಗಳೆಂದು ವ್ಯಾಖ್ಯಾನಿಸಲಾಗುತ್ತದೆ, ಕಟ್ಟಡಗಳು, ನಾಗರಿಕ ಸಮುಚ್ಚಯಗಳಿಗೆ ಶೇಕಡಾ 12ರಷ್ಟು ಜಿಎಸ್ ಟಿ ದರ ನಿಗದಿಪಡಿಸಲಾಗಿದೆ. ಆದರೆ ರಿಯಲ್ಟರ್ ಗಳು ಶೇಕಡಾ 6ರಿಂದ ಶೇಕಡಾ 12ರಷ್ಟು ಜಿಎಸ್ ಟಿ ದರ ನಿಗದಿಪಡಿಸುತ್ತಾರೆ.

 ಮಾರುಕಟ್ಟೆಯಲ್ಲಿನ ಬೇಡಿಕೆಗಳಿಗನುಗುಣವಾಗಿ ಬೇರೆ ಬೇರೆ ಸ್ಥಳ,ನಗರಗಳಲ್ಲಿ ಬಿಲ್ಡರ್ ಗಳು ವಿವಿಧ ಜಿಎಸ್ ಟಿ ದರಗಳನ್ನು ವಿಧಿಸುತ್ತಾರೆ. ಕೆಲವು ಬಿಲ್ಡರ್ ಗಳು ತಮಗೇ ಜಿಎಸ್ ಟಿಗಳನ್ನು ಅಂತಿಮ ಮಾರಾಟ ದರಕ್ಕೆ ವಿಧಿಸಿದರೆ ಕೆಲವರು ನೇರವಾಗಿ ಮನೆ ಖರೀದಿದಾರರಿಗೆ ವರ್ಗಾಯಿಸುತ್ತಾರೆ ಎನ್ನುತ್ತಾರೆ ಮುಖ್ಯ ಆರ್ಥಿಕತಜ್ಞ ಮತ್ತು ನೈಟ್ ಫ್ರಾಂಕ್ ಇಂಡಿಯಾದ ರಾಷ್ಚ್ರೀಯ ನಿರ್ದೇಶನ ಸಂಶೋಧಕ ಸಮಂತಕ್ ದಾಸ್.

ಹೀಗಾಗಿ ನಮೂದಿಸಿರುವ ಮೊತ್ತವು ಜಿಎಸ್ ಟಿ ಸೇರಿಯೋ ಅಥವಾ ಬಿಟ್ಟೊ ಎಂದು ಮನೆ ಖರೀದಿದಾರರು ಕೇಳಿಕೊಳ್ಳಬೇಕು. ಈಗಾಗಲೇ ಒಸಿ (ಆಕ್ಯುಪೆನ್ಸಿ ಸರ್ಟಿಫಿಕೇಟ್) ಇರುವ ನಿರ್ಮಾಣ ಮುಗಿದಿರುವ ಕಟ್ಟಡಗಳಿಗೆ ಜಿಎಸ್ ಟಿ ಅನ್ವಯವಾಗುವುದಿಲ್ಲ. ನಿರ್ಮಾಣ ಮುಗಿದಿರುವ ಪ್ರಾಜೆಕ್ಟ್ ಗಳನ್ನು ಖರೀದಿಸುವಾಗ ಆಕ್ಯುಪೆನ್ಸಿ ಸರ್ಟಿಫಿಕೇಟ್ ಇದೆಯೇ ಇಲ್ಲವೇ ಎಂದು ಕೇಳಬೇಕು ಎನ್ನುತ್ತಾರೆ ಟ್ರೆಡಾದ ಖಜಾಂಚಿ ಶ್ರೀಧರ್ ರೆಡ್ಡಿ. ಒಸಿಯಿದ್ದರೆ ಜಿಎಸ್ ಟಿ ಅನ್ವಯವಾಗುವುದಿಲ್ಲ.

Related Stories

No stories found.

Advertisement

X
Kannada Prabha
www.kannadaprabha.com