ನವದೆಹಲಿ: ನೋಂದಣಿ ಕಚೇರಿಗೆ ಮೇ 10ರೊಳಗೆ 100 ಕೋಟಿ ರೂಪಾಯಿ ಠೇವಣಿಯಿಡುವಂತೆ ಜೈಪ್ರಕಾಶ್ ಅಸೋಸಿಯೇಟ್ ಲಿಮಿಟೆಡ್ ಗೆ(ಜೆಪಿ ಅಸೋಸಿಯೇಟ್ಸ್) ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ, ದಿವಾಳಿತನ ವೃತ್ತಿಪರ ನಿರ್ಣಯಕ್ಕೆ (IRP) ಕಾನೂನಿನಂತೆ ಮರುಸ್ಥಾಪನೆ ಯೋಜನೆಗಳಂತೆ ಜೈಪಾಲ್ ಅಸೋಸಿಯೇಟ್ ಲಿಮಿಟೆಡ್ ಗೆ ಪ್ರಾತಿನಿಧ್ಯ ಪರಿಗಣಿಸುವಂತೆ ಹೇಳಿದೆ.
ಈ ಮಧ್ಯೆ, ಸಂಸ್ಥೆ ಪರ ವಕೀಲರು ತಾವು ಈಗಾಗಲೇ ಏಪ್ರಿಲ್ 12ರಂದು 100 ಕೋಟಿ ರೂಪಾಯಿ ಠೇವಣಿಯಿಟ್ಟಿದೆ ಎಂದು ಸುಪ್ರೀಂ ಕೋರ್ಟ್ ಗೆ ತಿಳಿಸಿದೆ. ಪ್ರತಿ ತಿಂಗಳಿಗೆ 500 ಮನೆಗಳನ್ನು ಪೂರ್ಣಗೊಳಿಸಿರುವುದರಿಂದ ತನ್ನ ಮರುಸ್ಥಾಪನೆ ಯೋಜನೆ ಪ್ರಸ್ತಾಪವನ್ನು ಪುನಃ ಪರಿಶೀಲಿಸುವಂತೆ ಅದು ಕೋರಿದೆ.
ಮನೆ ಖರೀದಿ ಮಾಡಿರುವವರಿಗೆ ಪರಿಹಾರವಾಗಿ ನೀಡಲು ನೋಂದಣಿ ಕಚೇರಿಯಲ್ಲಿ 200 ಕೋಟಿ ರೂಪಾಯಿ ಠೇವಣಿಯಿಡುವಂತೆ ಸುಪ್ರೀಂ ಕೋರ್ಟ್ ಮಾರ್ಚ್ 21ರಂದು ಆದೇಶ ನೀಡಿತ್ತು. ಇವರು ಫ್ಲಾಟ್ ಗಳನ್ನು ತೆಗೆದುಕೊಳ್ಳುವ ಬದಲು ಹಣ ಪಡೆಯಲು ಒಲವು ತೋರಿದ್ದಾರೆ.
Advertisement