ಇ-ವಾಹನ ಚಾರ್ಜಿಂಗ್ ಕೇಂದ್ರಗಳಿಗೆ ಯಾವುದೇ ಪರವಾನಗಿ ಅಗತ್ಯವಿಲ್ಲ: ಕೇಂದ್ರ ಸರ್ಕಾರ

ವಿದ್ಯುತ್ ಸಹಾಯದಿಂದ ಚಲಿಸುವ ವಾಹನಗಳ ಚಾರ್ಜಿಂಗ್ ಬ್ಯಾಟರಿಗಳನ್ನು ಸೇವೆಯೆಂದು ವಿಭಾಗಿಸಿರುವ ಇಂಧನ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ವಿದ್ಯುತ್ ಸಹಾಯದಿಂದ ಚಲಿಸುವ ವಾಹನಗಳನ್ನು ಸೇವೆಯೆಂದು ವರ್ಗೀಕರಿಸಿರುವ ಇಂಧನ ಸಚಿವಾಲಯ, ಇದರಿಂದ ಬ್ಯಾಟರಿ ಚಾರ್ಜ್ ಮಾಡುವ ಕೇಂದ್ರಗಳು ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸಲು ಮತ್ತು ಇ-ವಾಹನಗಳನ್ನು ಬಳಸಲು ಸಹಾಯವಾಗಲಿದೆ.

ಇ-ವಾಹನಗಳಿಗೆ ವಿದ್ಯುಚ್ಛಕ್ತಿ ಕಾಯ್ದೆಯ ಅಡಿಯಲ್ಲಿ ವಿದ್ಯುತ್ ಪ್ರಸರಣ, ವಿತರಣೆ ಮತ್ತು ವಹಿವಾಟು ಪರವಾನಗಿಗಳ ಅಗತ್ಯವಿರುತ್ತದೆ. ಹೀಗಾಗಿ ಗ್ರಾಹಕರಿಗೆ ವಿದ್ಯುತ್ ಮಾರಾಟ ಮಾಡಲು ಪರವಾನಗಿಗಳನ್ನು ಪಡೆಯಬೇಕು.ಇ-ವಾಹನಗಳನ್ನು ಚಾರ್ಜ್ ಮಾಡುವ ಸಂದರ್ಭದಲ್ಲಿ ವಿದ್ಯುತ್ ಕೇಂದ್ರವು ವಿದ್ಯುತ್ ಪ್ರಸರಣ, ವಿತರಣೆ ಅಥವಾ ವಿದ್ಯುತ್ ಮಾರಾಟಕ್ಕೆ ಸಂಬಂಧಪಟ್ಟಂತೆ ಯಾವುದೇ ಚಟುವಟಿಕೆ ನಡೆಸುವುದಿಲ್ಲ ಎಂದು ಇಂಧನ ಸಚಿವಾಲಯ ಸ್ಪಷ್ಟಪಡಿಸಿದೆ.

ಹೀಗಾಗಿ ವಿದ್ಯುತ್ ವಾಹನಗಳಿಗೆ ಚಾರ್ಚ್ ಮಾಡುವಾಗ ಯಾವುದೇ ಪರವಾನಗಿಯ ಅಗತ್ಯ ವಿದ್ಯುದ್ದೀಕರಣ ಕಾಯ್ದೆ 2003ರಡಿಯಲ್ಲಿ ಅಗತ್ಯವಿರುವುದಿಲ್ಲ ಎಂದು ಕಾಯ್ದೆ ಹೇಳುತ್ತದೆ.
ಇದೊಂದು ಅಭಿವೃದ್ಧಿಪರ ಹೆಜ್ಜೆಯಾಗಿದೆ ಎಂದು ವಿದ್ಯುತ್ ವಾಹನಗಳ ಉತ್ಪಾದಕರ ಸೊಸೈಟಿಯ ಗ್ರಾಹಕ ವ್ಯವಹಾರಗಳ ನಿರ್ದೇಶಕ ಸೊಹಿಂದರ್ ಗಿಲ್ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com