ಆದಾಯ ತೆರಿಗೆ ರಿಟನ್ಸ್ ಬಗ್ಗೆ ತಪ್ಪು ಮಾಹಿತಿ ನೀಡಿದರೆ ಕಠಿಣ ಕಾನೂನು ಕ್ರಮ
ವಾಣಿಜ್ಯ
ಆದಾಯ ತೆರಿಗೆ ರಿಟನ್ಸ್ ಬಗ್ಗೆ ತಪ್ಪು ಮಾಹಿತಿ ನೀಡಿದರೆ ಕಠಿಣ ಕಾನೂನು ಕ್ರಮ
ಆದಾಯ ತೆರಿಗೆ ರಿಟನ್ಸ್ ಬಗ್ಗೆ ತಪ್ಪು ಮಾಹಿತಿ ನೀಡಿದರೆ ಅಂತಹವರ ವಿರುದ್ಧ ಇನ್ನು ಮುಂದೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ...
ನವದೆಹಲಿ: ಆದಾಯ ತೆರಿಗೆ ರಿಟನ್ಸ್ ಬಗ್ಗೆ ತಪ್ಪು ಮಾಹಿತಿ ನೀಡಿದರೆ ಅಂತಹವರ ವಿರುದ್ಧ ಇನ್ನು ಮುಂದೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ, ಅಷ್ಟೇ ಅಲ್ಲದೇ ಉದ್ಯೋಗಿಯ ಸಂಸ್ಥೆ ಅಥವಾ ಹಿರಿಯ ಅಧಿಕಾರಿಗಳಿಗೆ ದೂರನ್ನೂ ನೀಡಲಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಸಿದೆ.
ಐಟಿ ರಿಟನ್ಸ್ ಬಗ್ಗೆ ಮಾಹಿತಿಯನ್ನು ಸ್ವೀಕರಿಸಿ ಪ್ರಕ್ರಿಯೆಗೆ ಕಳಿಸುವ ಬೆಂಗಳೂರಿನಲ್ಲಿರುವ ಸೆಂಟ್ರಲ್ ಪ್ರೊಸೆಸಿಂಗ್ ಸೆಂಟರ್ ಈ ನಿಟ್ಟಿನಲ್ಲಿ ಆದೇಶ ಹೊರಡಿಸಿದ್ದು, ತೆರಿಗೆ ಲಾಭ ಪಡೆಯುವುದಕ್ಕಾಗಿ ತಪ್ಪು ಮಾಹಿತಿ ನೀಡಲು ಪ್ರೇರೇಪಿಸುವ ತೆರಿಗೆ ಸಲಹೆಗಾರರ ಬಗ್ಗೆ ಎಚ್ಚರದಿಂದ ಇರಬೇಕು, ದಾರಿ ತಪ್ಪಿಸುವ ತೆರಿಗೆ ಸಲಹೆಗಾರರಿಗೆ ಬಲಿಯಾಗಬೇಡಿ ಎಂದು ತೆರಿಗೆ ಪಾವತಿ ಮಾಡುವವರಿಗೆ ಎಚ್ಚರಿಕೆ ನೀಡಿದೆ.
ಒಂದು ವೇಳೆ ತೆರಿಗೆ ಪಾವತಿಸುವುದರಲ್ಲಿ ತಪ್ಪು ಮಾಹಿತಿ ನೀಡಿದರೆ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು, ಜೊತೆಗೆ ತಪ್ಪು ಮಾಹಿತಿ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಉದ್ಯೋಗಿಯ ಸಂಸ್ಥೆ/ ಹಿರಿಯ ಅಧಿಕಾರಿಗೆ ಸೂಚನೆ ನೀಡಲಾಗುವುದು ಎಂದು ತೆರಿಗೆ ಇಲಾಖೆ ಆದೇಶದಲ್ಲಿ ತಿಳಿಸಿದೆ.
ಬೆಂಗಳೂರಿನ ಮಾಹಿತಿ ತಂತ್ರಜ್ಞಾನದ ಸಂಸ್ಥೆಗಳ ಉದ್ಯೋಗಿಗಳ ಪೈಕಿ ಹಲವರು ತೆರಿಗೆ ಮರುಪಾವತಿಯಲ್ಲಿ ತಪ್ಪು ಮಾಹಿತಿ ನೀಡಿರುವ ಹಲವು ಪ್ರಕರಣಗಳು ಜನವರಿ ತಿಂಗಳಿನಿಂದ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಈ ಕ್ರಮ ಕೈಗೊಂಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ