ನೋಟು ನಿಷೇಧದ ನಂತರ ಅತಿ ಹೆಚ್ಚು ನಕಲಿ ನೋಟು, ಅನುಮಾನಾಸ್ಪದ ವಹಿವಾಟು!

1000, 500 ರೂ ಮುಖಬೆಲೆಯ ನೋಟು ನಿಷೇಧಗೊಂಡ ನಂತರ ದೇಶದಲ್ಲಿರುವ ಬ್ಯಾಂಕ್ ಗಳು ಹೆಚ್ಚಿನ ಪ್ರಮಾಣದಲ್ಲಿ ನಕಲಿ ನೋಟುಗಳನ್ನು ಸ್ವೀಕರಿಸಿದ್ದು, ಅನುಮಾನಾಸ್ಪದ ವಹಿವಾಟುಗಳಲ್ಲಿ ಶೇ.480 ರಷ್ಟು
ನೋಟು ನಿಷೇಧದ ನಂತರ ಅತಿ ಹೆಚ್ಚು ನಕಲಿ ನೋಟು, ಅನುಮಾನಾಸ್ಪದ ವಹಿವಾಟು!
ನೋಟು ನಿಷೇಧದ ನಂತರ ಅತಿ ಹೆಚ್ಚು ನಕಲಿ ನೋಟು, ಅನುಮಾನಾಸ್ಪದ ವಹಿವಾಟು!
ನವದೆಹಲಿ: 1000, 500 ರೂ ಮುಖಬೆಲೆಯ ನೋಟು ನಿಷೇಧಗೊಂಡ ನಂತರ ದೇಶದಲ್ಲಿರುವ ಬ್ಯಾಂಕ್ ಗಳು ಹೆಚ್ಚಿನ ಪ್ರಮಾಣದಲ್ಲಿ ನಕಲಿ ನೋಟುಗಳನ್ನು ಸ್ವೀಕರಿಸಿದ್ದು, ಅನುಮಾನಾಸ್ಪದ ವಹಿವಾಟುಗಳಲ್ಲಿ ಶೇ.480 ರಷ್ಟು ಏರಿಕೆಯಾಗಿದೆ ಎಂದು ಪಿಟಿಐ ಗೆ ಲಭ್ಯವಾಗಿರುವ ದಾಖಲೆಗಳ ಮೂಲಕ ಬಹಿರಂಗವಾಗಿದೆ. 
ನೋಟು ನಿಷೇಧದ ನಂತರ ಇದೇ ಮೊದಲ ಬಾರಿಗೆ ನೋಟು ನಿಷೇಧದ ಬಗ್ಗೆ ಫೈನಾನ್ಷಿಯಲ್ ಇಂಟಲಿಜೆನ್ಸ್ ಯುನಿಟ್ ನಿಂದ ವರದಿಯೊಂದು ಹೊರಬಂದಿದ್ದು, ಪಿಟಿಐ ಗೆ ಈ ವರದಿಯ ದಾಖಲೆಗಳು ಲಭ್ಯವಾಗಿದೆ. 
ಪಿಟಿಐ ವರದಿಯ ಪ್ರಕಾರ  ಖಾಸಗಿ ಹಾಗೂ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಲ್ಲಿ ಸಾಮಾನ್ಯವಾಗಿರುತ್ತಿದ್ದ ಅನುಮಾನಾಸ್ಪದ ವಹಿವಾಟುಗಳಿಗಿಂತ 2016-17 ಅವಧಿಯಲ್ಲಿನ ಅನುಮಾನಾಸ್ಪದ ವಹಿವಾಟುಗಳು ಶೇ.400 ರಷ್ಟು ಏರಿಕೆಯಾಗಿದೆ. 
ಇನ್ನು ನಕಲಿ ನೋಟುಗಳ ಸ್ವೀಕೃತಿಯಲ್ಲಿಯೂ ಏರಿಕೆಯಾಗಿದ್ದು 2016-17 ರಲ್ಲಿ 3.22 ಲಕ್ಷಕ್ಕೂ ಹೆಚ್ಚು ನಿದರ್ಶನಗಳು ಬೆಳಕಿಗೆ ಬಂದಿದ್ದು ನೋಟು ನಿಷೇಧದ ಕಾರಣ ಎನ್ನಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com