ಬ್ಯಾಂಕ್ ವಂಚನೆ: ಸಾಲಗಾರರ ಪತ್ತೆಗೆ ಪತ್ತೇದಾರಿ ಏಜನ್ಸಿಗಳ ಮೊರೆ ಹೋದ ಪಿಎನ್ಬಿ

ಬ್ಯಾಂಕ್ ವಂಚನೆಯಿಂದ ಹೈರಾಣಾಗಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ತನ್ನ ಪತ್ತೆಯಾಗದ ಸಾಲಗಳನ್ನು ಪತ್ತೆ ಮಾಡಲು ಡಿಟೆಕ್ಟಿವ್ ಏಜೆನ್ಸಿಗಳ ಮೊರೆ ಹೋಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಬ್ಯಾಂಕ್ ವಂಚನೆಯಿಂದ ಹೈರಾಣಾಗಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ತನ್ನ ಪತ್ತೆಯಾಗದ ಸಾಲಗಳನ್ನು ಪತ್ತೆ ಮಾಡಲು ಡಿಟೆಕ್ಟಿವ್ ಏಜೆನ್ಸಿಗಳ ಮೊರೆ ಹೋಗಿದೆ. 
ಡಿಸೆಂಬರ್ ಅಂತ್ಯದ ವೇಳ್ಗೆ  57,519 ಕೋಟಿ ರೂ.ಗಳಷ್ಟು ಕೆಟ್ಟ ಸಆಲಗಳನ್ನು ಮರುಪಾವತಿ ಮಾಡಿಕೊಳ್ಳುವ ಸಂಬಂಧ ಬ್ಯಾಂಕ್ ಪ್ರಯತ್ನ ನಡೆಸಿದೆ. ಇದಕ್ಕಾಗಿ ಬ್ಯಾಂಕ್ ಡಿಟೆಕ್ಟಿವ್ ಏಜೆಂತರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ.
ಎನ್ಪಿಎಗಳನ್ನು ಮರುವಶಪಡಿಸಿಕೊಳ್ಳಲು ಪಿಎನ್ಬಿ ಮುಂದಾಗಿದ್ದು ಬ್ಯಾಂಕ್ ಸಿಬ್ಬಂದಿ ಪ್ರತಿ ತಿಂಗಳೂ 150 ಕೋಟಿ ರೂ. ಮೌಲ್ಯದ ಕೆಟ್ಟ ಸಾಲಗಳನ್ನು ಮರುವಶಪಡಿಸಿಕೊಳ್ಳಬೇಕೆಂದು ಗುರಿ ಹೊಂದಿದ್ದಾರೆ. 
ವಜ್ರದ ವ್ಯಾಪಾರಿಗಳಾದ ನೀರವ್ ಮೋದಿ ಹಾಗು ಮೆಹುಲ್ ಚೋಕ್ಸಿ ಕಳೆದ ಜನವರಿಯಲ್ಲಿ ಬ್ಯಾಂಕ್ ಗೆ 13 ಸಾವಿರ ಕೋಟಿ ರೂ. ವಂಚಿಸಿದ್ದರು.
ಸಾಲ ಮರುಪಾವತಿ ಸಂಬಂಧ ಸಾಲಗಾರರ ಮೂಲ ಪತ್ತೆಗೆ ಮುಂದಾಗಿರುವ ಪಿಎನ್ಬಿ ಬುಧವಾರ ಡಿಟೆಕ್ಟಿವ್ ಏಜನ್ಸಿಗಳಿಂದ ಅರ್ಜಿ ಆಹ್ವಾನಿಸಿದೆ. ಪತ್ತೆದಾರಿ ಏಜೆನ್ಸಿಗಳ ಸೇವೆಗಳನ್ನು ಬಳಸುವುದರ ಮೂಲಕ ಎನ್ಪಿಎ ಖಾತೆ ವಿವರ ಪಡೆಯುವುದು ಬ್ಯಾಂಕ್ ಉದ್ದೇಶ ಎನ್ನಲಾಗಿದೆ.
ಆಸಕ್ತಿಯುಳ್ಳ ಸಂಸ್ಥೆಗಳು ಮೇ 5 ರೊಳಗೆ ಅರ್ಜಿಗಳನ್ನು, ಸಂಬಂಧಿತ ದಾಖಲೆಗಳನ್ನು ಸಲ್ಲಿಸುವಂತೆ ಕೇಳಿಕೊಳ್ಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com