ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ

ಆರ್‏ಬಿಐ ರೆಪೋ ದರ ಶೇ.6.50ಕ್ಕೆ ಏರಿಕೆ, ಬ್ಯಾಂಕ್ ಸಾಲಗಳ ಇಎಂಐ ಹೆಚ್ಚಾಗುವ ಸಾಧ್ಯತೆ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) ರೆಪೋ ದರವನ್ನು 25 ಮೂಲಾಂಶಗಳಷ್ಟು ಏರಿಸಿದ್ದು ಶೇ.6.50 ಕ್ಕೆ ಏರಿಕೆ ಮಾಡಿದೆ.
Published on
ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) ರೆಪೋ ದರವನ್ನು 25 ಮೂಲಾಂಶಗಳಷ್ಟು ಏರಿಸಿದ್ದು ಶೇ.6.50 ಕ್ಕೆ ಏರಿಕೆ ಮಾಡಿದೆ. ಮಾರುಕಟ್ಟೆ ಸ್ಥಿರತೆಗಾಗಿ ಈ ಕ್ರಮ ಜರುಗಿಸಲಾಗಿದೆ ಎಂದು ಆರ್ ಬಿಐ ಹೇಳಿದೆ.
ಆರ್ ಬಿಐ ತನ್ನ ದ್ವೈಮಾಸಿಕ ವರದಿಯಲ್ಲಿ ತಟಸ್ಥ ನೀತಿಯನ್ನೇ ಉಳಿಸಿಕೊಂಡಿದೆ.ಬ್ಯಾಂಕ್ ನ ಹಣಕಾಸು ನೀತಿ ಪರಾಮರ್ಶೆ ಸಮಿತಿಯು ರೆಪೋ ದರ ಹಾಗೂ ರಿವರ್ಸ್ ರೆಪೋ ದರ ಏರಿಕೆ ಪರವಾಗಿ ನಿರ್ಧಾರಕ್ಕೆ ಬಂದಿದೆ.
ಜಾಗತಿಕ ಹಣಕಾಸಿನ ಮಾರುಕಟ್ಟೆಯಲ್ಲಿನ ಅಸ್ಥಿರ ಚಂಚಲತೆ ಹಣದುಬ್ಬರದ ಮೇಲೆಯೂ ಪರಿಣಾಮ ಬೀರುತ್ತಿದೆ ಎಂದು ಸಮಿತಿ ಹೇಳಿದೆ.
ಆರ್ ಬಿಐ ಎಪ್ರಿಲ್‌ - ಸೆಪ್ಟಂಬರ್‌ ಅವಧಿಯಲ್ಲಿ ಜಿಡಿಪಿ ಬೆಳವಣಿಗೆಯನ್ನು ಶೇ.7.5 - ಶೇ.7.6 ಎಂದು ಅಂದಾಜಿಸಿದ್ದು ಹಣಕಾಸು ವರ್ಷ 2019ರಲ್ಲಿ ಜಿಡಿಪಿ ಶೇ.7.4ರಷ್ಟಕ್ಕೆ ಸ್ಥಿರವಾಗಿದೆ.
ಇದಕ್ಕೂ ಮುನ್ನ ಜೂನ್ ನಲ್ಲಿ ಆರ್ ಬಿಐ ನಾಲ್ಕು ವರ್ಷಗಳ ಬಳಿಕ ರೆಒಫ್ ದರವನ್ನು 25 ಮೂಲಾಂಶದಷ್ಟು ಏರಿಕೆ ಮಾಡಿತ್ತು.ರೆಪೋ ದರ ಏರಿಕೆ ಪರಿಣಾಮ ಗೃಹ ಸಾಲ, ಇಎಂಐ ಪ್ರಮಾಣ ಸಹ ಏರಿಕೆಯಾಗುವ ಸಾಧ್ಯತೆ ಇದೆ.
ಬ್ಯಾಂಕ್ ಗಳಿಂದ ಸಾಲ ತೆಗೆದುಕೊಳ್ಳಲು ಬಯಸುವವರಿಗೆ ಆರ್ ಬಿಐ ಇದೀಗ ಕೆಟ್ಟ ಸುದ್ದಿಯೊಂದನ್ನು ನೀಡಿದೆ/ ಆರ್ ಬಿಐ ರೆಪೋ ದರ ಹೆಚ್ಚಳ ಮಾಡಿರುವ ಕಾರಣ ಮನೆ ಸಾಲ, ವಾಹನ ಹಾಗೂ ವೈಯುಕ್ತಿಕ ಸಾಲ ದ ಮೇಲಿನ ಬಡ್ಡಿಯಲ್ಲಿ ಹೆಚ್ಚಳವಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com