ಆರ್ ಬಿಐ ಕೇಂದ್ರೀಯ ಮಂಡಳಿ ನಿರ್ದೇಶಕರಾಗಿ ಗುರುಮೂರ್ತಿ, ಸತೀಶ್ ಮರಾಠೆ ನೇಮಕ

ಭಾರತೀಯ ರಿಸರ್ವ್ ಬ್ಯಾಂಕ್ ನ ಕೇಂದ್ರೀಯ ಮಂಡಳಿ ಅರೆಕಾಲಿಕ ನಿರ್ದೇಶಕರಾಗಿ ಎಸ್. ಗುರುಮೂರ್ತಿ ಹಾಗೂ ಸತೀಶ್ ಮರಾಠೆ ಅವರುಗಳ ನೇಮಕಕ್ಕೆ ಕ್ಯಾಬಿನೆಟ್ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ.
ಎಸ್. ಗುರುಮೂರ್ತಿ ಹಾಗೂ ಸತೀಶ್ ಮರಾಠೆ
ಎಸ್. ಗುರುಮೂರ್ತಿ ಹಾಗೂ ಸತೀಶ್ ಮರಾಠೆ
Updated on
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ನ ಕೇಂದ್ರೀಯ ಮಂಡಳಿ ಅರೆಕಾಲಿಕ ನಿರ್ದೇಶಕರಾಗಿ ಎಸ್. ಗುರುಮೂರ್ತಿ ಹಾಗೂ ಸತೀಶ್ ಮರಾಠೆ ಅವರುಗಳ ನೇಮಕಕ್ಕೆ ಕ್ಯಾಬಿನೆಟ್ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ.
ಗುರುಮೂರ್ತಿ ತಮಿಳು ನಿಯತಕಾಲಿಕೆ ’ತುಗಲಕ್’ ನ ಸಂಪಾದಕರು ಮಾತ್ರವಲ್ಲದೆ ಚಾರ್ಟರ್ಡ್ ಅಕೌಂಟೆಂಟ್, ಆರ್ಥಿಕ ಮತ್ತು ರಾಜಕೀಯ ಅಂಕಣಕಾರರೂ ಆಗಿದ್ದಾರೆ. 
ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯಿಂದ ಈ ನೇಮಕಾತಿಗಳ ಪ್ರಸ್ತಾವನೆ ಬಂದಿತ್ತು ಎಂದು ನೋಟೀಸಿನಲ್ಲಿ ಹೇಳಲಾಗಿದೆ.
15 ಸದಸ್ಯರನ್ನು ಒಳಗೊಂಡಿರುವ  ಕೇಂದ್ರ ಬ್ಯಾಂಕ್ ನ ಉನ್ನತ ನಿರ್ದೇಶಕರ ಮಂಡಳಿಗೆ ಇದೀಗ ಇಬ್ಬರು ಹೊಸ ನಿರ್ದೇಶಕರು ನೇಮಕವಾಗಿದ್ದು ನೇಮಕಾತಿ ಆದೇಶದ ದಿನಾಂಕದಿಂದ ನಾಲ್ಕು ವರ್ಷಗಳ ಕಾಲ ಅವರು ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com