ಆರ್ ಬಿಐ
ಆರ್ ಬಿಐ

ಉಪ ಗವರ್ನರ್ ಎನ್.ಎಸ್. ವಿಶ್ವನಾಥನ್ ಆರ್ ಬಿಐ ಹಂಗಾಮಿ ಮುಖ್ಯಸ್ಥ?

ಆರ್ ಬಿಐ ಗವರ್ನರ್ ಆಗಿದ್ದ ಊರ್ಜಿತ್ ಪಟೇಲ್ ಆವ್ರ ಅನಿರೀಕ್ಷಿತ ರಾಜೀನಾಮೆ ಬಳಿಕ ರಿಸರ್ವ್ ಬ್ಯಾಂಕ್ ಹಿರಿಯ ಮುಖ್ಯಸ್ಥ ಎನ್.ಎಸ್.ವಿಶ್ವನಾಥನ್ ಅವರನ್ನು ಹಂಗಾಮಿ....
ನವದೆಹಲಿ: ಆರ್ ಬಿಐ ಗವರ್ನರ್ ಆಗಿದ್ದ ಊರ್ಜಿತ್ ಪಟೇಲ್ ಆವ್ರ ಅನಿರೀಕ್ಷಿತ ರಾಜೀನಾಮೆ ಬಳಿಕ ರಿಸರ್ವ್ ಬ್ಯಾಂಕ್  ಹಿರಿಯ ಮುಖ್ಯಸ್ಥ ಎನ್.ಎಸ್.ವಿಶ್ವನಾಥನ್ ಅವರನ್ನು ಹಂಗಾಮಿ ಗವರ್ನರ್ ಆಗಿ ನೇಮಕ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
2016 ರ ಜುಲೈ 4ರಂದು ವಿಶ್ವನಾಥನ್ ಆರ್ ಬಿಐ ನ ಉಪ ಗವರ್ನರ್ ಆಗಿ ಮೂರು ವರ್ಷಗಳ ಅವಧಿಗೆ ನೇಮಕವಾಗಿದ್ದರು. ಇವರೇನಾದರೂ ಹಂಗಾಮಿ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡಲ್ಲಿ ಶುಕ್ರವಾರ ನಿಗದಿಯಾಗಿರುವ ಕೇಂದ್ರ ಮಂಡಳಿಯ ಸಭೆಯ ಮುಖ್ಯಸ್ಥರೂ ಆಗಲಿದ್ದಾರೆ.
ಶುಕ್ರವಾರದ ಸಭೆ ನಿರ್ಣಾಯಕವಾಗಿದೆ ಎನ್ನಲಾಗಿದ್ದು ಸಭೆಯಲ್ಲಿ ಆಡಳಿತದ ಸಮಸ್ಯೆ, ಸಣ್ಣ, ಮದ್ಯಮ ಪ್ರಮಾಣದ ಉತ್ಪಾದನಾ ಕ್ಷೇತ್ರಗಳಿಗೆ ಬಂಡವಾಳ ಹಾಗೂ ಸಾಲದ ಹರಿವಿನ ಕುರಿತು ಚರ್ಚಿಸಲಿದೆ.
ಮೂಲಗಳು ಹೇಳುವಂತೆ ಆರ್ ಬಿಐ ನಂತಹಾ ಪ್ರಮುಖ ಸಂಸ್ಥೆಗಳು ದೀರ್ಘಾವಧಿಗೆ ನಾಯಕತ್ವರಹಿತವಾಗಿರುವಂತಿಲ್ಲ. ಹೀಗಾಗಿ ಪಟೇಲ್ ರಿಂದ ತೆರವಾದ ಸ್ಥಾನಕ್ಕೆ ಸರ್ಕಾರ ಅತಿ ಶೀಘ್ರವಾಗಿ ಹೊಸ ಮುಖ್ಯಸ್ಥರ ನೇಮಕ ಮಾಡಲು ಕ್ರಮ ತೆಗೆದುಕೊಳ್ಳುತ್ತದೆ.
ಆರ್ ಬಿಐನ ಇತರೆ ಮೂವರು ಉಪ ಗವರ್ನರ್ ಗಳೆಂದರೆ ವೈರಲ್ ಆಚಾರ್ಯ, ಬಿ ಪಿ ಕನುಂಗೋ ಹಾಗೂ ಎಮ್ ಕೆ ಜೈನ್. ಇದರಲ್ಲಿ ವಿಶ್ವನಾಥನ್ ಹಾಗೂ ಕನುಂಗೋ ಅವರುಗಳು ಕೇಂದ್ರ ಬ್ಯಾಂಕ್ ನ ವೃತ್ತಿಪರರಾಗಿದ್ದಾರೆ.
ಕೇಂದ್ರ ಸರ್ಕಾರ ಹಾಗೂ ಆರ್ ಬಿಐ ನಡುವಿನ ತಿಕ್ಕಾಟ ತೀವ್ರಗೊಂಡ ಬೆನ್ನಲ್ಲೇ "ವೈಯುಕ್ತಿಕ ಕಾರಣ" ನೀಡಿ ಆರ್ ಬಿಐ ಗವರ್ನ ರ್ ಆಗಿದ್ದ ಊರ್ಜಿತ್ ಪಟೇಲ್ ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

Related Stories

No stories found.

Advertisement

X
Kannada Prabha
www.kannadaprabha.com