ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ)ನ ಸ್ವಾಯತ್ತತೆ, ವಿಶ್ವಾಸಾರ್ಹತೆ ಹಾಗೂ ಸಮಗ್ರತೆಯನ್ನು ಎತ್ತಿ ಹಿಡಿಯಲು ಶಕ್ತಿ ಮೀರಿ ಪ್ರಯತ್ನಿಸುವುದಾಗಿ ಆರ್ ಬಿಐ ನೂತನ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಬುಧವಾರ ಹೇಳಿದ್ದಾರೆ.
ಇಂದು ಆರ್ ಬಿಐ ನ 25ನೇ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಕ್ತಿಕಾಂತ್ ದಾಸ್ ಅವರು, ಆರ್‌ಬಿಐ ಗವರ್ನರ್ ಆಗಿ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿರುವುದನ್ನು ನಾನು ಬಲು ದೊಡ್ಡ ಗೌರವವೆಂದು ತಿಳಿಯುತ್ತೇನೆ ಎಂದರು.
ಸರ್ಕಾರ ಸೇರಿದಂತೆ ಪ್ರತಿ ಪೋಷಕರನ್ನು ವಿಶ್ವಾಸಕ್ಕೆ ಕೆಲಸ ಮಾಡುತ್ತೇನೆ. ದೇಶದ ಆರ್ಥಿಕ ಹಿತಾಸಕ್ತಿಗೆ ಅನುಗುಣವಾಗಿ ದುಡಿಯಲು ನಾನು ನನ್ನ ಶಕ್ತಿ ಮೀರಿ ಯತ್ನಿಸುತ್ತೇನೆ' ಎಂದು ಶಕ್ತಿಕಾಂತ್ ದಾಸ್ ಅವರು ಹೇಳಿದ್ದಾರೆ.
ದಾಸ್ ಅವರು 15ನೇ ಹಣಕಾಸು ಆಯೋಗದ ಹಾಲಿ ಸದಸ್ಯರು ಮತ್ತು ಆರ್ಥಿಕ ವ್ಯವಹಾರಗಳ ಸಮಿತಿಯ ಮಾಜಿ ಕಾರ್ಯದರ್ಶಿ ಆಗಿದ್ದಾರೆ.
ಊರ್ಜಿತ್ ಪಟೇಲ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಕೇಂದ್ರ ಸರ್ಕಾರ ಶಕ್ತಿಕಾಂತ್ ದಾಸ್ ಅವರನ್ನು ನಿನ್ನೆ ನೇಮಕ ಮಾಡಿತ್ತು.