ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ: ಮುಂದಿನ ವಾರ ಐದು ದಿನ ಬ್ಯಾಂಕ್ ರಜೆ, ಹಣ ಬೇಕಾದ್ರೆ ಈಗ್ಲೇ ತಕೊಳ್ಳಿ

: ಡಿಸೆಂಬರ್ 21 ರಿಂದ ಐದು ದಿನಗಳ ಕಾಲ ದೇಶಾದ್ಯಂತ ಬ್ಯಾಂಕ್ ಗಳು ಬಾಗಿಲು ಮುಚ್ಚಲಿದೆ. ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಯುಎಫ್ ಬಿಯು (ಬ್ಯಾಂಕ್ ಒಕ್ಕೂಟ)....
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ
ನವದೆಹಲಿ: ಡಿಸೆಂಬರ್ 21 ರಿಂದ ಐದು ದಿನಗಳ ಕಾಲ ದೇಶಾದ್ಯಂತ ಬ್ಯಾಂಕ್ ಗಳು ಬಾಗಿಲು ಮುಚ್ಚಲಿದೆ. ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಯುಎಫ್ ಬಿಯು  (ಬ್ಯಾಂಕ್ ಒಕ್ಕೂಟ)ಡಿಸೆಂಬರ್ 26ರಂದು  ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದೆ. ಇದಲ್ಲದೆ ಅಖಿಲ ಬಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ಸಹ ಪ್ರತ್ಯೇಕವಾಗಿ ಡಿಸೆಂಬರ್ 21ರಂದು ಒಂದು ದಿನದ ಮುಷ್ಕರ ನಡೆಸಲಿದೆ. ಹೀಗಾಗಿ ಗ್ರಾಹಕರು ಅಗತ್ಯ ಹಣದ ವಹಿವಾಟನ್ನು ಈ ವಾರವೇ ತುರ್ತಾಗಿ ಮಾಡಿಕೊಳ್ಳುವುದು ಒಳಿತು, ಅಲ್ಲದೆ ಅಗತ್ಯವಾಗಿರುವ ಹಣವನ್ನು ಡ್ರಾ ಮಾಡಿಟ್ಟುಕೊಳ್ಳುವುದು ಒಳ್ಳೆಯದು.
ಡಿಸೆಂಬರ್ 21ರಂದು ಶುಕ್ರವಾರ ಬ್ಯಾಂಕ್ ನೌಕರರ ಒಕ್ಕೂಟದ ಮುಷ್ಕರವಾಗಿದ್ದರೆ 22 ಶನಿವಾರನಾಲ್ಕನೇ ಶನಿವಾರದ ರಜೆ ಇರಲಿದೆ.23 ಭಾನುವಾರವಾದರೆ 25 ಮಂಗಳವಾರ ಕ್ರಿಸ್ ಮಸ್ ಪ್ರಯುಕ್ತ ರಜೆ, 26ಕ್ಕೆ ಬ್ಯಾಂಕ್ ಒಕ್ಕೂಟದ ರಾಷ್ಟ್ರವ್ಯಾಪಿ ಮುಷ್ಕರವಿರಲಿದ್ದು ಈ ನಡುವೆ ಸೋಮವಾರ ಡಿಸೆಂಬರ್ 24ರಂದು ಮಾತ್ರವೇ ಬ್ಯಾಂಕ್ ವ್ಯವಹಾರ ನಡೆಯಲಿದೆ.
ಆದರೆ ಒಂದು ವೇಳೆ ಸಿಬ್ಬಂದಿಗಳು ಆ ದಿನವೂ ರಜೆ ಹಾಕಿದ್ದಾದರೆ ಮತ್ತೆ ಬ್ಯಾಂಕ್ ಗಳ ವ್ಯವಹಾರ ಏರುಪೇರಾಗುವುದುಅರಲ್ಲಿ ಅನುಮಾನವಿಲ್ಲ.
ಬ್ಯಾಂಕುಗಳ ವಿಲೀನ, ವೇತನ ತಾರತಮ್ಯ ಸೇರಿ ಅನೇಕ ಬೇಡಿಕೆಗಳನ್ನಿಟ್ಟು ಬ್ಯಾಂಕ್ ಒಕ್ಕೂಟ ಹಾಗೂ ನೌಕರರು ಪ್ರತ್ಯೇಕವಾಗಿ ಪ್ರತಿಭಟನೆ, ಮುಷ್ಕರಗಳನ್ನು ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com