ಬ್ಯಾಂಕ್ ವಂಚನೆಗಳಿಂದ 3 ವರ್ಷಗಳಲ್ಲಿ 1.10 ಲಕ್ಷ ಕೋಟಿ ರೂ. ನಷ್ಟ: ಆರ್ ಬಿಐ ಮಾಹಿತಿ

ಬ್ಯಾಂಕ್ ವಂಚನೆ ಪ್ರಕರಣದ ವಿರುದ್ಧ ಸರ್ಕಾರದ ಕ್ರಮಗಳ ಸಹಿತ ಪಿಎನ್ಬಿ ವಂಚನೆ ಪ್ರಕರಣ ಆರೋಪಿ ನೀರವ್ ಮೋದಿ ಸೇರಿ ಹಲವರ ವಿರುದ್ಧ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾಗಿದೆ,
ಆರ್ ಬಿಐ- ಸಂಗ್ರಹ ಚಿತ್ರ
ಆರ್ ಬಿಐ- ಸಂಗ್ರಹ ಚಿತ್ರ
ನವದೆಹಲಿ: ಬ್ಯಾಂಕ್ ವಂಚನೆ ಪ್ರಕರಣದ ವಿರುದ್ಧ ಸರ್ಕಾರದ ಕ್ರಮಗಳ ಸಹಿತ ಪಿಎನ್ಬಿ ವಂಚನೆ ಪ್ರಕರಣ ಆರೋಪಿ ನೀರವ್ ಮೋದಿ ಸೇರಿ ಹಲವರ ವಿರುದ್ಧ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾಗಿದೆ, ಆದರೆ ಕಳೆದ ಕೆಲ ವರ್ಷಗಳಿಂಡ ತನಿಖಾ ಸಂಸ್ಥೆಗಳ ಕಣ್ತಪ್ಪಿಸಿ ಸಾವಿರಾರು ಕೊಟಿ ರು ಅವ್ಯವಹಾರ ನಡೆದಿರುವುದು ವರದಿಯಾಗಿದೆ.
ಕಳೆದ ಮೂರೂವರೆ ವರ್ಷಗಳಲ್ಲಿ  ರೂ. 1.10 ಲಕ್ಷ ಕೋಟಿ ಬ್ಯಾಂಕ್ ವಂಚನೆ ನಡೆದಿದೆ ಎಂದು ಇತ್ತೀಚಿನ ಆರ್ ಬಿಐ  ಅಂಕಿ ಅಂಶಗಳು ಬಹಿರಂಗಪಡಿಸಿದೆ. 2015-16, 2016 -17 ಮತ್ತು 2017 -18 ರ ನಡುವೆ ಇಂತಹ ವಂಚನೆ ಪ್ರಕರಣಗಳು  4,693 ರಿಂದ 5,917 ಕ್ಕೆ ಏರಿದೆಯಾಗಿದ್ದರೂ ಈ ವರ್ಷದ ಮೊದಲ ಆರು ತಿಂಗಳುಗಳಲ್ಲಿ 3,416 ದೂರುಗಳು ಮಾತ್ರವೇ ದಾಖಲಾಗಿದೆ.
ಆರ್ ಬಿಐ ಮಾಹಿತಿಯ ಅನುಸಾರ ಪ್ರತಿ ವರ್ಷ ಸುಮಾರು 1 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ವಂಚನೆ ಪ್ರಕರಣಗಳ ಸಂಖ್ಯೆಯಲ್ಲಿ ಶೇ.20ರಷ್ಟು ಏರಿಕೆ ಆಗುತ್ತಿದೆ.ಇಂತಹಾ ಪ್ರಕರಣಗಳು 2015 -16 ಮತ್ತು 2016 -17 ರ ನಡುವೆ 4,693 ರಿಂದ 5,076 ಕ್ಕೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಈ ವರ್ಷದ ಮೊದಲ ಆರು ತಿಂಗಳಲ್ಲಿ 3,416 ಬ್ಯಾಂಕ್ ವಂಚನೆ ಪ್ರಕರಣಗಳು ದಾಖಲಾಗಿವೆ ಮತ್ತು ಇದು 30,420 ಕೋಟಿ ರೂ.ಮೊತ್ತವನ್ನು ಒಳಗೊಂಡಿದೆ.
ನೀರವ್ ಮೋದಿ ಪ್ರಕರಣದಲ್ಲಿ , ಕಿರಿಯ ಬ್ಯಾಂಕ್ ಅಧಿಕಾರಿಗಳು ಎರಡು ಆಭರಣ ಉದ್ಯಮಿಗಳೊಡನೆ ಸಂಬಂಧ ಹೊಂದಿರುವ ಸಂಸ್ಥೆಗಳಿಗೆ ಎಲ್ ಓಯು ನೀಡಿರುತ್ತಾರೆ.ರೆ. ಈ ವಹಿವಾಟುಗಳು ಕೋರ್ ಬ್ಯಾಂಕಿಂಗ್ ಗೆ ಸಂಬಂಧಿಸಿಲ್ಲ ಆದ ಕಾರಣ ಹಗರಣದ ಪತ್ತೆ ಸಾಧ್ಯವಾಗಿಲ್ಲ ಎನ್ನಲಾಗಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ "ದೊಡ್ಡ ಮೌಲ್ಯದ ಬ್ಯಾಂಕ್ ವಂಚನೆಗಖನ್ನುಸಕಾಲಕ್ಕೆ ಪತ್ತೆ ಮಾಡಿ ತನಿಖೆ ನಡೆಸುವ" ಬಗ್ಗೆ ಸರ್ಕಾರ ಇದಾಗಲೇ ಮಾರ್ಗದರ್ಶಿ ಸೂತ್ರವನ್ನು ರೂಪಿಸಿದೆ.
ಸರ್ಕಾರದ ಮಾರ್ಗದರ್ಶಿ ಸೂತ್ರದ ಪ್ರಕಾರ 50 ಕೋಟಿ ರೂ.ಗಳನ್ನು ಮೀರಿದ ಎಲ್ಲಾ ಖಾತೆಗಳು ಯಾವುದೇ ರೀತಿಯಲ್ಲಿ ಲಾಭರಹಿತ ಆಸ್ತಿ ಎಂಬ ವರ್ಗೀಕರಣದಲ್ಲಿ ಕಂಡುಬಂದರೆ ಬ್ಯಾಂಕುಗಳು ಸಂಭವನೀಯ ವಂಚನೆ ದೃಷ್ಟಿಕೋನದಿಂದ ಪರಿಶೀಲನೆ ನಡೆಸಬೇಕು.ಮತ್ತು ಎನ್ಪಿಎಗಳ ಅವಲೋಕನಕ್ಕಾಗಿ ಬ್ಯಾಂಕಿನ ಸಮಿತಿಯ ಮುಂದೆ ತನಿಖಾ ವರದಿಯನ್ನೂ ನೀಡಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com