ನೊಯ್ಡಾ: ದಿನಕ್ಕೆ 35 ಲಕ್ಷ ವಂಚಿಸುತ್ತಿದ್ದ ನಕಲಿ ಕಾಲ್ ಸೆಂಟರ್ ನ 126 ಮಂದಿ ಬಂಧನ

ಅಮೆರಿಕದ ಪ್ರಜೆಗಳಿಗೆ ದಿನಕ್ಕೆ ಸುಮಾರು 35 ಲಕ್ಷ ರುಪಾಯಿ ವಂಚಿಸುತ್ತಿದ್ದ ನಕಲಿ ಕಾಲ್ ಸೆಂಟರ್ ನ 126 ಸಿಬ್ಬಂದಿಯನ್ನು.....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನೊಯ್ಡಾ: ಅಮೆರಿಕದ ಪ್ರಜೆಗಳಿಗೆ ದಿನಕ್ಕೆ ಸುಮಾರು 35 ಲಕ್ಷ ರುಪಾಯಿ ವಂಚಿಸುತ್ತಿದ್ದ ನಕಲಿ ಕಾಲ್ ಸೆಂಟರ್ ನ 126 ಸಿಬ್ಬಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನೊಯ್ಡಾದ ಸೆಕ್ಟರ್‌ 63ರಲ್ಲಿ ಕಾಲ್ ಸೆಂಟರ್‌ ವಂಚನೆಯಲ್ಲಿ ತೊಡಗಿದ್ದ 126 ಮಂದಿಯನ್ನು ಬಂಧಿಸಲಾಗಿದ್ದು, ಇದು ಇದುವರೆಗೂ ನಡೆದ ಅತಿದೊಡ್ಡ ಕಾರ್ಯಾಚರಣೆ ಎನ್ನಲಾಗಿದೆ.
ಅಮೆರಿಕ ಮತ್ತು ಕೆನಡಾದ ಪ್ರಜೆಗಳನ್ನು ಗುರಿಯಾಗಿಸಿಕೊಂಡು, ಅವರನ್ನು ನಕಲಿ ಮಾಹಿತಿಯೊಂದಿಗೆ ಬೆದರಿಸಿ ಹಣ ಪೀಕುತ್ತಿದ್ದ ಸೈಬರ್ ಖದೀಮರನ್ನು ಬಂಧಿಸಲಾಗಿದೆ.
ಅಮೆರಿಕ/ಕೆನಡಾದ ಪ್ರಜೆಗಳ ಕಂಪ್ಯೂಟರ್‌ಗಳಿಗೆ ವೈರಸ್‌ಗಳನ್ನು ಹಬ್ಬಿಸಿ,ಅಲ್ಲಿನ ಸರಕಾರದ ವತಿಯಿಂದ ನೀಡಲಾಗುವ ಪ್ರಮುಖ ದಾಖಲೆ 'ಸೋಷಿಯಲ್‌ ಸೆಕ್ಯೂರಿಟಿ ನಂಬರ್‌' ಅನ್ನು ಕದಿಯಲಾಗುತ್ತದೆ. ಜತೆಗೆ ಇಲ್ಲಸಲ್ಲದ ಸುಳ್ಳು ಮಾಹಿತಿಯನ್ನು ನೀಡಿ 'ನಿಮ್ಮನ್ನು ಎಫ್‌ಬಿಐ ಬಂಧಿಸುತ್ತದೆ' ಎಂದು ಬೆದರಿಸುವುದು ಸಹ ಕಾರ್ಯತಂತ್ರದ ಭಾಗವಾಗಿತ್ತು. ಇಂತಹ ಸಂತ್ರಸ್ತರಿಗೆ ಸಮಸ್ಯೆಯನ್ನು ಬಗೆಹರಿಸಿಕೊಡಲು ಭಾರಿ ಮೊತ್ತದ ಹಣಕ್ಕಾಗಿ ಬೇಡಿಕೆ ಇಡಲಾಗುತ್ತಿತ್ತು. ಹೀಗೆ ಕೋಟ್ಯಂತರ ರೂ. ವಂಚನೆ ನಡೆಸಿರುವುದು ಪ್ರಕರಣದ ತನಿಖೆಯಿಂದ ಬಯಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com