ಈ ವರ್ಷ ಆರ್ಥಿಕ ಬೆಳವಣಿಗೆ ದರ ಶೇ.6.6 ರಷ್ಟಿರಲಿದೆ, ಆದರೆ ಮುಂದಿನ ವರ್ಷದ ವೇಳೆಗೆ ಇದು ಶೇ.7.2 ರಷ್ಟಾಗಲಿದೆ ಎಂದು ಆರ್ ಬಿಐ ಹೇಳಿದೆ. ರಿಸರ್ವ್ ಬ್ಯಾಂಕ್ ನ ಆರ್ಥಿಕ ನೀತಿ ಸಮಿತಿ ಸಭೆಯ ಬಳಿಕ ಈ ವರದಿ ಪ್ರಕಟಗೊಂಡಿದ್ದು, ಬ್ಯಾಂಕ್ ಗಳಿಗೆ ಪುನಃ ಬಂಡವಾಳ ತೊಡಗಿಸುವುದರಿಂದ ಹೆಚ್ಚಿನ ಹೂಡಿಕೆಗೆ ಅವಕಾಶ ಸಿಗಲಿದೆ ಎಂದೂ ಸಮಿತಿ ಹೇಳಿದೆ.