ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸದ 8 ಲಕ್ಷ ಕಂಪನಿಗೆಳ ಮೇಲೆ ಐಟಿ ಕೆಂಗಣ್ಣು

ಏಪ್ರಿಲ್ 2018ರಿಂದ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಲು ವಿಫಲವಾದರೆ 8 ಲಕ್ಷ ಕಂಪನಿಗಳ ನಿರ್ದೇಶಕರ ವಿರುದ್ಧ....
ನವದೆಹಲಿ: ಏಪ್ರಿಲ್ 2018ರಿಂದ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಲು ವಿಫಲವಾದರೆ 8 ಲಕ್ಷ ಕಂಪನಿಗಳ ನಿರ್ದೇಶಕರ ವಿರುದ್ಧ ಕಾನೂನು ಕ್ರಮ ಜರುಗಿಸಲು ಆದಾಯ ತೆರಿಗೆ ಇಲಾಖೆ ಮುಂದಾಗಿದೆ.
ಇತ್ತೀಚಿಗಷ್ಟೇ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಮಂಡಿಸಿದ 2018-19ನೇ ಸಾಲಿನ ಬಜೆಟ್ ನಲ್ಲಿ 3 ರುಪಾಯಿವರೆಗಿನ ತೆರಿಗೆ ಹೊಣೆಗಾರಿ ವಿನಾಯ್ತಿಯನ್ನು ತೆಗೆದು ಹಾಕಿದ್ದರು. ಇದೀಗ ಕೇಂದ್ರ ಸರ್ಕಾರ ಶೂನ್ಯ ಹೊಣೆಗಾರಿಕೆ ಇರುವ ಕಂಪನಿಗಳು ಸೇರಿದೆತೆ ನೋಂದಾಯಿತ ಎಲ್ಲಾ ಕಂಪನಿಗಳು ಪ್ರತಿ ವರ್ಷ ಆದಾಯ ತೆರಿಗೆ ಫೈಲ್ ಮಾಡುವುದನ್ನು ಕಡ್ಡಾಯಗೊಳಿಸಿದೆ.
ಕೇಂದ್ರ ಸರ್ಕಾರದ ಈ ಹೊಸ ನಿಯಮ ಏಪ್ರಿಲ್, 2018ರಿಂದ ಜಾರಿಗೆ ಬರಲಿದ್ದು, 3 ಸಾವಿರ ರುಪಾಯಿ ತೆರಿಗೆ ವಿನಾಯ್ತಿ ಪಡೆಯುತ್ತಿರುವ ಕಂಪನಿಗಳ ಹೊರತಾಗಿಯೂ ಕಾರ್ಪೋರೇಟ್ ವ್ಯವಹಾರ ಸಚಿವಾಲಯದಲ್ಲಿ 15 ಲಕ್ಷ ಕಂಪನಿಗಳು ನೋಂದಣಿಯಾಗಿವೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ನೋಂದಾಯಿತ 15 ಲಕ್ಷ ಕಂಪನಿಗಳ ಪೈಕಿ ಕೇವಲ 7 ಲಕ್ಷ ಕಂಪನಿಗಳು ಮಾತ್ರ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡುತ್ತಿದ್ದು, ಉಳಿದ 8 ಲಕ್ಷ ಕಂಪನಿಗಳು ತಮ್ಮ ತೆರಿಗೆ ಹೊಣೆಗಾರಿಕೆ 3 ಸಾವಿರ ರುಪಯಾಗಿಂತ ಕಡಿಮೆ ಇದೆ ಎಂದು ಹೇಳಿ ರಿಟರ್ನ್ಸ್ ಫೈಲ್ ಮಾಡುತ್ತಿದ್ದವು. ಆದರೆ ಈಗ ಆ ಕಂಪನಿಗಳು ರಿಟರ್ನ್ಸ್ ಫೈಲ್ ಮಾಡುವುದು ಕಡ್ಡಾಯ ಮಾಡಲಾಗಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com