ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ 2011ರಿಂದಲೂ ನಡೆಯುತ್ತಿತ್ತು: ಸಿಇಒ

11 ಸಾವಿರ ಕೋಟಿ ರೂಪಾಯಿ ವಂಚನೆ 2011 ರಿಂದಲೂ ನಡೆಯುತ್ತಿತ್ತು ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಎಂಡಿ, ಸಿಇಒ ಸುನಿಲ್ ಮೆಹ್ತಾ ಹೇಳಿದ್ದಾರೆ.
ಪಂಜಾಬ್ ಬ್ಯಾಂಕ್
ಪಂಜಾಬ್ ಬ್ಯಾಂಕ್
ನವದೆಹಲಿ: 11 ಸಾವಿರ ಕೋಟಿ ರೂಪಾಯಿ ವಂಚನೆ 2011 ರಿಂದಲೂ ನಡೆಯುತ್ತಿತ್ತು ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಎಂಡಿ, ಸಿಇಒ ಸುನಿಲ್ ಮೆಹ್ತಾ ಹೇಳಿದ್ದಾರೆ. 
ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಸುನಿಲ್ ಮೆಹ್ತಾ, 2011 ರಲ್ಲೇ ಪಿಎನ್ ಬಿ ಅಧಿಕಾರಿಗಳು ಹಗರಣವನ್ನು ಗುರುತಿಸಿದ್ದರು. ಅಷ್ಟೇ ಅಲ್ಲದೇ ಹಗರಣದ ಬಗ್ಗೆ ಸಂಬಂಧಿಸಿದ ತನಿಖಾ ಸಂಸ್ಥೆಗಳಿಗೂ ಮಾಹಿತಿ ನೀಡಿದ್ದರು. ನಾವು ಹಣವನ್ನು ವಾಪಸ್ ಪಡೆಯಲು ಕ್ರಮ ಕೈಗೊಂಡಿದ್ದೇವೆ ಎಂದು ಸುನಿಲ್ ಮೆಹ್ತಾ ಹೇಳಿದ್ದಾರೆ. 
ಬ್ಯಾಂಕ್ ನ ಇಬ್ಬರು ನೌಕರರು ಅಕ್ರಮ ಹಣ ವರ್ಗಾವಣೆಯನ್ನು ನಡೆಸಿದ್ದರು, ಈ ಸಂಬಂಧ ಜ.29 ರಂದು ಸಿಬಿಐಗೆ ಪಿಎನ್ ಬಿ ದೂರು ನೀಡಿತ್ತು ಜ.31 ರಂದು ದೂರು ದಾಖಲಾಗಿದೆ ಎಂದು ಸುನಿಲ್ ಮೆಹ್ತಾ ಮಾಹಿತಿ ನೀಡಿದ್ದಾರೆ. ವಂಚನೆ ಪ್ರಕರಣದ ರೂವಾರಿಯಾಗಿರುವ ನಿರಾವ್ ಮೋದಿ ಜ.1 ರಂದೇ ವಿದೇಶಕ್ಕೆ ತೆರಳಿದ್ದಾರೆ, ನಿರಾವ್ ಮೋದಿಗಾಗಿ ಲುಕ್ ಔಟ್ ನೊಟೀಸ್ ಜಾರಿ ಮಾಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com