ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ವಂಚನೆಯಿಂದ ಬ್ಯಾಂಕ್ ಗಳಿಗೆ 17,632 ಕೋಟಿಗೂ ಹೆಚ್ಚು ನಷ್ಟ: ತೆರಿಗೆ ಇಲಾಖೆ

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 11 ಸಾವಿರ ಕೋಟಿ ರೂಪಾಯಿ ವಂಚನೆಯಾಗಿದ್ದರೆ, ಬ್ಯಾಂಕ್ ಗಳಿಗೆ ಒಟ್ಟಾರೆ 17,632 ಕೋಟಿ ರೂಪಾಯಿ ನಷ್ಟ ಉಂಟಾಗಲಿದೆ ಎಂದು ತೆರಿಗೆ ಇಲಾಖೆ ಹೇಳಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ವಂಚನೆಯಿಂದ ಬ್ಯಾಂಕ್ ಗಳಿಗೆ 17,632 ಕೋಟಿಗೂ ಹೆಚ್ಚು ನಷ್ಟ: ತೆರಿಗೆ ಇಲಾಖೆ
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ವಂಚನೆಯಿಂದ ಬ್ಯಾಂಕ್ ಗಳಿಗೆ 17,632 ಕೋಟಿಗೂ ಹೆಚ್ಚು ನಷ್ಟ: ತೆರಿಗೆ ಇಲಾಖೆ
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 11 ಸಾವಿರ ಕೋಟಿ ರೂಪಾಯಿ ವಂಚನೆಯಾಗಿದ್ದರೆ, ಬ್ಯಾಂಕ್ ಗಳಿಗೆ ಒಟ್ಟಾರೆ 17,632 ಕೋಟಿ ರೂಪಾಯಿ ನಷ್ಟ ಉಂಟಾಗಲಿದೆ ಎಂದು ತೆರಿಗೆ ಇಲಾಖೆ ಹೇಳಿದೆ. 
2017 ರ ಮಾರ್ಚ್ ವರೆಗೂ ವಿವಿಧ ಬ್ಯಾಂಕ್ ಗಳು ನೀರವ್ ಮೋದಿ ಹಾಗೂ ಆತನ ಮಾನವ ಸಂಸ್ಥೆಗಳೊಂದಿಗೆ ಸಹಯೋಗದ ಕಂಪನಿಗಳಿಗೆ ಒಟ್ಟು 176.32 ಬಿಲಿಯನ್ ರೂಪಾಯಿಗಳಷ್ಟು ಸಾಲ ಮತ್ತು ಕಾರ್ಪೊರೇಟ್ ಗ್ಯಾರೆಂಟಿಗಳನ್ನು ನೀಡಿದ್ದು, ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ವಂಚನೆಯಾಗಿರುವುದರಿಂದ  ಬ್ಯಾಂಕ್ ಗಳಿಗೆ 17,632 ಕೋಟಿಗೂ ಹೆಚ್ಚು ನಷ್ಟ ಉಂಟಾಗುವ ಸಾಧ್ಯತೆ ಇದೆ ಎಂದು ತೆರಿಗೆ ಇಲಾಖೆ ಅಂದಾಜಿಸಿದೆ. 
ಕಳೆದ ವರ್ಷಕ್ಕಿಂತ ಈ ವರ್ಷಕ್ಕೆ ಬ್ಯಾಂಕ್ ಗಳು ನೀಡಿರುವ ಕಾರ್ಪೊರೇಟ್ ಗ್ಯಾರೆಂಟಿ ಹಾಗೂ ಲೋನ್ ಗಳು ಒಂದು ವರ್ಷದ ಅವಧಿಯಲ್ಲಿ ಇನ್ನೂ ಹೆಚ್ಚಾಗಿರುವ ಸಾಧ್ಯತೆ ಇದ್ದು ಒಟ್ಟು 3 ಬಿಲಿಯನ್ ಡಾಲರ್ ಗಿಂತ ಹೆಚ್ಚು ನಷ್ಟ ಉಂಟಾಗಲಿದೆ ಎಂದು ತೆರಿಗೆ ಇಲಾಖೆ ದಾಖಲಿಸಿರುವ ಅಂಶವನ್ನು ರಾಯಿಟರ್ಸ್ ವರದಿ ಮಾಡಿದೆ. 
ನೀರವ್ ಮೋದಿ ಮಾವ ಚೋಕ್ಸಿ ಒಡೆತನದ ಗೀತಾಂಜಲಿ ಜೆಮ್ಸ್ ಕಂಪನಿ 32 ಬ್ಯಾಂಕ್ ಗಳೊಂದಿಗೆ ವ್ಯವಹರಿಸುತ್ತಿತ್ತು, ಚೋಕ್ಸಿಗೆ ಸಾಲ ನೀಡುತ್ತಿದ್ದ ಬ್ಯಾಂಕ್ ಗಳ ಪೈಕಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಅಲ್ಲಹಾಬಾದ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಸಹ ಇವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com