ನೀರವ್ ಮೋದಿ ಸಂಸ್ಥೆ, ಕುಟುಂಬಸ್ಥರ 105 ಬ್ಯಾಂಕ್ ಅಕೌಂಟ್, 29 ಆಸ್ತಿ ತೆರಿಗೆ ವಂಚನೆಗೆ ದಾಖಲಿಸಿದ ಆದಾಯ ತೆರಿಗೆ!

ಪಂಜಾಬ್‌ ನ್ಯಾಷನಲ್ ಬ್ಯಾಂಕ್ ಗೆ 11,300 ಕೋಟಿ ರುಪಾಯಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಉದ್ಯಮಿ ನೀರವ್ ಮೋದಿ ಮತ್ತಷ್ಟು ಸಂಕಷ್ಟ...
ನೀರವ್ ಮೋದಿ
ನೀರವ್ ಮೋದಿ
Updated on
ಮುಂಬೈ/ನವದೆಹಲಿ: ಪಂಜಾಬ್‌ ನ್ಯಾಷನಲ್ ಬ್ಯಾಂಕ್ ಗೆ 11,300 ಕೋಟಿ ರುಪಾಯಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಉದ್ಯಮಿ ನೀರವ್ ಮೋದಿ ಮತ್ತಷ್ಟು ಸಂಕಷ್ಟ ಎದುರಾಗಿದ್ದು ತೆರಿಗೆ ವಂಚನೆ ತನಿಖೆಗೆ ನೀರವ್ ಮೋದಿಯ ಕುಟುಂಬಸ್ಥರು ಹಾಗೂ ಸಂಸ್ಥೆಯ 105 ಬ್ಯಾಂಕ್ ಆಕೌಂಟ್ ಹಾಗೂ 29 ಆಸ್ತಿಯನ್ನು ಆದಾಯ ತೆರಿಗೆ ಇಲಾಖೆ ಲಗತ್ತಿಸಿದೆ. 
ಜತೆಗೆ ವಿದೇಶಗಳಲ್ಲಿ ಕಾನೂನು ಬಾಹಿರ ಆಸ್ತಿಗಳನ್ನು ಹೊಂದಿರುವುದಕ್ಕಾಗಿ ಇಲಾಖೆ ನೀರವ್ ಮೋದಿ ವಿರುದ್ಧ ನೂತನ ಕಪ್ಪು ಹಣ ವಿರೋಧಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ಸಿಂಗಾಪುರದಲ್ಲಿ ಆಸ್ತಿ ಹೊಂದಿರುವುದಾಗಿ ಶಂಕಿಸಲಾಗಿದೆ. 
ಸಾಗರೋತ್ತರ ಅಕ್ರಮ ಆಸ್ತಿ, ವ್ಯವಹಾರಗಳ ಕುರಿತಂತೆ ಆದಾಯ ತೆರಿಗೆ ಇಲಾಖೆ 1961ರ ಕಾಯ್ದೆಯಡಿಯಲ್ಲಿ ಇತ್ತೀಚಿನವರೆಗೂ ತನಿಖೆ ನಡೆಸುತ್ತಿತ್ತು ಆದರೆ ಇದೀಗ 2015ರ ಕಪ್ಪು ಹಣ(ಬಹಿರಂಗ ಮಾಡದ ವಿದೇಶ ಆದಾಯ ಮತ್ತು ಆಸ್ತಿ) ಮತ್ತು ತೆರಿಗೆ ಕಾಯ್ದೆಯಡಿಯಲ್ಲಿ ಈ ಪ್ರಕರಣದ ತನಿಖೆಯನ್ನು ನಡೆಸಲಿದೆ. 
ಈ ಹೊಸ ಕಾಯ್ಡೆ ಅಡಿಯಲ್ಲಿ ಬಹಿರಂಗಪಡಿಸದ ವಿದೇಶಿ ಸ್ವತ್ತುಗಳು ಮತ್ತು ಆದಾಯದ ಮೇಲೆ ಶೇಖಡ 120ರಷ್ಟು ತೆರಿಗೆ ವಿಧಿಸುವ ಅವಕಾಶವಿದ್ದು ಜತೆಗೆ ಆರೋಪ ಸಾಬೀತಾದರೇ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ. 
1961ರ ಆದಾಯ ತೆರಿಗೆ ಕಾಯ್ದೆಯಡಿಯಲ್ಲಿ ಸೆಕ್ಷನ್ 276ಸಿ(1)(ತೆರಿಗೆ ತಪ್ಪಿಸಿಕೊಳ್ಳುವ ಉದ್ದೇಶಪೂರ್ವಕ ಪ್ರಯತ್ನ), 277ಎ(ಪರಿಶೀಲನೆಯಲ್ಲಿ ಸುಳ್ಳು ಹೇಳಿಕೆ), 278ಬಿ(ಕಂಪನಿಗಳಿಂದ ಅಪರಾಧ) ಮತ್ತು 278ಇ(ಶಿಕ್ಷಾರ್ಹ ಮಾನಸಿಕ ಸ್ಥಿತಿಯ ಊಹೆ) ಆದಾಯ ತೆರಿಗೆ ಇಲಾಖೆ ಮುಂಬೈನ ವಿಶೇಷ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ದಾಖಲಿಸಲಾಗಿದ್ದು ಪ್ರಕರಣದ ವಿಚಾರಣೆಯನ್ನು ಕೋರ್ಟ್ ಫೆಬ್ರವರಿ 27ರಂದು ನಡೆಸಬಹುದು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com