ನಿಮ್ಮ ಮಗುವಿನ ಶಿಕ್ಷಣಕ್ಕೆ ಹಣಕಾಸಿನ ಹೂಡಿಕೆ ಹೇಗೆ?

ಇಂದಿನ ಆಧುನಿಕ ಯುಗದಲ್ಲಿ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರಾಮುಖ್ಯತೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಇಂದಿನ ಆಧುನಿಕ ಯುಗದಲ್ಲಿ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗುತ್ತದೆ. ಕೈಯಲ್ಲಿ ಹಣವಿದ್ದರೆ ಓದಿಸಬಹುದು, ಇಲ್ಲದಿದ್ದರೆ ಏನು ಮಾಡುವುದು, ಹೇಗಪ್ಪಾ ಇಂದಿನ ದುಬಾರಿ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳನ್ನು ಓದಿಸುವುದು ಎಂಬುದು ಹಲವರ ಅಭಿಪ್ರಾಯ. 
ಹೌದು ನಗರ ಪ್ರದೇಶಗಳು ಸೇರಿದಂತೆ ಪಟ್ಟಣಗಳಲ್ಲಿ ಶಿಕ್ಷಣ ದುಬಾರಿಯಾಗುತ್ತಿದೆ. ಹಾಗೆಂದು ಬಡವರು, ಮಧ್ಯಮ ವರ್ಗದವರು ಕೂಡ ಶಿಕ್ಷಣ ನೀಡಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಪೋಷಕರು ಆರಂಭದಲ್ಲಿಯೇ ಸ್ಪಷ್ಟ ಗುರಿ ಇಟ್ಟುಕೊಂಡು ಸಂಪಾದನೆಯಲ್ಲಿ ಇಂತಿಷ್ಟು ಉಳಿತಾಯ ಮಾಡಬೇಕು. ಈ ಮೂರು ಅಂಶಗಳು ಪೋಷಕರಿಗೆ ತಮ್ಮ ಮಕ್ಕಳ ಶಿಕ್ಷಣ ಅಗತ್ಯವನ್ನು ಪೂರೈಸಲು ಸಹಾಯವಾಗುತ್ತದೆ ಎನ್ನುತ್ತಾರೆ ಹಣಕಾಸು ಯೋಜನೆಕಾರರು.
ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆಂದು ಇಂತಿಷ್ಟು ಹಣವೆಂದು ತೆಗೆದಿಟ್ಟುಕೊಳ್ಳಬೇಕು. ಮಕ್ಕಳ ಶಿಕ್ಷಣ ಯೋಜನೆಗಳು ಅಥವಾ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯದ ಅವಶ್ಯಕತೆಗಳನ್ನು ಪರಿಹರಿಸಲು ದತ್ತಿಯ ಮೊರೆ ಹೋಗಬೇಕುಚ.
ಅನೇಕ ವಿಮಾ ಕಂಪೆನಿಗಳು ಈ ವಿಭಾಗದಲ್ಲಿ ಯೋಜನೆಗಳನ್ನು ಜನರಿಗೆ ನೀಡುತ್ತಿದ್ದರೆ ಇಂದು ಅನೇಕ ಆಯ್ಕೆಗಳು ಪೋಷಕರ ಮುಂದಿವೆ. ಮಕ್ಕಳ ಶಿಕ್ಷಣಕ್ಕಾಗಿ ಹೂಡಿಕೆ ಮಾಡುವುದು ದೀರ್ಘಾವಧಿಯಾಗಿದ್ದು ಮತ್ತು ಗುರಿ ಆಧಾರಿತವಾಗಿದೆ ಎನ್ನುತ್ತಾರೆ ಹಣಕಾಸು ವಿಶ್ಲೇಷಕರು.
ಮಕ್ಕಳು ಶಾಲಾ ಶಿಕ್ಷಣವನ್ನು ಮುಗಿಸಿ ಕಾಲೇಜಿಗೆ ಕಾಲಿಡುವ ಹೊತ್ತಿಗೆ ಒಂದಷ್ಟು ಹಣವನ್ನು ಕೂಡಿಡಬೇಕು ಮತ್ತು ಮಕ್ಕಳು ಉನ್ನತ ಶಿಕ್ಷಣಕ್ಕೆ ಹೋಗುವ ವೇಳೆಗೆ ಅಥವಾ ವಿದೇಶಕ್ಕೆ ಶಿಕ್ಷಣಕ್ಕೆ ಸೇರುವುದಾದರೆ ಇನ್ನಷ್ಟು ಹಣವನ್ನು ಎತ್ತಿಡಬೇಕಾಗುತ್ತದೆ. ಇವೆಲ್ಲವೂ ದೀರ್ಘಾವಧಿಯ ಯೋಜನೆಗಳಾಗಿರುತ್ತದೆ. 
ಪೋಷಕರು ಗುರಿ ಇಟ್ಟುಕೊಂಡು ಹೂಡಿಕೆ ಆಯ್ಕೆಗಳು ಯಾವುದೆಲ್ಲ ಇರುತ್ತವೆ ಎಂಬುದನ್ನು ನೋಡಿಕೊಂಡು ಉತ್ತಮವಾದುದರಲ್ಲಿ ಹೂಡಿಕೆ ಮಾಡಬೇಕು ಎನ್ನುತ್ತಾರೆ ಅದಿಲ್ ಶೆಟ್ಟಿ ಬ್ಯಾಂಕ್ ಬಜಾರ್.ಕಾಂನ ಮುಖ್ಯಕಾರ್ಯನಿರ್ವಾಹಾಧಿಕಾರಿ.
ಮಾರುಕಟ್ಟೆಯ ಟ್ರೆಂಡ್ ನೋಡಿಕೊಂಡು ಈಕ್ವೆಟಿ ಫಂಡ್ ಮತ್ತು ಸಿಪ್, ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಗಳಲ್ಲಿ ಕೂಡ ಮಕ್ಕಳ ವಿದ್ಯಾಭ್ಯಾಸಕ್ಕೆ ಪೋಷಕರು ಹೂಡಿಕೆ ಮಾಡಬಹುದು ಎನ್ನುತ್ತಾರೆ ಅವರು.
ಹೆಣ್ಣು ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಯೋಜನೆ ಕೂಡ ಉತ್ತಮವಾಗಿರುತ್ತದೆ. ಮಾರುಕಟ್ಟೆಯಲ್ಲಿ ಇಂದು ಹಲವು ಹೂಡಿಕೆ ಆಯ್ಕೆಗಳು ಇದ್ದರೂ ಕೂಡ ಪೋಷಕರು ತಮ್ಮ ಹಣಕಾಸಿನ ಸಾಮರ್ಥ್ಯವನ್ನು ನೋಡಿಕೊಂಡು ಹೂಡಿಕೆ ಮಾಡಬೇಕು ಎನ್ನುತ್ತಾರೆ ಕೊಟಾಕ್ ಲೈಫ್ ಇನ್ಸೂರೆನ್ಸ್ ನ ಅಧಿಕಾರಿ ಸುನಿಲ್ ಶರ್ಮ. ದತ್ತಿ ನಿಧಿಗಳು ಬಹುತೇಕ ಪೋಷಕರಿಗೆ ಉತ್ತಮ ಎಂಬುದು ಅವರ ಅಭಿಪ್ರಾಯ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com