2017-18 ನೇ ಸಾಲಿನ ಪಿಎಫ್ ಠೇವಣಿ ಬಡ್ಡಿದರ ಇಳಿಕೆ!

ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ಒ) ಫೆ.21 ರಂದು 2017-18 ನೇ ಸಾಲಿನ ಪಿಎಫ್ ಬಡ್ಡಿದರವನ್ನು ಕಡಿಮೆ ಮಾಡಿರುವುದನ್ನು ಘೋಷಿಸಿದ್ದು...
2017-18 ನೇ ಸಾಲಿನ ಪಿಎಫ್ ಠೇವಣಿ ಬಡ್ಡಿದರ ಇಳಿಕೆ!
2017-18 ನೇ ಸಾಲಿನ ಪಿಎಫ್ ಠೇವಣಿ ಬಡ್ಡಿದರ ಇಳಿಕೆ!

ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ಒ) ಫೆ.21 ರಂದು 2017-18 ನೇ ಸಾಲಿನ ಪಿಎಫ್ ಬಡ್ಡಿದರವನ್ನು ಕಡಿಮೆ ಮಾಡಿರುವುದನ್ನು ಘೋಷಿಸಿದ್ದು, ಕಳೆದ ವರ್ಷ ಶೇ.8.65 ಇದ್ದ ಬಡ್ಡಿ ದರ ಈ ವರ್ಷ ಶೇ.8.55 ರಷ್ಟಾಗಲಿದೆ.

ಪ್ರಸಕ್ತ ಆರ್ಥಿಕ ಸ್ಥಿತಿಗತಿಯನ್ನು ಗಮನದಲ್ಲಿಟ್ಟುಕೊಂಡು ಮುನ್ನೋಟ ನೀಡುವುದು ಕಷ್ಟಸಾಧ್ಯ. ಕಳೆದ ಆರ್ಥಿಕ ವರ್ಷದಲ್ಲಿ ಶೇ.8.65 ರಷ್ಟು ಬಡ್ಡಿ ದರ ನೀಡಿದ್ದೆವು.  ಇದರಿಂದಾಗಿ 695 ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬಿದ್ದಿತ್ತು. ಈ ವರ್ಷ (2017-18) ರಲ್ಲಿ ಶೇ.855 ರಷ್ಟು ಬಡ್ಡಿದರವನ್ನು ಶಿಫಾರಸ್ಸು ಮಾಡಿದ್ದೇವೆ ಇದರಿಂದಾಗಿ 586 ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬೀಳಲಿದೆ ಎಂದು ಕಾರ್ಮಿಕ ಸಚಿವ ಸಂತೋಶ್ ಗಂಗ್ವರ್ ಇಪಿಫ್ಒ ಟ್ರಸ್ಟಿಗಳ ಸಭೆಯ ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಇದಕ್ಕೆ ಹಣಕಾಸು ಸಚಿವಾಲಯ ಒಪ್ಪಿಗೆ ಸೂಚಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಡ್ಡಿ ದರದ ಬಗ್ಗೆ ಸಿಬಿಟಿ ನಿರ್ಧಾರ/ ಪ್ರಸ್ತಾವನೆಯನ್ನು ಹಣಕಾಸು ಇಲಾಖೆ ಪರಿಶೀಲನೆ ನಡೆಸಲಿದೆ. ಹಣಕಾಸು ಇಲಾಖೆ ಒಪ್ಪಿಗೆ ಸೂಚಿಸಿದ ಬಳಿಕ ಬಡ್ಡಿದರವನ್ನು ಪಿಎಫ್ ಖಾತೆಗೆ ಹಾಕಲಾಗುವುದು ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com