ಜನವರಿಯಲ್ಲಿ 55 ಲಕ್ಷ ಜಿಎಸ್‍ಟಿ ರಿಟರ್ನ್ಸ್ ಸಂಗ್ರಹ, ಜಿಎಸ್‍ಟಿ ನೆಟ್ ವರ್ಕ್ ವರದಿ

ಹೊಸ ವರ್ಷದ ಮೊದಲ ತಿಂಗಳಾದ ಜನವರಿಯಲ್ಲಿ 55 ಲಕ್ಷ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ರಿಟರ್ನ್ಸ್ ಸಂಗ್ರಹವಾಗಿದೆ ಎಂದು ಜಿಎಸ್ಟಿ ನೆಟ್ ವರ್ಕ್ ಅಧ್ಯಕ್ಷ ಅಜಯ್ ಭೂಷಣ್ ಪಾಂಡೆ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಹೊಸ ವರ್ಷದ ಮೊದಲ ತಿಂಗಳಾದ ಜನವರಿಯಲ್ಲಿ 55 ಲಕ್ಷ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ ) ರಿಟರ್ನ್ಸ್ ಸಂಗ್ರಹವಾಗಿದೆ ಎಂದು ಜಿಎಸ್‍ಟಿ ನೆಟ್ ವರ್ಕ್ ಅಧ್ಯಕ್ಷ ಅಜಯ್ ಭೂಷಣ್ ಪಾಂಡೆ ಹೇಳಿದ್ದಾರೆ.
ಯಾವುದೇ ತಿಂಗಳೊಂದರ ಜಿಎಸ್‍ಟಿ ರಿಟರ್ನ್ಸ್ ಸಲ್ಲಿಕೆಗೆ ಸದರಿ ಮಾಸದ  ಮುಂದಿನ ತಿಂಗಳಿನ 20ನೇ ತಾರೀಖು ಅಂತಿಮ ದಿನವಾಗಿರಲಿದೆ. ವ್ಯಾಪಾರಿಗಳು ತಾವು ಹೆಚ್ಚುವರಿ ಶುಲ್ಕ ಪಾವತಿಸುವುದರೊಡನೆ 20ನೇ ದಿನಾಂಕದ ಬಳಿಕವೂ ರಿಟರ್ನ್ಸ್ ಸಲ್ಲಿಕೆ ಮಾಡಬಹುದು. ಇದರಂತೆ ಜನವರಿಯಲ್ಲಿ ದೇಶವ್ಯಾಪಿ ಸಲ್ಲಿಕೆಯಾದ ಒಟ್ಟು 55 ಲಕ್ಷ ಜಿಎಸ್‍ಟಿ ರಿಟರ್ನ್ಸ್ ಆಗಿದೆ ಎಂದು ಪಾಂಡೆ ಹೇಳಿದ್ದಾರೆ.
ಕಳೆದ ಡಿಸೆಂಬರ್ ನಲ್ಲಿ 56.30 ಲಕ್ಷ ಜಿಎಸ್‍ಟಿ ರಿಟರ್ನ್ಸ್ ಸಲ್ಲಿಕೆಯಾಗಿತ್ತು ಹಾಗೆಯೇ ನವೆಂಬರ್ ಮಾಸದಲ್ಲಿ  53.06 ಲಕ್ಷ ಸಂಗ್ರಹವಾಗಿತ್ತು ಎಂದು ಜಿಎಸ್‍ಟಿ ಎನ್ ಮಾಹಿತಿ ನೀಡಿದೆ.
ಇಷ್ಟಾಗಿಯೂ ಕೇಂದ್ರ ಹಣಕಾಸು ಇಲಾಖೆ ಜನವರಿ ತಿಂಗಳ ಜಿಎಸ್‍ಟಿ ರಿಟರ್ನ್ಸ್ ಮಾಹಿತಿಯನ್ನು ಮುಂಬರುವ ದಿನಗಳಲ್ಲಿ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com