ನವದೆಹಲಿ: ಎಲ್ಲಾ 14 ಮಾದರಿಯ 10 ರುಪಾಯಿ ನಾಣ್ಯಗಳು ವಹಿವಾಟು ನಡೆಸಲು ಮತ್ತು ಚಲಾವಣೆಗೆ ಯೋಗ್ಯವಾಗಿವೆ ಎಂದು ಭಾರತೀಯ ರಿಸರ್ವೆ ಬ್ಯಾಂಕ್(ಆರ್ ಬಿಐ) ಬುಧವಾರ ಸ್ಪಷ್ಟಪಡಿಸಿದೆ
10 ರುಪಾಯಿ ನಾಣ್ಯವನ್ನು ಜನ ನಿರ್ಭೀತಿಯಿಂದ ಬಳಸಬಹುದು ಎಂದು ಆರ್‌ಬಿಐ ಪದೇ ಪದೇ ಸ್ಪಷ್ಟಪಡಿಸುತ್ತಿದ್ದರೂ ಅದರ ಚಲಾವಣೆ ಸಮಸ್ಯೆ ಈಗಲೂ ಇದೆ. ಮಾರುಕಟ್ಟೆ, ಕಿರಾಣಿ ಅಂಗಡಿ, ಆಟೊಗಳಲ್ಲೂ 10 ರುಪಾಯಿ ನಾಣ್ಯಗಳನ್ನು ಪಡೆಯಲು ಈಗಲೂ ಜನ ಹಿಂದೇಟು ಹಾಕುತ್ತಿದ್ದಾರೆ.
10 ರುಪಾಯಿ ನಾಣ್ಯ ನಡೆಯಲ್ಲ ಮತ್ತು ನಕಲಿ ನಾಣ್ಯ ಬಂದಿವೆ ವದಂತಿಗಳ ಹಿನ್ನೆಲೆಯಲ್ಲಿ ಆರ್ ಬಿಐ, ವ್ಯಾಪಾರಿಗಳು ಮತ್ತು ಗ್ರಾಹಕರು 10 ರುಪಾಯಿ ನಾಣ್ಯಗಳ ವಹಿವಾಟಿಗೆ ಸಂಬಂಧಿಸಿದಂತೆ ಭಯಪಡುವ ಅವಶ್ಯಕತೆ ಇಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ಸದ್ಯ ಬಳಕೆಯಲ್ಲಿರುವ ಎಲ್ಲಾ 10 ರುಪಾಯಿ ನಾಣ್ಯಗಳು ಅಸಲಿಯಾಗಿವೆ. ಗ್ರಾಹಕರು ಅವುಗಳನ್ನುಬ್ಯಾಂಕ್ಗೆ ಜಮಾ ಮಾಡುವಾಗ ಬ್ಯಾಂಕ್ಗಳು ನಿರಾಕರಿಸುವಂತಿಲ್ಲ ಎಂದು ಆರ್‌ಬಿಐ ಇಂದು ಪ್ರಕಟಣೆಯಲ್ಲಿ ತಿಳಿಸಿದೆ.