ವಿಮಾನಯಾನದ ವೇಳೆ ವೈಫೈ ಸೌಲಭ್ಯ: ಪ್ರಯಾಣ ದರದ ಶೇ.30 ರಷ್ಟು ಶುಲ್ಕ ವಿಧಿಸುವ ಸಾಧ್ಯತೆ

ವಿಮಾನ ಯಾನದಲ್ಲಿಯೂ ಇನ್ನು ಕೆಲವೇ ದಿನಗಳಲ್ಲಿ ಇಂಟರ್ ನೆಟ್ ಸೌಲಭ್ಯ ಲಭ್ಯವಾಗಲಿದ್ದು, ಇನ್-ಫ್ಲೈಟ್ ವೈಫೈ ಸೌಲಭ್ಯಕ್ಕೆ ಪ್ರಯಾಣದ ದರದ ಶೇ.20-30 ರಷ್ಟು ಶುಲ್ಕ ವಿಧಿಸುವ ಸಾಧ್ಯತೆ ಇದೆ..
ವೈಫೈ
ವೈಫೈ
ಚೆನ್ನೈ: ವಿಮಾನ ಯಾನದಲ್ಲಿಯೂ ಇನ್ನು ಕೆಲವೇ ದಿನಗಳಲ್ಲಿ ಇಂಟರ್ ನೆಟ್ ಸೌಲಭ್ಯ ಲಭ್ಯವಾಗಲಿದ್ದು, ಇನ್-ಫ್ಲೈಟ್ ವೈಫೈ ಸೌಲಭ್ಯಕ್ಕೆ ಪ್ರಯಾಣದ ದರದ ಶೇ.20-30 ರಷ್ಟು ಶುಲ್ಕ ವಿಧಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. 
ವಿಮಾನಯಾನದಲ್ಲೂ ಮೊಬೈಲ್ ಕರೆ ಹಾಗೂ ಇಂಟರ್ ನೆಟ್ ಸೌಲಭ್ಯಗಳನ್ನು ಒದಗಿಸಬೇಕೆಂದು ಇತ್ತೀಚೆಗಷ್ಟೇ ಟ್ರಾಯ್ ಶಿಫಾರಸ್ಸು ಮಾಡಿತ್ತು. ದೇಶಿಯ ಹಾಗೂ ಅಂತಾರಾಷ್ಟ್ರೀಯ ವಿಮಾನಯಾನದ ವೇಳೆ ವೈಫೈ ಸೌಲಭ್ಯ ಒದಗಿಸುವುದರಿಂದ ಅಂತಾರಾಷ್ಟ್ರೀಯ ದರ್ಜೆಯ ಸೌಲಭ್ಯ ನೀಡಿದಂತಾಗುತ್ತದೆ. 
ವಿಮಾಯಾನದಲ್ಲಿ ಇಂಟರ್ ನೆಟ್ ಸೌಲಭ್ಯ ಒದಗಿಸುವುದಕ್ಕೆ ಅರ್ಧ ಗಂಟೆಯಿಂದ ಒಂದು ಗಂಟೆಯವರೆಗೆ 500, 1,000 ರೂಪಾಯಿ ಶುಲ್ಕ ವಿಧಿಸುವ ಸಾಧ್ಯತೆ ಇದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com