ತರಕಾರಿ, ಹಣ್ಣುಗಳ ರಫ್ತು ಶೇ.15 ರಷ್ಟು ಕುಸಿತ!

ತಾಜಾ ತರಕಾರಿ ಹಾಗೂ ಹಣ್ಣುಗಳ ರಫ್ತು ಕುಸಿತ ಕಂಡಿದ್ದು 2017 ರ ಏಪ್ರಿಲ್-ನವೆಂಬರ್ ಅವಧಿಯ ಆದಾಯ ಶೇ.15 ರಷ್ಟು ಕಡಿಮೆಯಾಗಿದೆ.
ತರಕಾರಿ, ಹಣ್ಣುಗಳ ರಫ್ತು ಶೇ.15 ರಷ್ಟು ಕುಸಿತ!
ತರಕಾರಿ, ಹಣ್ಣುಗಳ ರಫ್ತು ಶೇ.15 ರಷ್ಟು ಕುಸಿತ!
ನವದೆಹಲಿ: ತಾಜಾ ತರಕಾರಿ ಹಾಗೂ ಹಣ್ಣುಗಳ ರಫ್ತು ಕುಸಿತ ಕಂಡಿದ್ದು 2017 ರ ಏಪ್ರಿಲ್-ನವೆಂಬರ್ ಅವಧಿಯ ಆದಾಯ ಶೇ.15 ರಷ್ಟು ಕಡಿಮೆಯಾಗಿದೆ. 
ಇನ್ನು ದ್ವಿದಳ ಧಾನ್ಯಗಳು ಮತ್ತು ಗೋಧಿಯ ರಫ್ತು ಸಹ ಕಡಿಮೆಯಾಗಿದ್ದು,  ಈರುಳ್ಳಿ ಟೊಮ್ಯಾಟೊ, ಬಾಳೆಹಣ್ಣು, ಒಣದ್ರಾಕ್ಷಿಗೆ ಬೇಡಿಕೆ ಹಾಗೂ ಪೂರೈಕೆ ಕಡಿಮೆಯಾಗಿರುವುದು ಇದಕ್ಕೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. 
ಏಪ್ರಿಲ್-ನವೆಂಬರ್ ತಿಂಗಳ ಅವಧಿಯಲ್ಲಿ ತಾಜಾ ಹಣ್ಣು ಹಾಗೂ ತರಕಾರಿಗಳ ಬೆಲೆ 2016 ಕ್ಕೆ ಹೋಲಿಸಿದರೆ ಶೇ.15 ರಷ್ಟು ಕಡಿಮೆಯಾಗಿದೆ. ಇದೇ ವೇಳೆ ಕಡಿಮೆ ಉತ್ಪಾದನೆಯ ಹಿನ್ನೆಲೆಯಲ್ಲಿ ಈರುಳ್ಳಿಯ ಕನಿಷ್ಠ ರಫ್ತು ದರ ಪ್ರತಿ ಟನ್ ಗೆ 850 ಡಾಲರ್ ಗೆ ಏರಿಕೆಯಾಗಿದ್ದು ರಫ್ತು ಪ್ರಮಾಣವೂ ಇಳಿಕೆಯಾಗಿದೆ ಎಂದು ಎಪಿಇಡಿಎ ಅಧ್ಯಕ್ಷ ಡಿ.ಕೆ ಸಿಂಗ್ ಹೇಳಿದ್ದಾರೆ. ತಾಜಾ ತರಕಾರಿಗಳ ಒಟ್ಟಾರೆಯ ರಫ್ತಿನಲ್ಲಿ ಶೇ.50 ರಷ್ಟು ಈರುಳ್ಳಿ ಇದ್ದು, ಕನಿಷ್ಠ ರಫ್ತಿ ದರದಿಂದಾಗಿ ರಫ್ತು ಇಳಿಕೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com