ಈ ವರ್ಷ ತೈಲ ದರ ಏರಿಕೆಯಾಗಿದ್ದು ಬಳಕೆ ಹಾಗೂ ಸರ್ಕಾರದ ಖರ್ಚಿನ ಮೇಲೆ ಪರಿಣಾಮ ಬೀರಿದ್ದು ಸ್ತವಿಕ ಆರ್ಥಿಕ ಚಟುವಟಿಕೆಗೆ ಅಡ್ಡಿ ಉಂಟುಮಾಡಿದೆ ಎಂದು ಅರವಿಂದ್ ಸುಬ್ರಹ್ಮಣಿಯನ್ ಹೇಳಿದ್ದು, 4R ( Recognition, Resolution, Recapitalisation and Reforms) ಮಂತ್ರವನ್ನೊಳಗೊಂಡು ಟಿಬಿಎಸ್ (ಟ್ವಿನ್ ಬ್ಯಾಲೆನ್ಸ್ ಶೀಟ್) ಸವಾಲನ್ನು ಎದುರಿಸುತ್ತಿದ್ದೇವೆ, ಈಗಿನ ವರೆಗೆ ಎಲ್ಲಾ 4 ವಿಭಾಗಗಳಲ್ಲಿಯೂ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಮುಖ್ಯ ಆರ್ಥಿಕ ಸಲಹೆಗಾರರು ಹೇಳಿದ್ದಾರೆ.