22 ತಿಂಗಳಲ್ಲಿ ಜಿಯೋ ಗ್ರಾಹಕರ ಸಂಖ್ಯೆ 215 ಮಿಲಿಯನ್ ಗೆ ಏರಿಕೆ: ಜಿಯೋ ಫೈಬರ್, ಜಿಯೋಫೋನ್2 ಯೋಜನೆ ಘೋಷಣೆ
ವಾಣಿಜ್ಯ
22 ತಿಂಗಳಲ್ಲಿ ಜಿಯೋ ಗ್ರಾಹಕರ ಸಂಖ್ಯೆ 215 ಮಿಲಿಯನ್ ಗೆ ಏರಿಕೆ: ಜಿಯೋ ಫೈಬರ್, ಜಿಯೋಫೋನ್2 ಯೋಜನೆ ಘೋಷಣೆ
ಜೂ.05 ರಂದು ರಿಲಾಯನ್ಸ್ ಸಂಸ್ಥೆಯ 41 ನೇ ಸಭೆ ನಡೆದಿದ್ದು, ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಜಿಯೋ ಬ್ರಾಡ್ ಬ್ಯಾಂಡ್, ಜಿಯೋ ಫೋನ್-2 ನ್ನು ಘೋಷಣೆ
ಮುಂಬೈ: ಜೂ.05 ರಂದು ರಿಲಾಯನ್ಸ್ ಸಂಸ್ಥೆಯ 41 ನೇ ಸಭೆ ನಡೆದಿದ್ದು, ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಜಿಯೋ ಬ್ರಾಡ್ ಬ್ಯಾಂಡ್, ಜಿಯೋ ಫೋನ್-2 ನ್ನು ಘೋಷಣೆ ಮಾಡಿದ್ದಾರೆ.
ಫೈಬರ್-ಹೋಂ ಸರ್ವಿಸ್ ಕ್ಷೇತ್ರಕ್ಕೂ ಜಿಯೋ ಕಾಲಿಡುತ್ತಿರುವುದನ್ನು ಘೋಷಣೆ ಮಾಡಿರುವ ಮುಖೇಶ್ ಅಂಬಾನಿ, 22 ತಿಂಗಳಲ್ಲಿ ಜಿಯೋ ಗ್ರಾಹಕರ ಸಂಖ್ಯೆ 215 ಮಿಲಿಯನ್ ಗೆ ಏರಿಕೆಯಾಗಿದೆ. ಕಳೆದ 1 ವರ್ಷದಲ್ಲಿ ಗ್ರಾಹಕರ ಸಂಖ್ಯೆ ದುಪ್ಪಟ್ಟುಗೊಂಡಿದ್ದು ಗ್ರಾಹಕರ ಮೆನೆಗೆ ಬ್ರಾಡ್ ಬ್ಯಾಂಡ್ ವ್ಯವಸ್ಥೆಯ ಯೋಜನೆಯನ್ನೂ ಘೋಷಿಸಿದ್ದಾರೆ.
"ಇನ್ನು ಮುಂದಿನ ದಿನಗಳಲ್ಲಿ ನಾವು ಮನೆಗಳಿಗೆ, ಕಚೇರಿಗಳಿಗೆ ಫೈಬರ್ ಸಂಪರ್ಕವನ್ನು ಕಲ್ಪಿಸಲಾಗುತ್ತದೆ, ಇದರಿಂದಾಗಿ 1,100 ನಗರಗಳಲ್ಲಿ ಅತ್ಯಾಧುನಿಕ ಫೈಬರ್ ಬ್ರಾಡ್ ಬ್ಯಾಂಡ್ ಸಂಪರ್ಕ ಸಿಗಲಿದೆ" ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ