ಈ ವರ್ಷ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಈ ಅಂಶಗಳು ನಿಮ್ಮ ಗಮನದಲ್ಲಿರಲಿ

ಐಟಿ ರಿಟರ್ನ್ಸ್ ಸಲ್ಲಿಸುವುದಕ್ಕೂ ಮುನ್ನ ನೀವು ಗಮನದಲ್ಲಿಟ್ಟುಕೊಳ್ಳಲೇಬೇಕಾದ ಅಂಶಗಳು ಹೀಗಿವೆ.
ಈ ವರ್ಷ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಗಮನದಲ್ಲಿಟ್ಟುಕೊಳ್ಳಲೇಬೇಕಾದ ಅಂಶಗಳಿವು
ಈ ವರ್ಷ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಗಮನದಲ್ಲಿಟ್ಟುಕೊಳ್ಳಲೇಬೇಕಾದ ಅಂಶಗಳಿವು
2017-18 ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಜುಲೈ.31 ಕೊನೆಯ ದಿನವಾಗಿದ್ದು, ತೆರಿಗೆ ರಿಟರ್ನ್ಸ್ ಸಲ್ಲಿಕೆ ನಿಯಮಗಳಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ತರಲಾಗಿದೆ. 
ಈ ಬಾರಿಯ ಬದಲಾವಣೆಯಲ್ಲಿ ಪರಿಚಯಿಸಲಾಗಿರುವ ಇ- ಮೌಲ್ಯಮಾಪನ (e-assessment) ತೆರಿಗೆ ರಿಟರ್ನ್ಸ್ ಸಲ್ಲಿಸುವವರಿಗೆ ಸಹಕಾರಿಯಾಗಲಿದ್ದು, ತೆರಿಗೆ ಪಾವತಿ ಮಾಡುವವರ ನಡುವೆ  ಮೌಲ್ಯಪಾಮನ ಮಾಡುವ ಅಧಿಕಾರಿಗಳ ಹಸ್ತಕ್ಷೇಪ ಸಂಪೂರ್ಣವಾಗಿ ಇಲ್ಲದಂತಾಗಿದೆ.  ಈ ಬದಲಾವಣೆಯಿಂದ ಹೆಚ್ಚು ಪಾರದರ್ಶಕತೆ ಕಾಯ್ದುಕೊಳ್ಳಲು ಸಾಧ್ಯ ಎನ್ನುತ್ತಾರೆ ಅಧಿಕಾರಿಗಳು. 
ನಿಮ್ಮ ಆದಾಯಕ್ಕೆ ಅನುಗುಣವಾಗಿ ತೆರಿಗೆ ಪಾವತಿಸಬಹುದಾಗಿದೆಯೋ ಅಥವಾ ಇಲ್ಲವೋ  ರಿಟರ್ನ್ಸ್ ಕುರಿತ ಮಾಹಿತಿಯನ್ನಂತೂ ಸಲ್ಲಿಸಲೇಬೇಕು. ಒಂದು ವೇಳೆ ಜು.31 ರ ನಂತರ ಸಲ್ಲಿಸಿದರೆ ಈ ವರ್ಷದಿಂದ 5,000 ಶುಲ್ಕ ವಿಧಿಸಲಾಗುತ್ತದೆ. 2018 ರ ಡಿಸೆಂಬರ್ 31 ರ ನಂತರ ಸಲ್ಲಿಸಿದರೆ 10,000 ರೂಪಾಯೊ ಶುಲ್ಕ ವಿಧಿಸಲಾಗುತ್ತದೆ ಎಂದು ಕ್ಲಿಯರ್ ಟ್ಯಾಕ್ಸ್ ನ ಸ್ಥಾಪಕ ಹಾಗೂ ಸಿಇಒ ಅರ್ಚಿತ್ ಗುಪ್ತಾ ಹೇಳಿದ್ದಾರೆ.
ಐಟಿ ರಿಟರ್ನ್ಸ್ ಸಲ್ಲಿಸುವುದಕ್ಕೂ ಮುನ್ನ ನೀವು ಗಮನದಲ್ಲಿಟ್ಟುಕೊಳ್ಳಲೇಬೇಕಾದ ಅಂಶಗಳು ಹೀಗಿವೆ 
  1. ತೆರಿಗೆ ಲೆಕ್ಕ ಹಾಕುವುದಕ್ಕಾಗಿ ನೀವು ಒಳಪಡುವ ಆದಾಯದ ಸ್ಲ್ಯಾಬ್ ಕುರಿತು ಸರಿಯಾಗಿ ಅರ್ಥಮಾಡಿಕೊಂಡು, ಖಚಿತಪಡಿಸಿಕೊಳ್ಳಿ 
  2. ಮೌಲ್ಯಮಾಪನದ ವೇಳೆ ಕೆಲಸವನ್ನು ಸರಳೀಕರಣಗೊಳಿಸಲು ಇ-ಫೈಲಿಂಗ್ ಆಯ್ಕೆಯನ್ನು ಉಪಯೋಗಿಸಿಕೊಳ್ಳಿ 
  3. ಬ್ಯಾಂಕ್ ಖಾತೆ ವಿವರ, ಆಧಾರ್ ನೋಂದಣಿ ಐಡಿ, ಪ್ಯಾನ್, ಆಧಾರ್ ನಂತಹ ದಾಖಲೆಗಳು ಸಿದ್ಧವಾಗಿರಿಸಿಕೊಂಡಿರಿ 
  4. ರಿಟರ್ನ್ಸ್ ನಲ್ಲಿ ಆದಾಯದ ಎಲ್ಲಾ ಮೂಲಗಳನ್ನೂ ದಾಖಲಿಸಿದ್ದೀರಾ ಎಂದು ಖಚಿತಪಡಿಸಿಕೊಳ್ಳಿ, ಈ ಪೈಕಿ ವಿನಾಯಿತಿ ಆದಾಯದ ಬಗ್ಗೆಯೂ ಮಾಹಿತಿ ನೀಡಿ 
  5. ರಿಟರ್ನ್ಸ್ ಸಲ್ಲಿಕೆಗೂ ಮುನ್ನ ನೌಕರಿಯಲ್ಲಿರುವ ಸಂಸ್ಥೆಯಿಂದ ಫಾರ್ಮ್ 16 ನ್ನು ಪಡೆದುಕೊಳ್ಳಿ 
  6. ಫಾರ್ಮ್ 16 ರಲ್ಲಿರುವುದರ ಜೊತೆಗೆ ಫಾರ್ಮ್ 26ಎಎಸ್ ನಲ್ಲಿರುವ ಆದಾಯ ಹಾಗೂ ಟಿಡಿಎಸ್ ವಿವರಗಳನ್ನು ಸಮನ್ವಯಗೊಳಿಸಿ 
  7. ಹೂಡಿಕೆ ಸಂಬಂಧಿತ ದಾಖಲೆಗಳನ್ನು ಸಿದ್ಧವಾಗಿರಿಸಿಕೊಂಡಿರಿ
  8. ನಿಮ್ಮ ಎಲ್ಲಾ ಬ್ಯಾಂಕ್ ಖಾತೆಗಳ ವಿವರಗಳನ್ನೂ ಸಹ ರಿಟರ್ನ್ಸ್ ನಲ್ಲಿ ಸಲ್ಲಿಸಬೇಕು. ನಿಷ್ಕ್ರಿಯವಾಗಿರುವ ಬ್ಯಾಂಕ್ ಖಾತೆಗಳಿದ್ದರೆ ಅವುಗಳ ಬಗ್ಗೆ ವಿವರ ನೀಡುವ ಅಗತ್ಯವಿಲ್ಲ. 
  9. ಒಮ್ಮೆ ರಿಟರ್ನ್ಸ್ ನ್ನು ಅಪ್ ಲೋಡ್ ಮಾಡಿದ ನಂತರ ಇ-ಪರಿಶೀಲನೆಗೊಳಪಡಿಸಿ, ಅಥವಾ ಸಹಿ ಮಾಡಲಾಗಿರುವ ಐಟಿಆರ್ ವಿ (ರಿಟರ್ನ್ ಸಲ್ಲಿಸಿರುವ ಸ್ವೀಕೃತಿ)ಯನ್ನು ಪಡೆದು ಸಿಪಿಸಿ, ಬೆಂಗಳೂರಿಗೆ 120 ದಿನಗಳೊಳಗಾಗಿ ಕಳಿಸಿ. ಒಂದು ವೇಳೆ ಅಪ್ ಲೋಡ್ ಮಾಡಿದ 120 ದಿನಗಳಲ್ಲಿ ಕಳಿಸದೇ ಇದ್ದಲ್ಲಿ ರಿಟರ್ನ್ಸ್ ಸಲ್ಲಿಸಿಲ್ಲ ಎಂದು ಪರಿಗಣಿಸಲಾಗುತ್ತದೆ. 
  10. ಕೊನೆಯ ದಿನದವರೆಗೂ ಟೈಮ್ ಇದೆ ಅಲ್ವಾ ಅಂತ ಕಾಲ ಮುಂದೂಡಿದರೆ ರಿಟರ್ನ್ಸ್ ಸಲ್ಲಿಸುವಾಗ ತಪ್ಪುಗಳಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಬೇಗ ರಿಟರ್ನ್ಸ್ ಸಲ್ಲಿಸಿಕೆಗೆ ಸಿದ್ಧತೆ ಮಾಡಿಕೊಳ್ಳಿ 
ರಿಟರ್ನ್ಸ್ ಸಲ್ಲಿಸಬೇಕಾದರೆ ಈ 10 ತಪ್ಪುಗಳ ಬಗ್ಗೆ ಎಚ್ಚರವಿರಲಿ 
  1. ರಿಟರ್ನ್ಸ್ ಸಲ್ಲಿಸಬೇಕಾದರೆ ನಿಮ್ಮ ಸಿದ್ಧತೆಯನ್ನು ಸರಿಯಾಗಿ ಪರಿಶೀಲಿಸಿಕೊಳ್ಳಿ, ಈ ಹಂತದಲ್ಲಿ ಸ್ವಾಭಾವಿಕವಾಗಿ ಸಂಭವಿಸಬಹುದಾದ ತಪ್ಪುಗಳ ಬಗ್ಗೆ ಎಚ್ಚರವಿರಲಿ, ಎಚ್ಚರಿಕೆ ವಹಿಸಬೇಕಾದ ಅಂಶಗಳು ಇಲ್ಲಿವೆ 
  2. ಸಾಮಾನ್ಯವಾಗಿ ನಡೆಯಬಹುದಾದ ತಪ್ಪೆಂದರೆ ಒಮ್ಮೆ ರಿಟರ್ನ್ಸ್ ಸಲ್ಲಿಕೆಯಾದ ನಂತರ ಅದನ್ನು ಪರಿಶೀಲನೆಗೊಳಪಡಿಸದೇ ಇರುವುದು 
  3. ಆದಾಯಕ್ಕೆ ಸಂಬಂಧಪಟ್ಟಿದ್ದನ್ನು ಫಾರ್ಮ್ 26 ಎಎಸ್ ನಲ್ಲಿರುವ ಟಿಡಿಎಸ್ ಗೆ ಸೇರಿಸದೇ ಇರುವುದು, ಆದಾಯಕ್ಕೆ ಅನುಗುಣವಾದ ಟಿಡಿಎಸ್ ನ್ನು ಪಡೆದುಕೊಳ್ಳುವುದು 
  4. ಉಳಿತಾಯ ಖಾತೆಯ ಮೂಲಕ ಬಡ್ಡಿಯಿಂದ ಬಂದ ಆದಾಯವನ್ನು ರಿಟರ್ನ್ಸ್ ನಲ್ಲಿ ಸೇರಿಸದೇ ಇರುವುದು 
  5. ಅಪ್ರಾಪ್ತರು ಅಥವಾ ಪತ್ನಿಯ ಹೆಸರಿನಲ್ಲಿರುವ ಆದಾಯವನ್ನು ಸೇರಿಸದೇ ಇರುವುದು 
  6. ಎಲ್ಲಾ ಬ್ಯಾಂಕ್ ಖಾತೆಗಳ ವಿವರ ನೀಡಲು ಮರೆಯುವುದು 
  7. ಬ್ಯಾಂಕ್ ಹೊರತಾಗಿ ತೆರಿಗೆ ಪಾವತಿಗೆ ಯೋಗ್ಯವಾದ ಬಡ್ಡಿಯಿಂದ ಬರುವ ಆದಾಯವನ್ನು ಸೇರಿಸದೇ ಇರುವುದು 
  8. ತೆರಿಗೆ ವಿಧಿಸಬಹುದಾದ ಎಲ್ ಐಸಿಯ ರಸೀದಿಗಳನ್ನು ನೀಡಲು ಮರೆಯುವುದು 
  9. ಸೇವಾ ಉದ್ದೇಶಗಳಿಗೆ ಮಾಡಿದ ದೇಣಿಗೆಗೆ ತೆರಿಗೆ ವಿನಾಯ್ತಿ ಇರುತ್ತದೆ, ಆದರೆ ದೇಣಿಗೆ ಪಡೆದಿರುವ ವ್ಯಕ್ತಿಯ ಪ್ಯಾನ್ ನಂಬರ್ ದಾಖಲಿಸುವುದನ್ನು ಮರೆಯಬೇಡಿ 
  10. ಪತ್ನಿಗೆ ಉಳಿತಾಯ ಖಾತೆಯ ಮೂಲಕ ಬಡ್ಡಿಯಿಂದ ಬಂದ ಆದಾಯಕ್ಕೆ ತೆರಿಗೆ ವಿನಾಯ್ತಿ ಇದೆ ಎಂದುಕೊಂಡು ರಿಟರ್ನ್ಸ್ ನಲ್ಲಿ ದಾಖಲಿಸದೇ ಇರುವುದೂ ಸಹ ನಿಮಗೆ ಮುಂದಿನ ದಿನಗಳಲ್ಲಿ ಸಂಕಷ್ಟ ತಂದೊಡ್ಡಬಹುದು. ಆದ್ದರಿಂದ ಐಟಿ ರಿಟರ್ನ್ಸ್ ಸಲ್ಲಿಸುವ ವೇಳೆ ಸಾಮಾನ್ಯವಾಗಿ ಸಂಭವಿಸುವ ಈ ಮೇಲಿನ 10 ತಪ್ಪುಗಳ ಬಗ್ಗೆ ಎಚ್ಚರವಿರಲಿ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com