ಹೊಸ ನೋಟು ಈಗ ಬಳಕೆಯಲ್ಲಿರುವ ನೋಟಿಗಿಂತ ಗಾತ್ರದಲ್ಲಿ ಚಿಕ್ಕದಾಗಿರಲಿದೆ. ಇದು 10 ರು. ಹೊಸ ನೋಟಿಗಿಂತ ತುಸು ದೊಡ್ಡ ಗಾತ್ರ ಹೊಂದಿರಲಿದೆ. ನೋಟಿನ ಹಿಂಭಾಗದಲ್ಲಿ ಗುಜರಾತ್‌ನ ಪಠಾಣ್ ನಗರದಲ್ಲಿನ ಇತಿಹಾಸ ಪ್ರಸಿದ್ಧ 'ರಾಣಿ ಕಿ ವಾವ್'ನ ಚಿತ್ರವಿದೆ. ಇದೇ ವೇಳೆ ಹೊಸ ನೋಟಿನ ಗಾತ್ರಕ್ಕೆ ಸಮನಾಗಿ ದೇಶದ ಎಟಿಎಂಗಳನ್ನು ಬದಲಾವಣೆ ಮಾಡಬೇಕಾಗಿದೆ ಎಂದು ಮಾದ್ಯಮ ಪ್ರಕಟಣೆಯಲ್ಲಿ ಹೇಳಲಾಗಿದೆ.