100 ಉತ್ಪನ್ನಗಳ ಮೇಲೆ ಜಿಎಸ್ ಟಿ ಇಳಿಕೆ; ಯಾವ್ಯಾವುದಕ್ಕೆ ಎಷ್ಟೆಷ್ಟು? ಇಲ್ಲಿದೆ ಮಾಹಿತಿ

ಮುಂದಿನ ವರ್ಷದ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ದೇಶದ ಮಧ್ಯಮವರ್ಗದ ಜನರನ್ನು ಓಲೈಸಲು ಮುಂದಾಗಿರುವ ಎನ್ ಡಿಎ ನೇತೃತ್ವದ....
ಹಂಗಾಮಿ ಹಣಕಾಸು ಸಚಿವ ಪಿಯೂಷ್ ಗೋಯಲ್ ದೆಹಲಿಯಲ್ಲಿ ನಡೆದ ಜಿಎಸ್ ಟಿ ಮಂಡಳಿ ಸಭೆಯಲ್ಲಿ.
ಹಂಗಾಮಿ ಹಣಕಾಸು ಸಚಿವ ಪಿಯೂಷ್ ಗೋಯಲ್ ದೆಹಲಿಯಲ್ಲಿ ನಡೆದ ಜಿಎಸ್ ಟಿ ಮಂಡಳಿ ಸಭೆಯಲ್ಲಿ.
Updated on

ನವದೆಹಲಿ: ಮುಂದಿನ ವರ್ಷದ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ದೇಶದ ಮಧ್ಯಮವರ್ಗದ ಜನರನ್ನು ಓಲೈಸಲು ಮುಂದಾಗಿರುವ ಎನ್ ಡಿಎ ನೇತೃತ್ವದ ಕೇಂದ್ರ ಸರ್ಕಾರ 100ಕ್ಕೂ ಅಧಿಕ ಉತ್ಪನ್ನಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ)ಯನ್ನು ರದ್ದುಗೊಳಿಸಿದೆ. ಅಲ್ಲದೆ ಉದ್ಯಮಿಗಳಿಗೆ ಆದಾಯ ತೆರಿಗೆ ಸಲ್ಲಿಕೆ ಪ್ರಕ್ರಿಯೆಯನ್ನು ಸರಳಗೊಳಿಸಿದೆ.

ಕೇಂದ್ರ ಸರ್ಕಾರದ ಈ ಕ್ರಮದಿಂದ ಮುಂದಿನ ದಿನಗಳಲ್ಲಿ ದೇಶದ ಮಧ್ಯಮ ವರ್ಗದ ಜನರಿಗೆ ಮತ್ತು ಸಣ್ಣ ಉದ್ದಿಮೆದಾರರು ಕೊಂಚ ನಿರಾಳತೆ ಅನುಭವಿಸುವ ಸಾಧ್ಯತೆಯಿದ್ದು ಸರ್ಕಾರಕ್ಕೆ ಮಾತ್ರ ಇದರಿಂದ ಸುಮಾರು 15 ಸಾವಿರ ಕೋಟಿ ರೂಪಾಯಿ ನಷ್ಟವುಂಟಾಗುವ ಸಾಧ್ಯತೆಯಿದೆ.

ಹಣಕಾಸು ಸಚಿವ ಪಿಯೂಷ್ ಗೋಯಲ್ ನೇತೃತ್ವದಲ್ಲಿ ನಿನ್ನೆ ದೆಹಲಿಯಲ್ಲಿ ಸುಮಾರು 9 ಗಂಟೆಗಳ ಕಾಲ ನಡೆದ ಜಿಎಸ್ ಟಿ ಮಂಡಳಿ ಸಭೆಯಲ್ಲಿ ಸರ್ಕಾರ,  ಸ್ಯಾನಿಟರಿ ನ್ಯಾಪ್‍ಕಿನ್ ಮೇಲಿನ ತೆರಿಗೆ ವಿಧಿಸಿರುವ ಕುರಿತು ವ್ಯಾಪಕ ಟೀಕೆ ಕೇಳಿ ಬಂದ ಹಿನ್ನಲೆಯಲ್ಲಿ ಜಿಎಸ್‍ಟಿ ತೆರಿಗೆಯಿಂದ ಸ್ಯಾನಿಟರಿ ನ್ಯಾಪ್‍ಕಿನನ್ನು ಹೊರಗಿಟ್ಟಿದೆ.

ಕಳೆದ ಒಂದು ವರ್ಷದಿಂದಲೂ ಸ್ಯಾನಿಟಿರಿ ನ್ಯಾಪ್‍ಕಿನ್ ಮೇಲಿನ ತೆರವು ಮಾಡಲು ಹಲವರು ಆಗ್ರಹಿಸಿದ್ದರು. ಅದ್ದರಿಂದ ಈ ಹಿಂದೆ ವಿಧಿಸಲಾಗಿದ್ದ ಸ್ಯಾನಿಟರಿ ನ್ಯಾಪ್‍ಕಿನ್ಸ್ ಮೇಲಿನ ಶೇ.12ರಷ್ಟು ತೆರಿಗೆಯನ್ನು ಕಡಿತಗೊಳಿಸಲಾಗಿದೆ. ಇನ್ನು ರಾಖಿ, ಪಾಶ್ಚರೀಕರಿಸಿದ ಹಾಲು, ಮಾರ್ಬಲ್ಸ್, ಕಟ್ಟಡ ಕಲ್ಲು & ಮರಮಟ್ಟುಗಳು ಮೇಲಿನ ತೆರಿಗೆಯನ್ನು ಕಡಿತಗೊಳಿಸಲಾಗಿದೆ.

ಶೇ. 5% ರಷ್ಟು ತೆರಿಗೆಯನ್ನು 1 ಸಾವಿರ ರೂಪಾಯಿವರೆಗಿನ ಪಾದರಕ್ಷೆ, ಆಮದಿತ ಯೂರಿಯಾ ಮೇಲೆ ವಿಧಿಸಲಾಗಿದೆ. ಬಿದಿರು, ಕರಕುಶಲ ವಸ್ತುಗಳು, ಹ್ಯಾಂಡ್ ಬ್ಯಾಗ್, ಕೈಯಿಂದ ಮಾಡಲಾದ ಲ್ಯಾಂಪ್‍ಗಳು, ಜ್ಯುವೆಲ್ಲರಿ ಬ್ಯಾಗ್ಸ್, ಬಣ್ಣಲೇಪಿತ ಮರದ ಬಾಕ್ಸ್ ಗಳು, ಗಾಜಿನ ಕಲಾಕೃತಿಗಳು, ಕಲ್ಲಿನ ಶಿಲೆಗಳು, ಅಲಂಕಾರಿಕ ಚೌಕಟ್ಟಿನ ಕನ್ನಡಿಗಳು ಇವುಗಳ ಮೇಲೆ ವಿಧಿಸಲಾಗಿದ್ದ ಶೇ.28% ರಷ್ಟು ತೆರಿಯನ್ನು ಶೇ.12% ಕ್ಕೆ ಇಳಿಕೆ ಮಾಡಲಾಗಿದೆ.

ಟಿವಿ, ಎಸಿ, ವಾಷಿಂಗ್ ಮಷೀನ್, ರೆಫ್ರಿಜಿರೇಟರ್, ವೀಡಿಯೋ ಗೇಮ್ಸ್, ವ್ಯಾಕ್ಯೂಮ್ ಕ್ಲೀನರ್ಸ್, ಜ್ಯೂಸ್ ಮಿಕ್ಸರ್, ಗ್ರೈಂಡರ್ಸ್, ಶೇವರ್& ಹೇರ್ ಡ್ರೈಯರ್ಸ್, ವಾಟರ್ ಕೂಲರ್ಸ್-ಹೀಟರ್ಸ್, ಲಿಥಿಯಂ ಬ್ಯಾಟರಿಗಳು, ಸೆಂಟ್, ಟಾಯ್ಲೆಟ್ ಸ್ಪ್ರೇ, ಚರ್ಮೋತ್ಪನ್ನಗಳು, ಪೇಂಟ್ಸ್, ವಾಲ್‍ಪುಟ್ಟಿ, ವಿಶೇಷ ಉದ್ದೇಶದ ವಾಹನಗಳು, ಟ್ರಕ್, ಟ್ರೈಲರ್ಸ್ ವಸುಗಳ ಮೇಲೆ 18% ರಷ್ಟು ತೆರಿಗೆಯನ್ನು ವಿಧಿಸಲಾಗಿದೆ. ಇನ್ನು 68 ಸೆಂಟಿ ಮೀಟರ್ ಅಂದರೆ 27 ಇಂಚಿನ ಟಿವಿ ಮೇಲೆ ವಿಧಿಸಲಾಗಿದ್ದ 28% ತೆರಿಗೆಯನ್ನು 18 % ಗೆ ಇಳಿಕೆ ಮಾಡಲಾಗಿದೆ.

ಯಾವ್ಯಾವ ವಸ್ತು ಅಗ್ಗ?


ವಾಷಿಂಗ್​ ಮಷಿನ್​, ಫ್ರಿಡ್ಜ್​, ಎಸಿ, ಪೇಯಿಂಟ್​ ವಾರ್ನಿಶ್​, 27 ಇಂಚಿನ ಟಿವಿ, ವಿಡಿಯೋ ಗೇಮ್ಸ್​, ವ್ಯಾಕ್ಯೂಮ್​ ಕ್ಲೀನರ್​, ನೂಕುವ ಗಾಡಿ,​ ಮಿಕ್ಸರ್​, ಗ್ರೈಂಡರ್​, ಶೇವರ್​, ಹೇರ್​ ಡ್ರೈಯರ್​, ವಾಟರ್​ ಕೂಲರ್​, ವಾಟರ್​ ಹೀಟರ್​, ಬ್ಯಾಟರಿಗಳು, ಐರನ್​ಬಾಕ್ಸ್​, ಪರ್​ಫ್ಯೂಮ್​, ಕಾಸ್ಮೆಟಿಕ್ಸ್​, ಟಾಯ್ಲೆಟ್​ ಸ್ಪ್ರೇ, ಎಲೆಕ್ಟ್ರಿಕ್​ ವಾಹನಗಳು, ಮಿನಿ ಟ್ರಕ್​ ಮೇಲಿನ ಜಿಎಸ್​ಟಿ ಶೇ. 28ರಿಂದ 18ಕ್ಕೆ ಇಳಿಕೆಯಾಗಿದೆ.

ಎಥನಾಲ್​, 1 ಸಾವಿರದೊಳಗಿನ ಸಾಮಾನ್ಯ ಪಾದರಕ್ಷೆಗಳ ಮೇಲಿನ ತೆರಿಗೆಯನ್ನು ಶೇ. 18ರಿಂದ 5ಕ್ಕೆ ಇಳಿಸಲಾಗಿದೆ. ಹ್ಯಾಂಡ್​ಬ್ಯಾಗ್​, ನೆಲಕ್ಕೆ ಹಾಕುವ ಮರದ ಹಲಗೆ, ಒಡವೆಯ ಬಾಕ್ಸ್​, ಮರದ ಬಾಕ್ಸ್​, ಕೆತ್ತನೆ ಗ್ಲಾಸ್​ನ ಆಟಿಕೆ, ಕನ್ನಡಿ, ಕೈಯಿಂದ ಮಾಡಿದ ದೀಪಗಳ ಮೇಲಿಗೆ ಜಿಎಸ್​ಟಿಯನ್ನು ಶೇ. 18ರಿಂದ 12ಕ್ಕೆ ಇಳಿಕೆ ಮಾಡಲಾಗಿದೆ.

ಯಾವ ತೆರಿಗೆ ರದ್ದು?

ಮಹಿಳೆಯರು ಇಟ್ಟಿದ್ದ ಬೇಡಿಕೆಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ ಸ್ಯಾನಿಟರಿ ನ್ಯಾಪ್​ಕಿನ್​ಗಳ ಮೇಲಿನ ಜಿಎಸ್​ಟಿಯನ್ನು ರದ್ದುಪಡಿಸಿದೆ. ಜತೆಗೆ, ಮಾರ್ಬಲ್ಸ್​, ಕಲ್ಲು, ಮರದ ವಿಗ್ರಹಗಳು, ಹರಳುಗಳಿಲ್ಲದ ರಕ್ಷಾಬಂಧನದ ರಾಖಿಗಳು, ಹಾಲಿನಪುಡಿಯ ಮೇಲಿನ ಜಿಎಸ್​ಟಿಯನ್ನು ಕೂಡ ರದ್ದುಪಡಿಸಲಾಗಿದೆ.

ಹೊಸ ತೆರಿಗೆ ನೀತಿ ಇದೇ ತಿಂಗಳ 26ರಿಂದ ಜಾರಿಗೆ ಬರಲಿದ್ದು, ಕಡಿತಗೊಂಡಿರುವ ತೆರಿಗೆಯ ವಸ್ತುಗಳು ಮೊದಲಿಗಿಂತಲೂ ಅಗ್ಗದ ಬೆಲೆಯಲ್ಲಿ ದೊರೆಯಲಿವೆ. ಇಂದಿನ ನಿರ್ಧಾರದಿಂದ 88 ವಸ್ತುಗಳ ಬೆಲೆಯಲ್ಲಿ ವ್ಯತ್ಯಯವಾಗಲಿದೆ.

ಮುಂದಿನ ಜಿಎಸ್‍ಟಿ ಕೌನ್ಸಿಲ್ ಸಭೆ ಆಗಸ್ಟ್ 4 ರಂದು ನಡೆಯಲಿದ್ದು, ಸಕ್ಕರೆ ಮೇಲಿನ ಸೆಸ್ ಬಗ್ಗೆ ಮುಂದಿನ ಸಭೆಯಲ್ಲಿ ನಿರ್ಧಾರವಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com