ವಿಜಯ್ ಮಲ್ಯಗೆ ಲಂಡನ್‌ ಕೋರ್ಟ್ ನಲ್ಲಿ ಮತ್ತೆ ಹಿನ್ನಡೆ

ವಿವಿಧ ರಾಷ್ಟ್ರೀಯ ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರುಪಾಯಿ ಸಾಲ ಪಡೆದು ಮರುಪಾವತಿಸದೆ ವಿದೇಶದಲ್ಲಿ....
ವಿಜಯ್ ಮಲ್ಯ
ವಿಜಯ್ ಮಲ್ಯ
ಲಂಡನ್: ವಿವಿಧ ರಾಷ್ಟ್ರೀಯ ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರುಪಾಯಿ ಸಾಲ ಪಡೆದು ಮರುಪಾವತಿಸದೆ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯಗೆ ಲಂಡನ್ ಕೋರ್ಟ್ ನಲ್ಲಿ ಮತ್ತೆ ಹಿನ್ನಡೆಯಾಗಿದೆ.
ತನ್ನ ಆಸ್ತಿಯನ್ನು ವಶಪಡಿಸಿಕೊಳ್ಳಲು ಲಂಡನ್‌ ಹೈಕೋರ್ಟ್ 13 ಬ್ಯಾಂಕ್ ಗಳಿಗೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅನುಮತಿ ನೀಡುವಂತೆ ಕೋರಿ ವಿಜಯ್ ಮಲ್ಯ ಸಲ್ಲಿಸಿದ್ದ ಅರ್ಜಿಯನ್ನು ಬ್ರಿಟನ್ ಕೋರ್ಟ್ ಇಂದು ವಜಾಗೊಳಿಸಿದೆ. ಇದರಿಂದ ಸಾಲ ವಸೂಲಿ ಮತ್ತು ಗಡಿಪಾರು ಭೀತಿ ಎದುರಿಸುತ್ತಿರುವ ವಿಜಯ್ ಮಲ್ಯಗೆ ಮತ್ತೆ ಹಿನ್ನಡೆಯಾಗಿದೆ.
ಐಡಿಬಿಐ ಬ್ಯಾಂಕ್ ಲಿ. ಮತ್ತು ಭಾರತೀಯ ಬ್ಯಾಂಕ್ ಒಕ್ಕೂಟ ಮಲ್ಯ ವಿರುದ್ಧ ಲಂಡನ್ ಕೋರ್ಟ್ ನಲ್ಲಿ ದಾವೆ ಹೂಡಿದ್ದು, ಸೊತ್ತು ವಶ ಮತ್ತು ಹರಾಜಿಗೆ ಅನುಮತಿ ಕೇಳಿದ್ದವು. ಅದರಂತೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಆ್ಯಂಡ್ರೂ ಹೆನ್ ಶಾ, ಮಲ್ಯ ಆಸ್ತಿ ವಶದ ಕುರಿತು ಭಾರತೀಯ ಕೋರ್ಟ್‌ ಮತ್ತು ಅರ್ಜಿದಾರರು ಸೂಕ್ತ ಕ್ರಮ ಕೈಗೊಳ್ಳಬಹುದು ಎಂದು ಆದೇಶ ನೀಡಿದ್ದರು.
ಲಂಡನ್‌ ಹೈಕೋರ್ಟ್‌ನ ಈ ಆದೇಶದಿಂದ ಭಾರತದ 13 ಬ್ಯಾಂಕ್‌ ಗಳು ಮೇಲುಗೈ ಸಾಧಿಸಿದಂತಾಗಿದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಬ್ಯಾಂಕ್‌ ಆಫ್‌ ಬರೋಡ, ಕಾರ್ಪೋರೇಷನ್‌ ಬ್ಯಾಂಕ್‌, ಫೆಡರಲ್‌ ಬ್ಯಾಂಕ್‌, ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌, ಜಮ್ಮು ಮತ್ತು ಕಾಶ್ಮೀರ್‌ ಬ್ಯಾಂಕ್‌, ಪಂಜಾಬ್‌ ಮತ್ತ ಸಿಂದ್‌ ಬ್ಯಾಂಕ್‌, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಯುನೈಟೆಡ್‌ ಬ್ಯಾಂಕ್‌ ಆಫ್‌ ಇಂಡಿಯಾ, ಜೆಎಂ ಫೈನಾಶ್ಶಿಯಲ್‌ ಅಸಿಸ್ಟ್‌ ರಿ ಕನ್‌ಸ್ಟ್ರಕ್ಷನ್‌ ಕಂ.ಪ್ರೈ.ಲಿ.ಗಳು ಇಂಗ್ಲೆಂಡ್‌ನಲ್ಲಿರುವ ಮಲ್ಯ ಆಸ್ತಿಯನ್ನು ಮುಟ್ಟುಗೋಲು ಹಾಕಲು ಅವಕಾಶ ಪಡೆದಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com