ಐಸಿಐಸಿಐ ಬ್ಯಾಂಕ್ ಮುಖ್ಯಸ್ಥೆ ಚಂದಾ ಕೊಚ್ಚರ್ ವಿರುದ್ಧ ಮತ್ತೊಂದು ಆರೋಪ

ಮಾರಿಷಸ್ ಮೂಲದ ಸಂಸ್ಥೆಗಳ ಮೂಲಕ 453 ಕೋಟಿ ರೂಪಾಯಿಗಳ ವಂಚನೆಯೆಸಗಿದ್ದಾರೆ ಎಂದು ...
ಚಂದಾ ಕೊಚ್ಚರ್
ಚಂದಾ ಕೊಚ್ಚರ್

ಮುಂಬೈ: ಮಾರಿಷಸ್ ಮೂಲದ ಸಂಸ್ಥೆಗಳ ಮೂಲಕ 453 ಕೋಟಿ ರೂಪಾಯಿಗಳ ವಂಚನೆಯೆಸಗಿದ್ದಾರೆ ಎಂದು ಷೇರುವಹಿವಾಟು ಕಾರ್ಯಕರ್ತ ಅರವಿಂದ್ ಗುಪ್ತಾ ಐಸಿಐಸಿಐ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕಿ ಚಂದಾ ಕೊಚ್ಚರ್ ಮತ್ತು ಅವರ ಪತಿ ದೀಪಕ್ ಹಾಗೂ ಎಸ್ಸಾರ್ ಗ್ರೂಪ ವಿರುದ್ಧ ಹೊಸ ಆರೋಪ ಮಾಡಿದ್ದಾರೆ.

ಈ ಸಂಬಂಧ ಅವರು ಪ್ರಧಾನಿ ನರೇಂದ್ರ ಮೋದಿ, ನಿಯಂತ್ರಕರು ಮತ್ತು ಸಚಿವಾಲಯಗಳಿಗೆ ಪತ್ರ ಬರೆದಿದ್ದು, ಚಂದಾ ಕೊಚ್ಚರ್ ಪತಿ ದೀಪಕ್ ತನ್ನ ಸಂಸ್ಥೆ ನ್ಯೂಪವರ್ ಗ್ರೂಪ್ ನಲ್ಲಿನ ಸಾಲಕ್ಕೆ ಹಣದ ವ್ಯವಸ್ಥೆ ಮಾಡಲು ಬ್ಯಾಂಕು ಮೂಲಕ ನಗದು ಪೂರೈಕೆ ವ್ಯವಸ್ಥೆ ಮಾಡಿದ್ದರು ಎಂದು ಗುಪ್ತಾ ಆರೋಪಿಸಿದ್ದಾರೆ.

ಹೀಗಾಗಿ ಸಾರ್ವಜನಿಕ ಸೇವೆಗಳಿಗಿರುವ ಐಸಿಐಸಿಐ ಬ್ಯಾಂಕಿನ ಹಣವನ್ನು ಸ್ವಹಿತಾಸಕ್ತಿಗೆ ಬಳಿಸಿಕೊಂಡಿರುವ ಆರೋಪದ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಚಂದಾ ಕೊಚ್ಚರ್ ಮತ್ತು ಅವರ ಪತಿ ವಿರುದ್ಧ ಸೂಕ್ತ ತನಿಖೆ ನಡೆಸಬೇಕೆಂದು ಗುಪ್ತಾ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಮಾರಿಷಸ್ ಮೂಲದ ಕಂಪೆನಿಗಳಾದ ಮ್ಯಾಟಿಕ್ಸ್ ಗ್ರೂಪ್ ಮತ್ತು ಫಸ್ಟ್ ಲ್ಯಾಂಡ್ ಹೋಲ್ಡಿಂಗ್ ನ ಮಾಲಿಕ ನಿಶಾಂತ್ ಕನೊಡಿಯಾ ಅವರು ಎಸ್ಸಾರ್ ಗ್ರೂಪ್ ಮೂಲಕ ನ್ಯೂಪವರ್ ಕಂಪೆನಿ ಹೂಡಿಕೆಗೆ ಹಣವನ್ನು ಪಡೆದುಕೊಂಡಿದೆ. ಡಿಸೆಂಬರ್ 2010ರಿಂದ 2012ರವರೆಗೆ ನಾಲ್ಕು ಬಾರಿ ಹಣದ ವಹಿವಾಟು ನಡೆದಿದೆ. ಎಸ್ಸಾರ್ ಗ್ರೂಪ್ ನ ಮಾಲಿಕ ಅವರ ಅಳಿಯ ರವಿ ರುಯಾ ಅವರ ಮೂಲಕ ಈ ವಹಿವಾಟು ನಡೆದಿದೆ ಎಂದು ಅರವಿಂದ್ ಗುಪ್ತಾ ಆರೋಪಿಸಿದ್ದಾರೆ.

ಆದರೆ ಈ ಆರೋಪವನ್ನು ಐಸಿಐಸಿಐ ಬ್ಯಾಂಕ್ ಮತ್ತು ಎಸ್ಸಾರ್ ಗ್ರೂಪ್ ನಿರಾಕರಿಸಿದೆ. ಎಸ್ಸಾರ್ ಗ್ರೂಪ್ ನ ವಕ್ತಾರರು ಹೇಳಿಕೆ ನೀಡಿ, ಫಸ್ಟ್ ಲ್ಯಾಂಡ್ ಹೋಲ್ಡಿಂಗ್ಸ್  ಜೊತೆ ಯಾವುದೇ ರೀತಿಯ ವಹಿವಾಟು ನಡೆಸಲು ಎಸ್ಸಾರ್ ಗ್ರೂಪ್ ಆಸಕ್ತಿ ಹೊಂದಿಲ್ಲ ಎಂದು ಹೇಳಿದೆ.

ಈ ಮಧ್ಯೆ ಚಂದಾ ಕೊಚ್ಚರ್ ವಾರ್ಷಿಕ ರಜೆ ಮೇಲೆ ತೆರಳಿದ್ದಾರೆ ಎಂದು ಐಸಿಐಸಿಐ ಬ್ಯಾಂಕು ತಿಳಿಸಿದೆ. ರಜೆ ತೆಗೆದುಕೊಳ್ಳುವುದು ಮೊದಲೇ ಯೋಜನೆಯಾಗಿದ್ದು, ಇನ್ನು ಕೆಲ ವಾರಗಳಲ್ಲಿ ಅವರು ಕೆಲಸಕ್ಕೆ ಹಾಜರಾಗಲಿದ್ದಾರೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com