ಐಡಿಬಿಐ ಬ್ಯಾಂಕ್ ಎಂಡಿ ಎಂಕೆ ಜೈನ್ ಆರ್‌ಬಿಐ ನ ನೂತನ ಡೆಪ್ಯುಟಿ ಗವರ್ನರ್

ಐಡಿಬಿಐ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕ ಎಂ. ಕೆ. ಜೈನ್ ಅವರು ರಿಸರ್ವ್ ಬ್ಯಾಂಕ್ ಡೆಪ್ಯುಟಿ ಗವರ್ನರ್ ನೇಮಕಗೊಂಡಿದ್ದಾರೆ.
ಎಂ.ಕೆ.ಜೈನ್
ಎಂ.ಕೆ.ಜೈನ್
Updated on
ನವದೆಹಲಿ: ಐಡಿಬಿಐ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕ ಎಂ. ಕೆ. ಜೈನ್ ಅವರು ರಿಸರ್ವ್ ಬ್ಯಾಂಕ್ ನೂತನ ಡೆಪ್ಯುಟಿ ಗವರ್ನರ್ ನೇಮಕಗೊಂಡಿದ್ದಾರೆ. ಇದಕ್ಕೂ ಮುನ್ನ ರಿಸರ್ವ್ ಬ್ಯಾಂಕ್ ಡೆಪ್ಯುಟಿ ಗವರ್ನರ್ ಆಗಿದ್ದ ಎಸ್.ಎಸ್. ಮುಂದ್ರಾ ಕಳೆದ ಜುಲೈನಲ್ಲಿ ತಮ್ಮ ಮೂರು ವರ್ಷದ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ್ದರು.
"ಐಡಿಬಿಐ ನ ಅನುಭವಿ ಬ್ಯಾಂಕರ್ ಮಹೇಶ್ ಕುಮಾರ್ ಜೈನ್,ಆರ್ ಬಿಐ ನ ಐ ಡೆಪ್ಯುಟಿ ಗವರ್ನರ್ ಆಗಿ ನೇಮಕವಾಗಿದ್ದಾರೆ.ಮುಂದಿನ ಮೂರು ವರ್ಷಗಳ ಕಾಲ ಅವರು ಈ ಹುದ್ದೆ ನಿರ್ವಹಿಸಲಿದ್ದಾರೆ " ಎಂದು ಕೇಂದ್ರ ಸರ್ಕಾರದ ಹಣಕಾಸು ವ್ಯವಹಾರ ಕಾರ್ಯದರ್ಶಿ ರಾಜೀವ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಮಾರ್ಚ್ 2017 ರಿಂದ ಐಡಿಬಿಐ ಬ್ಯಾಂಕ್ ನ ಎಂಡಿ ಆಗಿರುವ ಜೈನ್ ಬ್ಯಾಂಕಿಂಗ್ ಕ್ಷೇತ್ರದಲ್ಲಿ 30 ವರ್ಷಗಳ ಅನುಭವ ಹೊಂದಿದ್ದಾರೆ.ಐಡಿಬಿಐ ಬ್ಯಾಂಕ್ ನ ಎಂಡಿ ಹುದ್ದೆಗೇರುವ ಮುನ್ನ ಜೈನ್ ಚೆನ್ನೈ ಮೂಲದ ಇಂಡಿಯನ್ ಬ್ಯಾಂಕ್ ನ ಎಂಡಿ ಆಗಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com