2017-18ರಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳ ನಷ್ಟ 87 ಸಾವಿರ ಕೋಟಿ ರು.!

2017–18ನೇ ಸಾಲಿನ ಹಣಕಾಸು ವರ್ಷದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳು 87,300 ಕೋಟಿ ರುಪಾಯಿ ನಷ್ಟ ಅನುಭವಿಸಿದ್ದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: 2017–18ನೇ ಸಾಲಿನ ಹಣಕಾಸು ವರ್ಷದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳು 87,300 ಕೋಟಿ ರುಪಾಯಿ ನಷ್ಟ ಅನುಭವಿಸಿದ್ದು, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮೊದಲ ಸ್ಥಾನದಲ್ಲಿದೆ.
ಸರ್ಕಾರಿ ಸ್ವಾಮ್ಯದ ಪ್ರಮುಖ 19 ಬ್ಯಾಂಕ್ ಗಳ ಒಟ್ಟು ನಷ್ಟವು 87,357 ಕೋಟಿ ರುಪಾಯಿಗೆ ತಲುಪಿದೆ ಎಂದು ಕೇಂದ್ರ ಹಣಕಾಸು ಇಲಾಖೆ ಪ್ರಕಟಿಸಿದೆ.
ಹಗರಣದಲ್ಲಿ ಸಿಲುಕಿರುವ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಒಂದರ ನಷ್ಟದ ಮೊತ್ತವೇ  12,283 ಕೋಟಿ ಇದ್ದು, ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿರುವ ಐಡಿಬಿಐ ಕಳೆದ ಹಣಕಾಸು ವರ್ಷದ 8,237 ಕೋಟಿ ರುಪಾಯಿ ನಷ್ಟ ಅನುಭವಿಸಿದೆ.
ಸರ್ಕಾರಿ ಸ್ವಾಮ್ಯದ ಒಟ್ಟು 21 ಬ್ಯಾಂಕ್ ಗಳ ಪೈಕಿ ವಿಜಯ ಬ್ಯಾಂಕ್‌ (727 ಕೋಟಿ ರು.) ಮತ್ತು ಇಂಡಿಯನ್‌ ಬ್ಯಾಂಕ್‌(1,259 ಕೋಟಿ ರು.) ಮಾತ್ರವೇ ಲಾಭದಲ್ಲಿವೆ.
ಸರ್ಕಾರಿ ಸ್ವಾಮ್ಯದ ಅತಿ ದೊಡ್ಡ ಬ್ಯಾಂಕ್ ಎಂದೇ ಖ್ಯಾತಿ ಪಡೆದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಳೆದ ಹಣಕಾಸು ವರ್ಷದ 6,547 ಕೋಟಿ ರು ನಷ್ಟ ಅನುಭವಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com