2017-18 ಹಣಕಾಸು ವರ್ಷದಲ್ಲಿ 10, 767 ಕೋಟಿ ಬಹಿರಂಗಪಡಿಸದ ಆದಾಯ ಪತ್ತೆ: ಐಟಿ ಇಲಾಖೆ ವರದಿ

ಆದಾಯ ತೆರಿಗೆ ಇಲಾಖೆ 2017-18ರಲ್ಲಿ 10,000 ಕೋಟಿ ರು. ಬಹಿರಂಗಪಡಿಸದ ಆದಾಯವನ್ನು ಪತ್ತೆಹಚ್ಚಿದೆ..
2017-18 ಹಣಕಾಸು ವರ್ಷದಲ್ಲಿ 10, 767 ಕೋಟಿ ಬಹಿರಂಗಪಡಿಸದ ಆದಾಯ ಪತ್ತೆ: ಐಟಿ ಇಲಾಖೆ ವರದಿ
2017-18 ಹಣಕಾಸು ವರ್ಷದಲ್ಲಿ 10, 767 ಕೋಟಿ ಬಹಿರಂಗಪಡಿಸದ ಆದಾಯ ಪತ್ತೆ: ಐಟಿ ಇಲಾಖೆ ವರದಿ
ನವದೆಹಲಿ: ಆದಾಯ ತೆರಿಗೆ ಇಲಾಖೆ 2017-18ರಲ್ಲಿ 10,000 ಕೋಟಿ ರು. ಬಹಿರಂಗಪಡಿಸದ ಆದಾಯವನ್ನು ಪತ್ತೆಹಚ್ಚಿದೆ.. ಇದು ಈ ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ 20 ಪ್ರತಿಶತದಷ್ಟು ಹೆಚ್ಚಳವಾಗಿದೆ ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ಹಿರಿಯ ಅಧಿಕಾರಿಯೊಬ್ಬರು ಎ ಎನ್ ಐ ಗೆ ಹೇಳಿದ್ದಾರೆ.
ಆದಾಯ ತೆರಿಗೆ (ಇಂಟೆಲಿಜೆನ್ಸ್ ಅಂಡ್ ಕ್ರಿಮಿನಲ್ ಇನ್ವೆಸ್ಟಿಗೇಷನ್) ನ ನಿರ್ದೇಶನಾಲಯವು ಈ ಸಾಲಿನಲಿ 10,767 ಕೋಟಿ ರೂ. ಬಹಿರಂಗಪಡಿಸದ ಆದಾಯ ಪತ್ತೆಯಾಗಿದೆ. ಕಳೆದ  2016-17ರಲ್ಲಿ ಈ ಆದಾಯ ಪ್ರಮಾಣವು 9051 ಕೋಟಿ ರೂ. ಆಗಿತ್ತು.
ಪ್ಯಾನ್ ಕಾರ್ಡ್ ಇಲ್ಲದಿರುವುಕೆ, ಫಾರಿನ್ ಅಕೌಂಟ್ ಟ್ಯಾಕ್ಸ್ ಕಂಪ್ಲೈಯನ್ಸ್ ಆಕ್ಟ್ (ಎಫ್ಎಟಿಸಿಎ), ಆಟೊಮೋಟಿವ್ ಎಕ್ಸ್ಚೇಂಜ್ ಆಫ್ ಇನ್ಫೋ (ಎಇಒಐ), ಮತ್ತು ಕಾಮನ್ ರಿಪೋರ್ಟಿಂಗ್ ಸ್ಟ್ಯಾಂಡರ್ಡ್ (ಸಿಆರ್ಎಸ್) ಡೇಟಾದ ಪ್ರಕರಣಗಳ ಪರಿಶೀಲನೆ ಸಂದರ್ಭದಲ್ಲಿ  ಈ ಆದಾಯ ಪತ್ತೆಯಾಗಿದೆ.
ಐಟಿ ಇಲಾಖೆಯ ಮೂಲದ ಪ್ರಕಾರ ಈ ಸಾಲಿನಲ್ಲಿ ಎಫ್ಎಟಿಸಿಎ ಪ್ರಕರಣಗಳ ಸಂಖ್ಯೆ ಮೂರು ಪಟ್ಟು ಹೆಚ್ಚಳವಾಗಿದೆ. 3500ಕ್ಕೂ ಹೆಚ್ಚು ಎಫ್ಎಟಿಸಿಎ ಪ್ರಕರಣಗಳು ಈ ಸಾಲಿನಲ್ಲಿ ಬಹಿರಂಗವಾಗಿದೆ. ಇದರಿಂದಾಗಿ ಈ ಪ್ರಕರಣದಲ್ಲಿ ಬಹಿರಂಗವಾದ ಆದಾಯ ಪ್ರಮಾಣ ಸಹ ದ್ವಿಗುಣವಾಗಿದೆ.
ನವೆಂಬರ್ 2016ರ ಅಪನಗದೀಕರಣ ಬಳಿಕ ಎಇಒಐ / ಸಿಆರ್ಎಸ್ ಪ್ರಕರಣಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ ಎಂದು ಇಲಾಖೆ ಮೂಲಗಳು ಹೇಳಿದೆ. 2017-18 ಹಣಕಾಸು ವರ್ಷದಲ್ಲಿ 25.92 ಕೋಟಿ ರು., ಇದೆ.
ವರದಿಯ ಪ್ರಕಾರ, 6000 ಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com