ಬೆಂಗಳೂರು: ಇನ್ಮುಂದೆ ಮನೆ ಕೊಳ್ಳ ಬಯಸುವವರು ಕುಳಿತಲ್ಲಿಯೇ ಮನೆ ದಾಖಲೆ ಪರಿಶೀಲಿಸಬಹುದು

ನಗರದಲ್ಲಿ ಮನೆ ಕೊಳ್ಳುವ ಯೋಜನೆ ಹಾಕಿಕೊಂಡಿದ್ದರೆ, ಅಪಾರ್ಟ್ ಮೆಂಟ್ ಕೊಳ್ಳುವ ಮನಸ್ಸಿದ್ದರೆ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಗರದಲ್ಲಿ ಮನೆ ಕೊಳ್ಳುವ ಯೋಜನೆ ಹಾಕಿಕೊಂಡಿದ್ದರೆ, ಅಪಾರ್ಟ್ ಮೆಂಟ್ ಕೊಳ್ಳುವ ಮನಸ್ಸಿದ್ದರೆ ಸಂಬಂಧಪಟ್ಟ ಸ್ಥಳದ ದಾಖಲೆಗಳ ಬಗ್ಗೆ ನೀವು ಕುಳಿತಲ್ಲಿಯೇ ಮಾಹಿತಿ ಪಡೆಯಬಹುದು. ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ(ರೇರಾ), ರಾಜ್ಯದಲ್ಲಿನ 1,331 ಕಟ್ಟಡಗಳ 50,000ಕ್ಕೂ ಹೆಚ್ಚು ದಾಖಲೆಗಳನ್ನು ಸಾರ್ವಜನಿಕಗೊಳಿಸಿದೆ.

ಇದೇ ಮೊದಲ ಬಾರಿಗೆ ಸರ್ಕಾರಿ ಇಲಾಖೆ ಸ್ವಯಂಪ್ರೇರಿತವಾಗಿ ಸಾರ್ವಜನಿಕರಿಗೆ ನಿರ್ಮಾಣ ಕಟ್ಟಡಗಳ ಸ್ಥಳದ ದಾಖಲೆಗಳು ಸಾರ್ವಜನಿಕವಾಗಿ ಸಿಗುವಂತೆ ಮಾಡಿದೆ. ಇನ್ನು ಮುಂದೆ ಜನರು ಯಾವುದೇ ಪ್ರಾಜೆಕ್ಟ್ ಗಳಲ್ಲಿ ಹಣ ಹೂಡಿಕೆ ಮಾಡುವ ಮೊದಲು ಜನರು ಸರ್ಕಾರದ ವೆಬ್ ಸೈಟ್ (http://rera.karnataka.gov.in) ನಲ್ಲಿ ಸಂಬಂಧಪಟ್ಟ ಪ್ರಾಜೆಕ್ಟ್ ಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ತಪಾಸಣೆ ಮಾಡಬಹುದು ಎಂದು ರೇರಾ ಅಧಿಕಾರಿಯೊಬ್ಬರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.

ಪ್ರಾಸೆಕ್ಟ್ ಇರುವ ಸ್ಥಳ ಮತ್ತು ಪ್ರಾಜೆಕ್ಟ್ ಗೆ ಅನುಗುಣವಾಗಿ ಅಗತ್ಯ ದಾಖಲೆಗಳು ಬದಲಾಗುತ್ತಿರುತ್ತವೆ.

ಹೇಗೆ ಮಾಹಿತಿ ಸಿಗುತ್ತದೆ:
ಸರ್ಕಾರದ ಇಲಾಖೆಯ ಪೋರ್ಟಲ್ ತೆರೆದಾಗ ಅನುಮೋದನೆಗೊಂಡ ಪ್ರಾಜೆಕ್ಟ್ ಗಳ ಎಲ್ಲಾ ದಾಖಲೆಗಳು ಎಂಬ ಸ್ಕ್ರಾಲ್ ಬರುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು. ಇದಕ್ಕಾಗಿ ಬಳಕೆದಾರರು ಯೂಸರ್ ಐಡಿಯನ್ನು ಸೃಷ್ಟಿ ಮಾಡಬೇಕು. ಆಗ ಅಲ್ಲಿ ಪ್ರಾಜೆಕ್ಟ್ ಹೆಸರು ಮತ್ತು ನಿರ್ಮಾಣಕಾರರ ಹೆಸರು ಬರುತ್ತದೆ. ಇಲ್ಲಿ ಕ್ಲಿಕ್ ಮಾಡಿದರೆ ಪ್ರಾಜೆಕ್ಟ್ ನ ವಿವರಗಳು ಬರುತ್ತವೆ. ಅಥವಾ ರೇರಾ ಹೋಂ ಪೇಜ್ ನಲ್ಲಿರುವ ಪ್ರಾಜೆಕ್ಟ್ ಪಟ್ಟಿ ಮೇಲೆ ಕ್ಲಿಕ್ ಮಾಡಿದರೆ ವ್ಯೂ ಪ್ರಾಜೆಕ್ಟ್ ಡಾಕ್ಯುಮೆಂಟ್ ಸಿಗುತ್ತದೆ. ಯೂಸರ್ ಐಡಿ ಈಗಾಗಲೇ ಬಳಸಿಕೊಂಡಿರುವ ರಿಯಲ್ ಎಸ್ಟೇಟ್ ಏಜೆಂಟ್ ಗಳು ಅಥವಾ ಪ್ರವರ್ತಕರು ಕೂಡ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com